Saturday, September 14, 2024

ಭಾರತ ಸರ್ಕಾರದ ವಿರುದ್ಧ ಗಂಭೀರ ಆರೋಪಪಟ್ಟಿ ಬಿಡುಗಡೆ ಮಾಡಿದ ಪ್ರಜ್ಞಾವಂತ ಜನರು, ವಿವಿಧ ಸಂಘ – ಸಂಸ್ಥೆಗಳು

Most read

‘ಭಾರತದ ಜನತೆಯಾದ ನಾವು v/s ಭಾರತ ಸರ್ಕಾರ’ ಎಂಬ ಆರೋಪಪಟ್ಟಿಯಲ್ಲಿ ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸುತ್ತಿರುವ ಸರ್ಕಾರದ ಹುನ್ನಾರಗಳನ್ನು ನಾಗರಿಕರು ಪಟ್ಟಿಮಾಡಿದ್ದಾರೆ.ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿ ಕಾನೂನು ಮತ್ತು ಆಡಳಿತ ಪ್ರಕ್ರಿಯೆಗಳನ್ನು ಬುಡಮೇಲು ಮಾಡುತ್ತಿರುವುದರ ಪರಿಣಾಮವಾಗಿ ಪ್ರಜಾಪ್ರಭುತ್ವವು ಹೇಗೆ ಕುಸಿಯುತ್ತಿದೆ ಎನ್ನುವುದನ್ನು ಎತ್ತಿ ತೋರಿಸುವುದು ಈ ಆರೋಪಪಟ್ಟಿಯ ಉದ್ದೇಶವಾಗಿದೆ. ಭಾರತದ ಜನತೆಯು ಭಾರತ ಸರ್ಕಾರದ ವಿರುದ್ಧ ಮಾಡಿರುವ ಎಂಟು ಆರೋಪಗಳನ್ನು ಮತ್ತು ಈ ಆರೋಪಗಳಿಗೆ ಇರುವ ವಿವರವಾದ ಪುರಾವೆಗಳನ್ನು ಆರೋಪಪಟ್ಟಿಯು ಮುಂದಿಡುತ್ತದೆ. ಈ ಆರೋಪಪಟ್ಟಿಯನ್ನು ಅನುಮೋದಿಸಿದ ಪ್ರಜ್ಞಾವಂತ ಜನರು ಮತ್ತು ವಿವಿಧ ಸಂಘ-ಸಂಸ್ಥೆಗಳು ಇಂದು ನಡೆದ ಆನ್‌ಲೈನ್ ಪತ್ರಿಕಾ ಗೋಷ್ಟಿಯಲ್ಲಿ ಇದನ್ನು ಬಿಡುಗಡೆ ಮಾಡಿದರು.

ಇತ್ತೀಚೆಗೆ ಸಂಸದೀಯ ಚಟುವಟಿಕೆಗಳು ಹೊಸ ಸಂಸತ್ ಭವನಕ್ಕೆ ಸ್ಥಳಾಂತರಗೊoಡಿವೆ. ಆದರೆ, ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಹತ್ತು ವರ್ಷಗಳಿಂದ ನಿರಂತರವಾಗಿ ದಾಳಿ ನಡೆಯುತ್ತಿದೆ. ಪ್ರತಿನಿಧಿ ಹೊಣೆಗಾರಿಕೆಯ ಪ್ರಜಾಪ್ರಭುತ್ವದಲ್ಲಿ ಸಂಸತ್ತು ಎನ್ನುವುದು ಒಂದು ಬಹುಮುಖ್ಯ ಆಧಾರಸ್ಥಂಭ. ಇಂತಹ ಆಧಾರ ಸ್ಥಂಭವನ್ನು ಈಗಿನ ಸರ್ಕಾರ ಆಮೂಲಾಗ್ರವಾಗಿ ನಾಶಪಡಿಸಿದೆ. ಇಂದು ಬಿಡುಗೆಯಾದ ಆರೋಪಪಟ್ಟಿಯು ಪ್ರಜಾಪ್ರಭುತ್ವವನ್ನು ಹೇಗೆ ನಾಶಪಡಿಸಲಾಗಿದೆ ಎನ್ನುವುದನ್ನು ಪುರಾವೆ ಸಹಿತ ಪಟ್ಟಿಮಾಡಿರುವುದಲ್ಲದೆ ಸರ್ಕಾರವನ್ನು ಮತ್ತು ಆಡಳಿತ ಪಕ್ಷದ ಸಂಸತ್ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡುವಂತೆ ಜನರಿಗೆ ನೀಡುತ್ತಿರುವ ಕರೆಯಾಗಿದೆ.

