ಒಳಮೀಸಲಾತಿ ಜಾರಿ: ಇಂದಿನಿಂದ ಮನೆ-ಮನೆ ಸಮೀಕ್ಷೆ ಆರಂಭ : ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು : ಒಳ ಮೀಸಲಾತಿ ಸಮೀಕ್ಷೆಯು ಇಂದಿನಿಂದ (5-5-2025) ಪ್ರಾರಂಭವಾಗಲಿದ್ದು, ಯಾರು ಸಹ ಈ ಸಮೀಕ್ಷೆಯಿಂದ ಹೊರಗುಳಿಯಬಾರದು ಮತ್ತು ತಪ್ಪಿಸಿಕೊಳ್ಳಬಾರದು. ಇದು ವೈಜ್ಞಾನಿಕವಾಗಿರಬೇಕು ಮತ್ತು ಪಾರದರ್ಶಕವಾಗಿರಬೇಕು. ಇದು ವಿಶೇಷವಾಗಿ ಪರಿಶಿಷ್ಟ ಜಾತಿಯವರಿಗಾಗಿಯೇ ಮಾಡುತ್ತಾ ಇರುವಂತಹ ಸಮೀಕ್ಷೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.

“ಸಂವಿಧಾನದ  341ನೇ ವಿಧಿಯ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ 101 ಜಾತಿಗಳಿವೆ. ಎಡ ಬಲ, ಲಂಬಾಣಿ, ಕೊರಮ, ಕೊರಚ ಇತರೆ ಜಾತಿಗಳಲ್ಲಿ ಸಹ ಉಪ ಜಾತಿಗಳಿವೆ. ಈ 101 ಜಾತಿಗಳಲ್ಲಿ ಪ್ರಾಯೋಗಿಕ ದಾಖಲೆ ಇರಲಿಲ್ಲ. ಮೊದಲು ಸದಾಶಿವ ಆಯೋಗ ವರದಿ ಸಲ್ಲಿಸಿದಾಗ, 2011ರ ಜನಗಣತಿ ಆಧಾರದಲ್ಲಿ ಜನಸಂಖ್ಯೆಯನ್ನು ಗುರುತಿಸಿದ್ದರು ಎಂದು ಹೇಳಿದರು.

ಕಳೆದ ವರ್ಷ ದಿನಾಂಕ 01-08-2024 ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ಆದೇಶ ಹೊರಡಿಸಿತ್ತು. ಅದರ ಆಧಾರದಲ್ಲಿಯೇ ಒಳಮೀಸಲಾತಿ ಜಾರಿಮಾಡಲು ಆಯಾ ರಾಜ್ಯಗಳಿಗೆ ಸ್ವತಂತ್ರ ಅಧಿಕಾರವನ್ನು ಕೊಟ್ಟಿತ್ತು. ಈ ಕುರಿತು ಕಳೆದ 2024 ಆಗಸ್ಟ್ 1ನೇ ತಾರೀಖಿನಂದು ಕ್ಯಾಬಿನೆಟ್ ಸಭೆ ಸೇರಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚನೆ ಮಾಡಲಾಗಿತ್ತು. ಆಯೋಗವು ಸರ್ಕಾರಕ್ಕೆ ಒಂದು ಮಧ್ಯಂತರ ವರದಿಯನ್ನು ಸಲ್ಲಿಸಿ, ಎಲ್ಲರಿಗೂ ಸರಿಯಾದ ನ್ಯಾಯ ಒದಗಿಸಬೇಕಾದರೆ ಪ್ರಾಯೋಗಿಕ ದತ್ತಾಂಶ ಬೇಕು ಎಂದು ಹೇಳಿತ್ತು.

ಕೆಲವರು ಪರಿಶಿಷ್ಟ ಜಾತಿಗೆ ಸೇರಿದಂತವರು ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಆದಿ ಆಂಧ್ರ ಅಂತಾ ಹೇಳಿಕೊಳ್ಳುತ್ತಾರೆ. ಮತ್ತು ಎಡ ಗೈನವರು ಹಾಗೂ ಬಲ ಗೈನವರು ಬರೆದುಕೊಂಡಿರುತ್ತಾರೆ. ಆಮೇಲೆ ಎಸ್ಸಿ ಅಂತನು  ಬರೆದುಕೊಂಡಿರುತ್ತಾರೆ ಎಂದು ಹೇಳಿದರು.

