ಕೋರಮಂಗಲದಲ್ಲಿ ಇಂಡಿಕೇಟರ್ ಗಲಾಟೆ: ಮೂವರು ಪುಂಡರ ಬಂಧನ

ಬೆಂಗಳೂರು: ಇಂಡಿಕೇಟರ್ ವಿಷಯಕ್ಕೆ ಕಾರು ಓಡಿಸುತ್ತಿದ್ದ ಮಹಿಳೆಗೂ ಬೈಕ್ ನಲ್ಲಿ ಬರುತ್ತಿದ್ದ ಯುವಕರಿಗೂ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಮೂವರನ್ನು ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಪುಂಡ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಿನ್ನೆ ರಾತ್ರಿ ಕಾರಿನ ಒಂದು ಬದಿಯ ಇಂಡಿಕೇಟರ್ ಹಾಕಿಕೊಂಡು ಮತ್ತೊಂದು ಬದಿಗೆ ಮಹಿಳೆಯಿದ್ದ ಕಾರು ತೆರಳಿದಾಗ ಅದನ್ನು ಹಿಂದೆ ಬೈಕ್ ನಲ್ಲಿ ಬರುತ್ತಿದ್ದ ಯುವಕರು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಮಹಿಳೆಯಿದ್ದ ಕಾರಿನ ಬಾಗಿಲು ತೆಗೆಯಲು ಯುವಕರು ಯತ್ನಿಸಿದ್ದಾರೆ.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮಹಿಳೆ ಕಾರನ್ನು ಅಲ್ಲಿಂದ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಮಡಿವಾಳದಿಂದ ಕೋರಮಂಗಲದವರೆಗೆ ಪುಂಡ ಯುವಕರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ನಡುವೆ ಕಾರಿನಿಂದಲೇ ಮಹಿಳೆ ಪೊಲೀಸರಿಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿದ್ದಾಳೆ. ಕ್ಷಿಪ್ರಗತಿಯಲ್ಲಿ ಬಂದ ಪೊಲೀಸರನ್ನು ನೋಡಿದ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಪೊಲೀಸರು, ಮೂವರು ಯುವಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

More articles

Latest article

Most read