ಸಂಸತ್ತನ್ನು ಬಹುಸಂಖ್ಯಾತರ ಮತ್ತು ಅಪ್ರಜಾಸತ್ತಾತ್ಮಕ ಕಾನೂನು ರಚನೆಯ ಸಾಧನವಾಗಿ ಬಳಕೆಮಾಡಿಕೊಳ್ಳುವ ಸಲುವಾಗಿ ಸರ್ಕಾರವು ಎಲ್ಲ ಸಾಂವಿಧಾನಿಕ ನಿಬಂಧನೆಗಳನ್ನು ಮತ್ತು ಕಾರ್ಯವಿಧಾನಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿದೆ ಎನ್ನುವುದನ್ನು ಈ ಆರೋಪಪಟ್ಟಿಯು ಸೂಚಿಸುತ್ತದೆ. ಸಂಸದೀಯ ಪ್ರಜಾಪ್ರಭುತ್ವವನ್ನು ಹೀಗೆ ದುರ್ಬಲಗೊಳಿಸುವುದರಿಂದ ಪ್ರಜಾಪ್ರಭುತ್ವವೇ ನಾಶವಾಗಿಬಿಡುತ್ತದೆ,

ಚರ್ಚೆ ಮತ್ತು ಸಂವಾದದ ಅವಕಾಶಗಳನ್ನು ಮೊಟಕುಗೊಳಿಸುವುದು
ಕಳೆದ ಎರಡು ಲೋಕಸಭೆ ಅಧಿವೇಶನಗಳ ಅವಧಿಯು ಅತ್ಯಂತ ಕಿರಿದಾಗಿದ್ದು, ದೇಶಕ್ಕೆ ಸಂಬAಧಿಸಿದ ಕಾರ್ಯನೀತಿಗಳ ಕುರಿತು ಚರ್ಚೆ ಮತ್ತು ಸಂವಾದ ಮಾಡಲು ಇರುವ ಅವಕಾಶವನ್ನು ಮೊಟಕುಗೊಳಿಸುತ್ತಿರುವುದನ್ನು ಇದು ಸೂಚಿಸುತ್ತಿದೆ. ಭಾರತವು ಸ್ವಾತಂತ್ರö್ಯ ಪಡೆದ ನಂತರ ಇದೇ ಮೊದಲ ಬಾರಿಗೆ ಈ ೧೭ನೇ ಲೋಕಸಭೆಯ ಅವಧಿಯಲ್ಲಿ ಉಪಸಭಾಪತಿಯನ್ನು ಆಯ್ಕೆಯೇ ಮಾಡದೆ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತಿದೆ. ಸಾಧಾರಣವಾಗಿ ಉಪಸಭಾಪತಿಯು ಪ್ರತಿಪಕ್ಷಗಳ ಅಭ್ಯರ್ಥಿಯಾಗಿರುವುದು ವಾಡಿಕೆ. ಇದು ಸಂವಿಧಾನದ ೯೩ನೇ ಕಲಂನ ನೇರ ಉಲ್ಲಂಘನೆಯಾಗಿದೆ. ೨೦೦೯-೧೪ರ ಅವಧಿಯಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಒಟ್ಟು ಮಸೂದೆಗಳಲ್ಲಿ ಶೇ.೭೧ ಮಸೂದೆಗಳನ್ನು ಹೆಚ್ಚಿನ ಚರ್ಚೆ ಮತ್ತು ವಿಶ್ಲೇಷಣೆಗಾಗಿ ಸ್ಥಾಯಿ ಸಮಿತಿಗಳಿಗೆ ಕಳಿಸಲಾಗಿತ್ತು. ೨೦೧೯ರ ನಂತರದಲ್ಲಿ ಕೇವಲ ಶೇ.೧೬ರಷ್ಟು ಮಸೂದೆಗಳನ್ನು ಮಾತ್ರ ಸ್ಥಾಯಿ ಸಮಿತಿಗಳಿಗೆ ವಹಿಸಲಾಗಿದೆ. ಜೊತೆಗೆ, ೨೦೧೪ರಿಂದ ೨೦೨೧ರವರೆಗಿನ ಅವಧಿಯಲ್ಲಿ ಮಂಡಿಸಲಾದ ೩೦೧ ಮಸೂದೆಗಳ ಪೈಕಿ ಕೇವಲ ೭೪ ಮಸೂದೆಗಳನ್ನು ಮಾತ್ರ ಸಮಾಲೋಚನೆಗಾಗಿ ವಿತರಣೆ ಮಾಡಲಾಗಿದೆ.