ಈ 101 ಜಾತಿಗಳ ಒಳ ಮೀಸಲಾತಿಯನ್ನು ಕೊಡಬೇಕೆಂದರೆ ನಿರ್ದಿಷ್ಟವಾದ ಅಂಕಿ ಅಂಶಗಳು ಬೇಕಾಗುತ್ತವೆ. ಅದಕ್ಕೊಸ್ಕರ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಗನ್ ದಾಸ್ ಅವರ ಆಯೋಗವು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಹಾಗೆಯೇ ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಕ್ಕಾಗಿ ಇಂದಿನಿಂದ ಮನೆ-ಮನೆಗೆ ಭೇಟಿ ನೀಡಲಾಗುತ್ತಿದೆ. ಇದಕ್ಕೆ ಸುಮಾರು 65,000 ಶಿಕ್ಷಕರಿಗೆ ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಜೊತೆಗೆ 10 ರಿಂದ 12 ಜನರಿಗೆ ಒಬ್ಬರು ಮೇಲಾಧಿಕಾಯಿರುತ್ತಾರೆ. ಇವರ ಮೇಲೆ ಜಿಲ್ಲಾಧಿಕಾರಿಯನ್ನು ನೇಮಕ ಮಾಡಲಾಗಿದೆ. 

ಮೊದಲನೆಯ ಹಂತದಲ್ಲಿ ದಿನಾಂಕ 5/05/2025 ರಿಂದ 17/05/2025 ರವರಗೆ ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಾಗುತ್ತದೆ. ಎರಡನೇ ಹಂತದಲ್ಲಿ ದಿನಾಂಕ 19/05/2025  ರಿಂದ 21/05/2025 ರವರಗೆ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಮೂರನೇ ಹಂತದಲ್ಲಿ ದಿನಾಂಕ 19/05/2025  ರಿಂದ 21/05/2025 ರವರಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಸಹ ಮಾಡಿಕೊಳ್ಳಬಹುದು. ಇದರಲ್ಲಿ ಸಹ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಮೀಕ್ಷೆ ಕೈಗೊಳ್ಳಲಿಕ್ಕೆ ಬೆಳಿಗ್ಗೆ 6:30 ರಿಂದ ಸಂಜೆ 6:30 ರವರಗೆ ಅವಕಾಶ ಮಾಡಿ ಕೊಡಲಾಗುತ್ತದೆ. ಈ ಮೂರು ಹಂತದ ಮೂಲಕ ನಿಖರವಾದ ಮಾಹಿತಿ ಪಡೆದುಕೊಂಡು, ಮುಂದಿನ 60 ದಿನಗಳಲ್ಲಿ ವರದಿ ಒಪ್ಪಿಸಬೇಕು. ವರದಿ ಬಂದ ನಂತರ ಒಳಮೀಸಲಾತಿ  ಶಿಫರಸ್ಸುನ್ನು ಕೈಗೊಳ್ಳಲಾಗುವುದು ಎಂದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎಚ್ ನಾಗಮೋಹನ್ ದಾಸ್ ರವರ ಒಳಮೀಸಲಾತಿ ಜಾರಿಗಾಗಿ ಏಕಸದಸ್ಯ ಪೀಠದ ಮುಂದೆ, ಪರಿಶಿಷ್ಟಜಾತಿಯಲ್ಲಿ ಒಳಮೀಸಲಾತಿ ಜಾರಿಮಾಡಲು ಪ್ರಾಯೋಗಿಕ ದತ್ತಾಂಶ ಬೇಕಾಗುತ್ತದೆ ಅಂತಾ ಹೇಳಿದ್ದರಿಂದ ಮತ್ತು ಸುಪ್ರೀಂ ಕೋರ್ಟ್ ಪ್ರಾಯೋಗಿಕ ದತ್ತಾಂಶ ಕೊಡಬೇಕು ಎಂದು ಹೇಳಿದ್ದರಿಂದ ಮನೆ-ಮನೆಗೂ ಸಮೀಕ್ಷೆಯನ್ನು ನಡೆಸುತ್ತಿದ್ದೆವೆ. ನಾವು ಒಳ ಮೀಸಲಾತಿಯನ್ನು ಜಾರಿಮಾಡಲು ಬದ್ದತೆಯಿಂದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪರಿಶಿಷ್ಟ ಜಾತಿಯವರಲ್ಲಿ ಒಂದು ಮನವಿ ಮಾಡುತ್ತಿದ್ದೇನೆ. ದಯಮಾಡಿ ಎಲ್ಲರೂ ಕೂಡ ಈ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಭಾಗವಹಿಸಿ ಮತ್ತು ಗಣತಿದಾರರು ಬಂದಾಗ ಮಾಹಿತಿಯನ್ನು ಕೊಡಿ ಎಂದು ಮನವಿಯನ್ನು ಮಾಡಿದರು. ಹಾಗೆಯೇ ಎಲ್ಲ ಸಂಘಟನೆಯವರು ಇದಕ್ಕೆ ಸಹಕರಿಸಬೇಕು. ಯಾರು ಸಹ ