ಇಂದೂಧರ ಹೊನ್ನಾಪುರ, ಸೀತವ್ವ ಜೋಡಟ್ಟಿ, ಮಾವಳ್ಳಿ ಶಂಕರ್ ಮೊದಲಾದವರಿಗೆ 2023-2025 ರವರೆಗಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರಕಟ

Most read

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಮತ್ತು 2025ರ ಪ್ರಶಸ್ತಿಗೆ ಸಂಬಂಧಿಸಿದಂತೆ ಅರ್ಹ ಪುರಸ್ಕೃತರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ದಿನಾಂಕ:14.04.2025ರಂದು ಡಾ.ಬಿ ಆರ್ ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಈ ಕೆಳಕಂಡ ಸಾಧಕರಿಗೆ 2023, 2024 ಮತ್ತು 2025ನೇ ಸಾಲಿನ ಡಾ.ಬಿ ಆರ್ ಅಂಬೇಡ್ಕರ್ ಪ್ರಶಸ್ತಿಯನ್ನು ವಿತರಿಸಿ, ಗೌರವಿಸಲಾಗುತ್ತದೆ.

2023ನೇ ಸಾಲಿಗೆ:
ಹರಿಹರಾನಂದ ಸ್ವಾಮಿ(ಸಮಾಜಸೇವೆ); ಇಂದೂಧರ ಹೊನ್ನಾಪುರ (ಪತ್ರಿಕೋದ್ಯಮ); ರುದ್ರಪ್ಪ ಹನಗವಾಡಿ (ಆಡಳಿತ)
ಸೀತವ್ವ ಜೋಡಟ್ಟಿ (ದೇವದಾಸಿ ವಿಮೋಚನೆ) ಕೆ. ಪುಂಡಲೀಕರಾವ್ ಶೆಟ್ಟಿ ಬಾ (ಸಮಾಜ ಸೇವೆ/ರಾಜಕೀಯ)

2024 ನೇ ಸಾಲಿಗೆ:
ಶ್ರೀಧರ ಕಲಿವೀರ (ಹೋರಾಟ); ಮಲ್ಲಾಜಮ್ಮ (ಸಮಾಜ ಸೇವೆ/ರಾಜಕೀಯ); ರಾಮದೇವ ರಾಕೆ (ಪತ್ರಿಕೋದ್ಯಮ); ವೈ.ಬಿ.ಹಿಮ್ಮಡಿ (ಸಾಹಿತ್ಯ/ಸಮಾಜ ಸೇವೆ) ಲಕ್ಷ್ಮೀಪತಿ ಕೋಲಾರ (ಸಾಹಿತ್ಯ/ಸಂಘಟನೆ)

2025ನೇ ಸಾಲಿಗೆ:
ದತ್ತಾತ್ರೇಯ ಇಕ್ಕಳಗಿ (ಪ್ರಕಾಶನ); ಮಾವಳ್ಳಿ ಶಂಕರ್ (ಹೋರಾಟ); ಎಫ್.ಹೆಚ್.ಜಕ್ಕಪ್ಪನವರ್ (ಹೋರಾಟ); ಹೊನ್ನೂರು ಗೌರಮ್ಮ (ಜನಪದ ಕಲೆ) ಈರಪ್ಪ (ದಲಿತ ಹೋರಾಟ)

More articles

Latest article