ಗಲ್ಫ್ ದೇಶಗಳು ಅಮೆರಿಕದ ‘ಅಕ್ರಮ’ ದಾಳಿಗೆ ಬೆಂಬಲ ನೀಡಬಾರದು: ಇರಾನ್ ಆಗ್ರಹ

ಟೆಹ್ರಾನ್ ಮಾ.26: ಇರಾನ್ ಜನರ ಮೇಲೆ ನಡೆಸುತ್ತಿರುವ ಸಂಪೂರ್ಣ ಅಕ್ರಮ, ನ್ಯಾಯಬಾಹಿರ ಮತ್ತು ಅಸಮರ್ಥನೀಯ ದಾಳಿಯಿಂದ ತಮ್ಮನ್ನು ದೂರವಿಟ್ಟುಕೊಳ್ಳುವಂತೆ ಪರ್ಷಿಯನ್ಕ ಗಲ್ಫ್ ದೇಶಗಳಿಗೆ ಇರಾನ್ ಕರೆ ನೀಡಿದೆ.

ಈ ಕುರಿತು ವಿವರವಾದ ಹೇಳಿಕೆ ನೀಡಿರುವ ಇರಾನ್ ವಿದೇಶ ಸಚಿವ ಅಬ್ಬಾಸ್ ಅರಾಗ್ಚಿ ಗಲ್ಫ್ ದೇಶಗಳು ಇರಾನ್ ಮೇಲಿನ ದಾಳಿಯನ್ನು ಖಂಡಿಸದಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇರಾನ್ ರಾಜ್ಯ ಟೆಲಿವಿಷನ್‌ಗೆ ನೀಡಿದ ವಿಶೇಷ ಹೇಳಿಕೆಯಲ್ಲಿ ಅರಾಗ್ಚಿ ಪ್ರಾದೇಶಿಕ ದೇಶಗಳಿಗೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ಅವರು ಅಮೆರಿಕದಿಂದ ದೂರವಿರಬೇಕು. ಇರಾನ್ ಜನರ ಮೇಲೆ ಅಮೆರಿಕ ನಡೆಸುತ್ತಿರುವ ಈ ದಾಳಿಯಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು. ಇದು ಸಂಪೂರ್ಣವಾಗಿ ಅಕ್ರಮ, ಸಂಪೂರ್ಣ ನ್ಯಾಯಬಾಹಿರ ಮತ್ತು ಯಾವುದೇ ಕಾನೂನು ಮಾನ್ಯತೆ ಇಲ್ಲದ್ದು. ದುರಂತವೆಂದರೆ, ಪರ್ಷಿಯನ್ ಗಲ್ಫ್ ದೇಶಗಳು ಇದನ್ನು ಕೂಡ ಖಂಡಿಸಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದ ಯುದ್ಧ ಗುರಿಗಳು ವಿಫಲವಾಗಿವೆ. ಇರಾನ್ ತನ್ನ ಭದ್ರತೆಗೆ ಅಡ್ಡಿಯಾಗಲು ಯಾವುದೇ ದೇಶಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಗತ್ತಿಗೆ ತೋರಿಸಿದೆ. ನಾವು ಯುದ್ಧ ಬಯಸುತ್ತಿಲ್ಲ, ಆದರೆ ಶಾಶ್ವತ ಶಾಂತಿ ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಇರಾನ್ ಅಮೆರಿಕದಿಂದ ಬಂದ ನಿರ್ದಿಷ್ಟ ಪ್ರಸ್ತಾವಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ ಅವರು, ಅಮೆರಿಕದೊಂದಿಗೆ ನೇರ ಮಾತುಕತೆಗಳು ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಧ್ಯಸ್ಥಿಕೆದಾರರ ಮೂಲಕ ಬಂದ ಸಂದೇಶಗಳು ‘ಮಾತುಕತೆ’ ಎಂದು ಅರ್ಥವಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

More articles

Latest article

Most read