ಕೂಲಂಕಷ ಪರಿಶೀಲನೆ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಸುಗ್ರೀವಾಜ್ಞೆಗಳ ಮೂಲಕ ಪ್ರಮುಖ ಶಾಸನಗಳನ್ನು ಬದಲಾವಣೆ ಮಾಡುವುದು ಹಾಗೂ ಸಂಸತ್ ಸದಸ್ಯರಿಗೆ ಮತ್ತು ಜನರಿಗೆ ಅಧ್ಯಯನ ಮಾಡಲು ಮತ್ತು ವಿಶ್ಲೇಷಣೆ ಮಾಡಲು ಅವಕಾಶವೇ ಇಲ್ಲದಂತೆ ಕೊನೆಗಳಿಗೆಯಲ್ಲಿ ದಿಢೀರನೆ ಮಸೂದೆಗಳನ್ನು ಕಲಾಪದೊಳಗೆ ತೂರಿಸುವ ಮೂಲಕ ಸರ್ಕಾರವು ಸಂಸದೀಯ ವಿಶ್ಲೇಷಣೆಯಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಪಟ್ಟಿಯು ದೂಷಿಸುತ್ತದೆ.

“೨೦೧೬ರಿಂದ ೨೦೨೩ರವರೆಗಿನ ಅವಧಿಯಲ್ಲಿ ಬಜೆಟ್‌ನ ಶೇ.೭೯ ಭಾಗ ಯಾವುದೇ ಚರ್ಚೆ ಇಲ್ಲದೆ ಅನುಮೋದನೆಗೊಂಡಿದೆ. ಸಾಮಾನ್ಯವಾಗಿ ಕೆಲವು ಸಚಿವಾಲಯಗಳ ಬಜೆಟ್‌ಅನ್ನು ವಿವರವಾಗಿ ಚರ್ಚೆಸಿ, ಪ್ರತ್ಯೇಕವಾಗಿ ಅವುಗಳನ್ನು ಮತಕ್ಕೆ ಹಾಕುವುದು ಲೋಕಸಭೆಯಲ್ಲಿರುವ ರೂಢಿ… ಅಧಿವೇಶನಗಳ ಪ್ರಮಾಣವನ್ನು ಕಡಿಮೆ ಮಾಡಿರುವುದು, ಬಜೆಟ್ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಿರುವುದು, ಕಲಾಪ ಪಟ್ಟಿ ಸಿದ್ಧತೆಯಲ್ಲಿ ಜಾಗ್ರತೆವಹಿಸದಿರುವುದು– ಇವು ಬಜೆಟ್‌ನ ಪೂರ್ಣ ಪ್ರಮಾಣದ ಚರ್ಚೆಯನ್ನು ಕಡಿಮೆ ಮಾಡಿದೆ ಹಾಗೂ ಚರ್ಚೆ ಇಲ್ಲದೆ ಅನುಮೋದಿಸುವ ಪ್ರಮಾಣವನ್ನು ಹೆಚ್ಚಿಸಿದೆ.” ಎನ್ನುತ್ತದೆ ಆರೋಪಪಟ್ಟಿ.

ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಒಂದು ‘ಅಪೂರ್ವ’ ವಿಧಾನವೆಂದರೆ ಸಂಸದರ ಪ್ರಶ್ನೆಗಳನ್ನೇ ಕಲಾಪಪಟ್ಟಿಯಿಂದ ಕಿತ್ತುಹಾಕುವುದು. ಕಾನೂನಿನಲ್ಲಿ ಇದಕ್ಕೆ ಅವಕಾಶವೇ ಇಲ್ಲದಿದ್ದರೂ ಹೀಗೆ ಮಾಡಲಾಗುತ್ತಿದೆ. ೨೦೧೫, ೨೦೨೦, ೨೦೨೧ ಮತ್ತು ೨೦೨೩ರಲ್ಲಿ ಸರ್ಕಾರವು ಪ್ರತಿಪಕ್ಷಗಳ ಸದಸ್ಯರ ಪ್ರಶ್ನೆಗಳನ್ನು ಕಿತ್ತುಹಾಕಿದೆ. ೨೦೨೩ರ ಡಿಸೆಂಬರ್‌ನಲ್ಲಿ ಪ್ರತಿಪಕ್ಷ ಸದಸ್ಯರ ೨೫೦ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸರ್ಕಾರ ಕಿತ್ತು ಹಾಕಿದೆ.

ನ್ಯಾಯಪರತೆ, ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕವಾಗಿ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಖಾತ್ರಿಪಡಿಸಲು ಅಳವಡಿಸಿಕೊಂಡಿದ್ದ ಎಲ್ಲ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಬುಡಮೇಲು ಮಾಡಿರುವ ಸರ್ಕಾರದ ಅಸಾಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡೆಗಳನ್ನು ಆರೋಪಪಟ್ಟಿಯು ಎತ್ತಿತೋರಿಸುತ್ತದೆ.

ಈ ಆರೋಪಪಟ್ಟಿಯನ್ನು ಕೆಳಗಿನ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಅನುಮೋದಿಸಿದ್ದಾರೆ:

ಸಂಸ್ಥೆಗಳು:

All India Lawyers Association for Justice(AILAJ)
All India People’s Science Network
Association for protection of Civil Rights (APCR)
Bahutva Karnataka
Bargi Bandh Visthapit Evam Prabhaavit Sangh, Madhya pradesh
Delhi Science Forum
Dynamic Action
Financial Accountability Network
Forum Against Oppression of Women- Mumbai
Gharelu Kamgaar Union
Human Rights Defenders Alert ;
Hasrat-e-Zindagi Mamuli; Mumbai
Indigenous Perspectives
Jan Sarokar
Maadhyam
Mazdoor Kisan Shakti Sanghatan (MKSS)
National Alliance for Justice Accountability and Rights(NAJAR)
National Alliance for People’s Movements (NAPM)
Naveddu Nilladiddare – Karnataka
People’s Union for Civil Liberties
Stree Jagruti Samiti – Karnataka
VIKASANA VIDHYABHYASA KENDRAM

ವ್ಯಕ್ತಿಗಳು:

  1. Subodh Lal – Constitutional Conduct Group
  2. Swati Narayan
  3. Uma Shankari, Farmer, Citizen of india
  4. Dr. Suhas Kolhekar, Health Rights, Education and Social Justice Activist
  5. Sunder Burra, Retd. Civil Servant
  6. Ashish Kothari, Pune
  7. Dinesh Abrol
  8. Nikhil Dey
  9. ND Jayaprakash
  10. Steve Rocha
  11. Olencio, General Secretary, National Fishworkers Forum
  12. Ashok Choudhary, All India Union of Forest Working People
  13. Nirmal Gorana, Fight Inequality Alliance India
  14. Denzil Fernandes, Social Scientist, Delhi
  15. Medha Patkar, Narmada Bachao Andolan, National Alliance for People’s Movement
  16. Prasad Chacko
  17. Ashish Ranjan, NAPM
  18. Priya Darshini, Delhi Forum
  19. Soumya Dutta, Senior Environmental Activist
  20. Koninika Ray, National Federation of Indian Women

More articles

Latest article