ಬೆಂಗಳೂರು: ರಾಜ್ಯದಲ್ಲಿ ಒಳಮೀಸಲಾತಿ ಅನುಷ್ಠಾನ ಗೊಳಿಸಲು ಇಂದು ಮಾನ್ಯ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ (MRPS) ಮಾದಿಗ ದಂಡೋರದ ರಾಷ್ಟ್ರೀಯ ಅಧ್ಯಕ್ಷರಾದ ಮಂದ ಕೃಷ್ಣ ಮಾದಿಗ ಅವರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೇಟಿ ಮಾಡಿ ಒತ್ತಾಯಿಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಮಾದಿಗ ಅವರು ಸುಪ್ರೀಂ ಕೋರ್ಟ್ ನ ಆದೇಶದಂತೆ ಸರ್ಕಾರ ಒಳಮೀಸಲಾತಿ ಅನುಷ್ಠಾನ ಮಾಡಬೇಕು ಈಗಾಗಲೇ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ರಚಿಸಿರುವ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಸಮೀಕ್ಷೆ ಮಾಡಬೇಕು ಪರಿಶಿಷ್ಟ ಜಾತಿಯ AK, AD, AA ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ತೆಗೆದುಕೊಂಡು ನಿರ್ದಿಷ್ಟ ಉಪ ಜಾತಿಯನ್ನು ಮಾದಿಗ ಸಮುದಾಯದವರು ನಮೂದಿಸಬೇಕು ಎಂದರು.
ರಾಜ್ಯದ 12 ಜಿಲ್ಲೆಗಳಲ್ಲಿ AK, AD, AA, ಸಮಸ್ಯೆ ಹೆಚ್ಚಾಗಿದ್ದು ಸಮುದಾಯದವರು ನಿರ್ದಿಷ್ಟ ಉಪ ಜಾತಿಯ ಮಾದಿಗ ಎಂದು ನಮೂದಿಸಿಬೇಕು. ಸರ್ಕಾರ ನೀಡಿರುವ ಎರಡು ತಿಂಗಳ ಗಡುವಿನ ಒಳಗಡೆ ಮುಗಿಸಬೇಕು. ಈಗಾಗಲೇ ತೆಲಂಗಾಣ ಆಂದ್ರಪ್ರದೇಶದ ರಾಜ್ಯದಲ್ಲಿ ಅನುಷ್ಠಾನ ವಾಗುತ್ತಿದ್ದು ಕರ್ನಾಟಕ ರಾಜ್ಯದಲ್ಲಿಯೂ ತಾವು ನೀಡಿರುವ ನಿರ್ದಿಷ್ಟ ಸಮಯದ ಒಳಗೆ ಅನುಷ್ಠಾನ ಮಾಡಬೇಕು ಶೋಷಿತ ಸಮುದಾಯವಾದ ಮಾದಿಗ ಸಮುದಾಯ ಆರ್ಥಿಕವಾಗಿ, ಸಾಮಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಹಿಂದುಳಿದಿದ್ದು ನಮಗೆ ಬರಬೇಕಾದ ಮೀಸಲಾತಿ ಅನುಷ್ಠಾನ ವಾದಾಗ ಮಾತ್ರ ನಮಗೆ ನ್ಯಾಯ ದೊರೆಯಲಿದೆ ಎಂದರು.
ಮುಂದಿನ ಏಪ್ರಿಲ್ ನ ಒಂದು ತಿಂಗಳು ರಾಜ್ಯದಲ್ಲಿಯೇ ಇದ್ದು ಎಲ್ಲಾ ಜಿಲ್ಲೆಗಳಲ್ಲಿ ಇದರ ಸಾದಕ ಬಾದಕಗಳ ಕುರಿತು ಚರ್ಚೆ ನಡೆಸಲಿದ್ದೇನೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸಿ ಮುಂದಿನ ಅನುಷ್ಠಾನ ಕುರಿತು ಹೋರಾಟ ಮುಂದುವರೆಯಲಿದೆ. ರಾಜ್ಯದಲ್ಲಿ ಸದಾಶಿವ ಆಯೋಗದ ವರದಿಯಯ ನಿರ್ದಿಷ್ಟ ವಾದ ಅಂಕಿ ಅಂಶಗಳಿದ್ದು ಅದರ ಕುರಿತು ಸರ್ಕಾರ ಪರೀಶೀಲಿಸಿ ಪರಿಗಣಿಸಬೇಕಿತ್ತು. ಆದರೂ ಪರಿಗಣಿಸದಿರುವುದು ವಿಷಾದನೀಯ. ಈಗ ಮತ್ತೊಮ್ಮೆ ಸಮೀಕ್ಷೆ ಮಾಡಿ ಅಂಕಿ ಆಂಶಗಳ ಸಂಗ್ರಹಿಸಿ ಸರಿಯಾದ ಸಮಯಕ್ಕೆ ಯಾವುದೇ ಗಡುವು ಮೀರದಂತೆ ಅನುಷ್ಠಾನ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಬಿ. ನರಸಪ್ಪ ದಂಡೋರ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜೆ ಎಂ ದೇವರಾಜ್, ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಲಗಾವ್, ಹಿರಿಯ ರಾಜ್ಯ ಉಪಾಧ್ಯಕ್ಷ ಹುಲುಗಪ್ಪ, ರಾಜ್ಯ ಉಪಾಧ್ಯಕ್ಷ ಡಾ. ಎಸ್ ರಾಮಕೃಷ್ಣ, ಉಪಾಧ್ಯಕ್ಷ ಗಣೇಶ ದುಪ್ಪಳ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಹಾಸನ, ರಾಜ್ಯ ವಕ್ತಾರ ವೆಂಕಟೇಶ್ ಕತ್ತಿ, ರಾಜ್ಯ ವಕ್ತಾರ ಮತ್ತು ಉತ್ತರ ಕರ್ನಾಟಕ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ, ಬೆಂಗಳೂರು ಜಿಲ್ಲಾಧ್ಯಕ್ಷ ತ್ರಿಲೋಕ ಚಂದರ್ ಮುಂತಾದವರು ಉಪಸ್ಥಿತರಿದ್ದರು.