ಕೋಲಾರ : ಶ್ರೀನಿವಾಸಪುರ ತಾಲ್ಲೂಕು ರಾಯಲ್ ಪಾಡು ಪೊಲೀಸ್ ಠಾಣೆಯ ಪೊಲೀಸರು ಅಂತರ ರಾಜ್ಯ ಸುಲಿಗೆಕೋರರಿಬ್ಬರನ್ನು ಬಂಧಿಸಿ ಅವರಿಂದ 8,50,000 ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ
ಬಂಧಿತರನ್ನು ನೆರೆಯ ಹಿಂದೂಪುರ ತಾಲೂಕು ಲೇಪಾಕ್ಷಿ ಗ್ರಾಮದ ಸಿಂಹಾದ್ರಿ(21) ಹಾಗೂ ಗೌರಿಬಿದನೂರು ತಾಲ್ಲೂಕು ನಗರಗೆರೆ ಗ್ರಾಮದ ಶಿವರಾಜ್ ಕುಮಾರ ( 25) ಎನ್ನಲಾಗಿದೆ.
ಈ ಇಬ್ಬರು ವ್ಯಕ್ತಿಗಳು ಕಳೆದ ಮಾರ್ಚ್ ಹತ್ತರಂದು ರಾಯಲ್ ಪಾಡು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬರುವ ನಂಬವಾರುಪಲ್ಲಿ ಗ್ರಾಮಕ್ಕೆ ತಮ್ಮ ವಿಚಿತ್ರ ವಾಹನದಲ್ಲಿ ತೆರಳಿ ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿ ಮಹಿಳೆಯರನ್ನು ಮಾತನಾಡಿಸುವ ನೆಪದಲ್ಲಿ ತಾವು ಓಲ್ಡ್ ಏಜ್ ಪೆನ್ಷನ್ ಮಾಡಿಸಿಕೊಡುತ್ತೇವೆಂದು ಮಹಿಳೆಗೆ ತಿಳಿಸುತ್ತಾ ಆಕೆಯ ಆಧಾರ್ ಕಾರ್ಡ್ ಹಾಗೂ ಫೋಟೋ ಒಂದನ್ನು ಪಡೆಯುವ ಸಲುವಾಗಿ ಮನೆಯ ಒಳಗೆ ಪ್ರವೇಶಿಸಿ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಒಡವೆ , ಹಣ ಪಡೆದು ಪಡೆದು ಕ್ಷಣಮಾತ್ರದಲ್ಲಿ ಅಲ್ಲಿಂದ ಪರಾರಿ ಯಾಗಿದ್ದರು.
ಸಿಪಿಐ ಶಿವಕುಮಾರ್ ಪಿಎಸ್ಐ ರಾಮು ಮತ್ತವರ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸದರಿ ಆರೋಪಿಗಳು ನೆರೆಯ ಆಂಧ್ರಪ್ರದೇಶದ ಬಿ ಕೋತ್ತಕೋಟ ಗ್ರಾಮದಲ್ಲಿಯೂ ಸಹ ಇದೇ ರೀತಿ ಮಹಿಳೆಯೊಬ್ಬರಿಗೆ ವಂಚಿಸಿ ಅವರ ಬಳಿ ಇದ್ದ 32 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

