ಪಶ್ಚಿಮ ಬಂಗಾಳದಲ್ಲಿ  ಶೇ. 89.93ರಷ್ಟು, ತಮಿಳುನಾಡಿನಲ್ಲಿ ದಾಖಲೆಯ ಶೇ.  ಶೇ.84 ರಷ್ಟು ಮತದಾನ

ಚೆನ್ನೈ  : ನೆರೆ ರಾಜ್ಯ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಮತದಾನ ಅಂತ್ಯಗೊಂಡಿದ್ದು 1952ರ ಬಳಿಕ ಇದೇ ಮೊದಲ ಬಾರಿಗೆ ಶೇ.84 ರಷ್ಟು ಅಧಿಕ ಪ್ರಮಾಣದ ಪ್ರಮಾಣದ ಮತದಾನ ದಾಖಲಾಗಿದೆ.

ಸಂಜೆ 6ಗಂಟೆವರೆಗೆ ಶೇ.84ರಷ್ಟು ಮತದಾನ ನಡೆದಿದೆ. 2011ರಲ್ಲಿ ಶೇ. 78.01ರಷ್ಟು ಮತದಾನ ನಡೆದಿತ್ತು. ಈ ಬಾರಿ ದಾಖಲೆಯ ಮತದಾನ ನಡೆದಿದೆ.

5.73 ಕೋಟಿ ಅರ್ಹ ಮತದಾರರಲ್ಲಿ   ಶೇ. 84ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಅಂದರೆ ಅಂದಾಜು 4.71 ಕೋಟಿ ಜನರು ತಮ್ಮ ಮತದಾನ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾನ ಬೆಳಗ್ಗೆ 7ಗಂಟೆಯಿಂದ ಸಂಜೆ 6 ಗಂಟೆವರೆಗೂ ನಡೆಯಿತು. ಬೆಳಗ್ಗೆ ಮತ ಕೇಂದ್ರಗಳಲ್ಲಿ ದೊಡ್ಡ ಸಾಲು ಕಂಡು ಬಂದಿತು. ಮಧ್ಯಾಹ್ನ ಆಗುತ್ತಿದ್ದಂತೆ ಮತದಾನ ನೀರಸಗೊಂಡಿತು. ಸಂಜೆ 4 ಗಂಟೆ ಬಳಿಕ ಮತ್ತೆ ಚುರುಕುಪಡೆಯಿತು.

ಮತದಾರರು ಸಂಜೆ 6ಗಂಟೆಗೂ ಮೊದಲು ಮತಕೇಂದ್ರಕ್ಕೆ ಬಂದವರಿಗೆ ಮತದಾನ ಮಾಡಲು ಸಿಬ್ಬಂದಿ ಅವಕಾಶ ಕಲ್ಪಿಸಿದರು.

ಕರೂರುನಲ್ಲಿ ಅತ್ಯಧಿಕ ಮತದಾನ: ಕರೂರು ವಿಧಾನಸಭಾ ಕ್ಷೇತ್ರದಲ್ಲಿ  ಗರಿಷ್ಠ ಅಂದರೆ ಶೇ. 89ರಷ್ಟು ಮತ ಚಲಾವಣೆಯಾಗಿ ದಾಖಲೆಯಹಾಗಿದೆ. ತಮಿಳುನಾಡಿನ 8 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ 30 ಜಿಲ್ಲೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನ ನಡೆದಿದೆ. ತಮಿಳುನಾಡು ರಾಜ್ಯದ ಪಶ್ಚಿಮ ಜಿಲ್ಲೆಗಳು ರಾಜ್ಯದ ಇತರ ಭಾಗಗಳಿಗಿಂತ ಹೆಚ್ಚಿನ ಮತಗಳನ್ನು   ಚೆನ್ನೈ ಜಿಲ್ಲೆಯ ವ್ಯಾಪ್ತಿ 16 ಕ್ಷೇತ್ರಗಳಲ್ಲಿ  ಶೇ. 83.44ರಷ್ಟು ಮತಗಳು ಮತ್ತು 12 ಕ್ಷೇತ್ರಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಮತ ಚಲಾವಣೆಯಾಗಿವೆ.

ಸಿಎಂ ಕ್ಷೇತ್ರದಲ್ಲಿ ಶೇ.ಶೇ. 83.58ರಷ್ಟು  ಮತದಾನ:
ಕರೂರು ಜಿಲ್ಲೆಯಲ್ಲಿ ಶೇ. 89ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಚೆನ್ನೈ ಜಿಲ್ಲೆಯಲ್ಲಿ ಶೇ. 81.34ರಷ್ಟು ಮತದಾನವಾಗಿದ್ದರೆ, ಕನ್ಯಾಕುಮಾರಿಯಲ್ಲಿ ಶೇ. 73.44ರಷ್ಟು ಮತದಾನವಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರ ಕ್ಷೇತ್ರ ಎಡಪ್ಪಾಡಿಯಲ್ಲಿ ಶೇ. 89.09ರಷ್ಟು ಮತದಾನ ದಾಖಲಾಗಿದೆ. ದಳಪತಿ ವಿಜಯ್ ಅವರ ಪೆರಂಬೂರ್ ಕ್ಷೇತ್ರದಲ್ಲಿ ಶೇ. 86.72ರಷ್ಟು ಮತದಾನವಾಗಿದ್ದರೆ, ಅವರ ಇನ್ನೊಂದು ಕ್ಷೇತ್ರವಾದ ತಿರುಚ್ಚಿ ಪೂರ್ವದಲ್ಲಿ ಶೇ. 79.32ರಷ್ಟು ಮತದಾನವಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಲ್ಲಿ ಶೇ. 83.58ರಷ್ಟು ಮತ್ತು ಸೀಮನ್ ಅವರ ಕಾರೈಕುಡಿ ಕ್ಷೇತ್ರದಲ್ಲಿ ಶೇ. 71.88ರಷ್ಟು ಮತದಾನ ದಾಖಲಾಗಿದೆ.

ಪಶ್ಚಿಮ ಬಂಗಾಳದಲ್ಲಿ  ಶೇ. 89.93ರಷ್ಟು ಮತದಾನ
ಹಿಂಸಾಚಾರದ ನಡುವೆ ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ ಗುರುವಾರ 152 ಕ್ಷೇತ್ರಗಳಲ್ಲಿಶೇ. ಸಂಜೆ 6 ಗಂಟೆಯ ವೇಳೆಗೆ ಶೇ. 89.93ರಷ್ಟು ಮತದಾನ ನಡೆದಿದೆ . ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಕುಮಾರ್‌ ಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂಧು ಸರ್ಕಾರ್‌ ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಮತದಾನದ ವೇಳೆ ಅವರು ಹಳ್ಳಿಯೊಂದಕ್ಕೆ ತೆರಳಿದ ವೇಳೆ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮತ್‌ ನಗರದಲ್ಲಿ ಬಿಜೆಪಿ ಶಾಸಕಿ ಅಗ್ನಿಮಿತ್ರ ಪೌಲ್‌ ಅವರ ಕಾರಿನ ಮೇಲೆ ದುಷ್ಕರ್ಮಿಗಲು ಕಲ್ಲು ತೂರಾಟ ನಡೆಸಿದ್ದಾರೆ.  ಮತದಾನದ ವೇಳೆ ಮತಗಟ್ಟೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

More articles

Latest article

Most read