ಪಾಕಿಸ್ತಾನ ಮೂಲಕ ಬಂದ ಟ್ರಂಪ್‌ ಸಂಧಾನ ಪ್ರಸ್ತಾಪ ತಿರಸ್ಕಾರ: ಇದು ವಂಚನೆ ಎಂದ ಇರಾನ್

ಟೆಹ್ರಾನ್, ಮಾರ್ಚ್ 25: ಪಶ್ಚಿಮ ಏಷ್ಯಾ ಯುದ್ಧದ ನಡುವೆ ಅಮೆರಿಕ ಕಳುಹಿಸಿದ ರಾಜತಾಂತ್ರಿಕ ಸಂದೇಶಗಳನ್ನು ವಂಚನೆಯ ಯೋಜನೆ ಎಂದು ಇರಾನ್ ಸಂಪೂರ್ಣವಾಗಿ ತಿರಸ್ಕರಿಸಿದೆ. ಪಾಕಿಸ್ತಾನ ಮೂಲಕ ಬಂದ ಅಮೆರಿಕದ ಸಂದೇಶಗಳ ಮೇಲೆ ಇರಾನ್‌ಗೆ ಯಾವುದೇ ನಂಬಿಕೆ ಇಲ್ಲ ಎಂದು ಉನ್ನತ ರಾಜಕೀಯ ಮೂಲಗಳು ಸ್ಪಷ್ಟಪಡಿಸಿವೆ.

Tehran Timesಗೆ ಮಾತನಾಡಿದ ಇರಾನ್‌ನ ಹಿರಿಯ ರಾಜಕೀಯ ಮುಖಂಡರು, “ಅಮೆರಿಕ ಇರಾನ್‌ಗೆ ಸಂದೇಶ ಕಳುಹಿಸುವ ಪ್ರಯತ್ನಗಳು ಸಂಪೂರ್ಣ ವಂಚನೆಯ ಯೋಜನೆಯಾಗಿದೆ. ಇಂತಹ ಸಂದೇಶಗಳ ಮೇಲೆ ಇರಾನ್‌ಗೆ ಯಾವುದೇ ವಿಶ್ವಾಸವಿಲ್ಲ” ಎಂದು ಹೇಳಿದ್ದಾರೆ.

ಅಮೆರಿಕದ ಆಕ್ರಮಣಕಾರಿ ನಿಲುವು ಇನ್ನೂ ಬದಲಾಗಿಲ್ಲ ಎಂದು ಇರಾನ್ ಗಮನಿಸಿದೆ. ಅವರು ವಂಚನೆಯ ಕ್ರಮಗಳು ಅಥವಾ ಹೊಸ ನೆಲದ ಆಕ್ರಮಣಗಳನ್ನು ಪ್ರಯತ್ನಿಸುತ್ತಿರುವ ಲಕ್ಷಣಗಳು ಕಾಣುತ್ತಿವೆ ಇರಾನ್‌ ಮುಖಂಡರು ಹೇಳಿದ್ದಾರೆ.

ಟ್ರಂಪ್ ಪಾಕಿಸ್ತಾನ ಮೂಲಕ ಇರಾನ್ ಯುದ್ಧ ನಿಲ್ಲಿಸಲು ಸಿದ್ಧವಿದೆಯೇ ಎಂದು ಪರೀಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಅವರಿಗೆ ಸಂಘಟಿತ ಮತ್ತು ದೃಢ ಪ್ರತಿಕ್ರಿಯೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುಂಚೆ ಟ್ರಂಪ್ ಕಳುಹಿಸಿದ್ದ ರಾಯಭಾರಿಗಳಾದ ಸ್ಟೀವ್‌ ವಿಟ್ಕೋಫ್‌ ಮತ್ತು ಜರೇಡ್‌ ಕುಶ್ನರ್ ಅವರನ್ನು ಇರಾನ್‌ ಸಂಧಾನಕ್ಕೆ ಸೂಕ್ತ ವ್ಯಕ್ತಿಗಳೆಂದು ಪರಿಗಣಿಸುತ್ತಿಲ್ಲ. ಈ ಇಬ್ಬರ ಮೂಲಕ ಸಂದೇಶ ವಿನಿಮಯ ಮಾಡಿಕೊಳ್ಳುವುದಕ್ಕೆ ಇರಾನ್ ಸಿದ್ಧವಿಲ್ಲ ಎಂಬುದು ತಿಳಿದುಬಂದಿದೆ.

ಈ ನಡುವೆ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಇರಾನ್ ಅಮೆರಿಕ ಮತ್ತು ಇಸ್ರೇಲ್‌ನ ಆಕ್ರಮಣಕ್ಕೆ ತೀವ್ರ ಪ್ರತಿಕ್ರಿಯೆ ನೀಡುತ್ತಿದೆ. ಅಮೆರಿಕ ರಾಜತಾಂತ್ರಿಕ ಸಂಧಾನದ ಬಗ್ಗೆ ಮಾತನಾಡುತ್ತಿದ್ದರೂ, ಇರಾನ್ ಅದನ್ನು ಕೇವಲ ವಂಚನೆ ಎಂದು ತಿರಸ್ಕರಿಸುತ್ತಿದೆ. ಇದರಿಂದ ಯುದ್ಧ ಇನ್ನಷ್ಟು ಲಂಭಿಸುವ ಸಾಧ್ಯತೆ ಹೆಚ್ಚಾಗಿದೆ.

More articles

Latest article

Most read