ಪಹಲ್ಗಾಮ್‌ ದಾಳಿಯ ಪರಿಣಾಮದಿಂದ ಭಾರತವು ಪ್ರಾದೇಶಿಕ ದಾಳಿಯನ್ನು ತಪ್ಪಿಸಬೇಕು : ಜೆ ಡಿ ವ್ಯಾನ್ಸ್‌

Most read

ʻಪಹಲ್ಗಾಮ್‌ ದಾಳಿಯ ಕುರಿತು ಭಾರತದ ಪ್ರತಿಕ್ರಿಯೆಯು ಪ್ರಾದೇಶಿಕ ಸಂಘರ್ಷದ ಅಪಾಯವನ್ನು ತಪ್ಪಿಸಬೇಕು. ದಾಳಿ ನಡೆಸಿದವರನ್ನು ಪತ್ತೆಹಚ್ಚಲು ಪಾಕಿಸ್ತಾನವು ಭಾರತದೊಂದಿಗೆ ಕೆಲಸ ಮಾಡುತ್ತದೆʼ ಎಂದು ಅಮೇರಿಕಾದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್‌ ಅವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವಾರ ಅವರು ಭಾರತ ಪ್ರವಾಸದಲ್ಲಿ ಇರುವಾಗಲೇ ಪಹಲ್ಗಾಮ್‌ ನಲ್ಲಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆ ಕುರಿತು ಫಾಕ್ಸ್‌ ನ್ಯೂಸ್‌ಗೆ ಕೊಟ್ಟಿರುವ ಸಂದರ್ಶನ ಒಂದರಲ್ಲಿ ಈ ದಾಳಿಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಈ ಭಯೋತ್ಪಾದಕ ದಾಳಿಗೆ ಭಾರತವು ವಿಶಾಲವಾದ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದು ನಮ್ಮ ಆಶಯ ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪಾಕಿಸ್ತಾನವು ತನ್ನ ಜವಾಬ್ದಾರಿಯುತ ಮಟ್ಟಿಗೆ ಭಾರತದೊಂದಿಗೆ ಸಹಕರಿಸುತ್ತದೆ ಮತ್ತು ಕೆಲವೊಮ್ಮೆ ತನ್ನ ಭೂಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ವ್ಯವಹರಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಅಮೇರಿಕಾದ ಉಪರಾಷ್ಟ್ರಪತಿಯವರ ಈ ಹೇಳಿಕೆ ಬಂದಿದೆ.
ಏಪ್ರಿಲ್‌ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ದಿನ ಜೆಡಿ ವ್ಯಾನ್ಸ್‌ ಅವರು ಭಾರತದ ಪ್ರವಾಸದಲ್ಲಿದ್ದರು. ಈ ಘಟನೆ ನಡೆದ ತಕ್ಷಣ ತಮ್ಮ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ʼಹತ್ಯೆಗೀಡಾದ ವ್ಯಕ್ತಿಗಳು ಮತ್ತು ಅವರ ಕುಟುಂಬದವರೊಂದಿಗೆ ನಾವು ಇದ್ದೇವೆ ಎಂಬ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದರುʼ.

25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯನ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯು ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದೆ. ಈ ದಾಳಿಯ ಪ್ರತೀಕಾರಕ್ಕೆ ಕೇಂದ್ರ ಸರ್ಕಾರವು ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಿದೆ.

More articles

Latest article