ಟೆಹರಾನ್‌ ನಲ್ಲಿರುವ ಭಾರತೀಯರು ನೆರವಿಗಾಗಿ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚನೆ

Most read

ನವದೆಹಲಿ: ಇರಾನ್‌ ಇಸ್ರೇಲ್‌ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟೆಹರಾನ್‌ ನಲ್ಲಿರುವ ಭಾರತೀಯರು ಕೂಡಲೇ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚನೆ ನೀಡಿದೆ. ಭಾರತೀಯರ ಸಹಾಯಕ್ಕಾಗಿ ಟೋಲ್ ಫ್ರೀ ನಂಬರ್‌ ಗಳನ್ನು ನೀಡಲಾಗಿದೆ.

ನಿಯಂತ್ರಣ ಕೊಠಡಿಯ ಸಂಪರ್ಕದ ವಿವರಗಳು ಹೀಗಿವೆ.

1800118797 (ಟೋಲ್-ಫ್ರೀ), +91-11-23012113, +91-11-23014104, +91-11-23017905 +91-9968291988 (ವಾಟ್ಸಾಪ್) ಮತ್ತು [email protected]ಗೆ ಮೇಲ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜತೆಗೆ ಟೆಹರಾನ್‌ ನಲ್ಲಿರುವ ಭಾರತದ ರಾಯಭಾರ ಕಚೇರಿಯೂ 24×7 ತುರ್ತು ಸಹಾಯವಾಣಿಯನ್ನು ಸ್ಥಾಪಿಸಿದೆ.

ಟೆಹರಾನ್‌ ತುರ್ತು ಸಹಾಯವಾಣಿ ಸಂಖ್ಯೆ: +98 9128109115, +98 9128109109; ವಾಟ್ಸಾಪ್ ಸಂಖ್ಯೆ: +98 901044557, +98 9015993320, +91 8086871709, ಬಂದರ್ ಅಬ್ಬಾಸ್: +98 9177699036, ಜಹೇದನ್: +98 9396356649 ಸಂಖ್ಯೆಗೂ ಸಂಪರ್ಕಿಸಬಹುದು ಎಂದು ಅದು ತಿಳಿಸಿದೆ.

ಶುಕ್ರವಾರ ಮುಂಜಾನೆಯಿಂದ ಇರಾನ್‌ ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ನಂತರ ಇರಾನ್, ಇಸ್ರೇಲ್ ಮೇಲೆ ಪ್ರತಿ ದಾಳಿಗಳನ್ನು ಆರಂಭಿಸಿದೆ.

More articles

Latest article