IPL 2024ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ: ಚೆನೈನಲ್ಲಿ ಫೈನಲ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಎರಡನೇ ಹಂತದ ವೇಳಾಪಟ್ಟಿಯನ್ನ ಬಿಸಿಸಿಐ ಸೋಮವಾರ ಪ್ರಕಟಿಸಿದೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು.

ಸಂಪೂರ್ಣ ವೇಳಾಪಟ್ಟಿಯ ಪ್ರಕಾರ, ನಡೆಯುತ್ತಿರುವ ಋತುವಿನ ಅಂತಿಮ ಪಂದ್ಯವು ಮೇ 26 ರಂದು ಚೆನ್ನೈನಲ್ಲಿ ನಡೆಯಲಿದೆ. ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಕ್ರಮವಾಗಿ ಮೇ 21 ಮತ್ತು 22 ರಂದು ಅಹಮದಾಬಾದ್ನಲ್ಲಿ ನಡೆಯಲಿವೆ. ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 24ರಂದು ಚೆಪಾಕ್ನಲ್ಲಿ ನಡೆಯಲಿದೆ.

ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕಗಳಿಗಾಗಿ ಕಾಯುತ್ತಿರುವ ಭಾರತೀಯ ಕ್ರಿಕೆಟ್ ಮಂಡಳಿ ಏಪ್ರಿಲ್ 7 ರವರೆಗೆ ಪಂದ್ಯಾವಳಿಯ ಮೊದಲ ಎರಡು ವಾರಗಳ ವೇಳಾಪಟ್ಟಿಯನ್ನ ಮಾತ್ರ ಪ್ರಕಟಿಸಿತ್ತು. ಈಗ ಚುನಾವಣಾ ಆಯೋಗವು ಅಧಿಕೃತ ಮತದಾನದ ದಿನಾಂಕಗಳನ್ನು ಹೊರತಂದಿದೆ, ಬಿಸಿಸಿಐ, ಸ್ಥಳೀಯ ಅಧಿಕಾರಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದ ನಂತರ, ಋತುವಿನ ಉಳಿದ ಅವಧಿಗೆ ವೇಳಾಪಟ್ಟಿಯನ್ನ ಅಂತಿಮಗೊಳಿಸಿದೆ.

More articles

Latest article

Most read