ಬೆಂಗಳೂರು :- ಇರಾನ್ ಮತ್ತು ಇಸ್ಲ್ ಯುದ್ಧದಲ್ಲಿ ಕರ್ನಾಟಕದ ಉದ್ಯಮಿಗಳು, ರಾಜಕಾರಣಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಸೇರಿ ಒಟ್ಟು 100 ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಅದರಲ್ಲಿ ದುಬೈನಲ್ಲಿಯೆ ಹೆಚ್ಚಾಗಿ ಸಿಲುಕಿಕೊಂಡಿದ್ದಾರೆ. ಈ ಸಂಬಂದ ಮುಖ್ಯಮಂತ್ರಿಗಳ ಕಛೇರಿಯಿಂದ ನೀಡಲಾದ ಅಂಕಿಅಂಶಗಳು ಈ ಕೆಳಗಿನಂತಿವೆ:
ಯುದ್ಧ ಆರಂಭವಾಗುವ ಮೊದಲು ರಾಜ್ಯದಿಂದ ದುಬೈ ಮತ್ತು ಇತರೆ ಗಲ್ಫ್ ದೇಶಗಳ ಪಟ್ಟಣಗಳಿಗೆ ತೆರಳಿದ್ದ ಕನ್ನಡಿಗರು ಅಲ್ಲೇ ಉಳಿಯುವಂತಾಗಿದೆ. ಬಹುತೇಕ ವಿಮಾನಗಳು ರದ್ದಾಗಿರುವುದರಿಂದ ಸಮಸ್ಯೆಯಾಗಿದೆ. ಹೆಚ್ಚಾಗಿ ಬಳ್ಳಾರಿ ಜಿಲ್ಲೆಯ ಸುಮಾರು 32 ಜನರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಹಾಗೆಯೇ ಬೆಂಗಳೂರಿನ 25, ಚಿಕ್ಕಬಳ್ಳಾಪುರದ 2, ಚಿಕ್ಕಮಗಳೂರು 5, ಚಿತ್ರದುರ್ಗ 2, ದಕ್ಷಿಣ ಕನ್ನಡ 3, ದಾವಣಗೆರೆ 9 ಕಲಬುರ್ಗಿ 2, ಶಿವಮೂಗ್ಗ 3, ಕೊಡಗು 4, ತುಮಕೂರು 1, ಉಡುಪಿ 2 ವಿಜಯಪೂರ 4, ರಾಯಚೂರು 3 ಮತ್ತು ಇತರೆ ಜಿಲ್ಲೆಯಿಂದ 3 ಒಟ್ಟು 100 ಮೂಲ ನಿವಾಸಿಗಳು ಈ ಯುದ್ಧದಲ್ಲಿ ಸಿಲುಕಿಕೊಂಡಿದ್ದಾರೆ. ದುಬೈ ಅಷ್ಟೆ ಅಲ್ಲದೆ ಬಹ್ರೇನ್ ದೇಶದಲ್ಲಿ ಹಾಸನದ 4ಜನ, ಕೊಡಗು 1, ಉಡುಪಿಯ 3 ಮತ್ತು ಇತರೆ ಜಿಲ್ಲೆಯ 1 ಒಟ್ಟು 9 ಜನ ಕನ್ನಡಿಗರು ಸಿಲುಕಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಉದ್ಯಮಿ ಕೆವಿಎನ್ ಶಿವು ಮತ್ತು ರಾಯಚೂರು ಜಿಲ್ಲೆಯ ಮಕ್ಕಳ ತಜ್ಞ ಡಾ. ಕೆ.ಶಿವರಾಜ ಮತ್ತು ಅವರ ಪತ್ನಿ ಜೋತಿ, ಬಳ್ಳಾರಿ ಶಾಸಕ ಭರತ್ ರೆಡ್ಡಿ, ತಮ್ಮ ಕುಟುಂಬದ ಐವರು ಮತ್ತು ಇನ್ನು ಅನೇಕರು ಕನ್ನಡಿಗರು ಇದ್ದಾರೆ.
ಮೈಸುರು ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ದುಬೈನಲ್ಲಿ ಸಿಲುಕಿದ್ದಾರೆ. ದುಬೈನಲ್ಲಿ ವಿಮಾನಗಳ ಹಾರಟವನ್ನು ನಿಲ್ಲಿಸಿವೆ. ಹೀಗಾಗಿ ದುಬೈ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿವೆ ಮತ್ತು ನಾವೆಲ್ಲರೂ ಸುರಕ್ಷಿತವಾಗಿದ್ದೆವೆ ಎಂದು ವಿಡಿಯೊ ಕಾಲ್ ಮೂಲಕ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು


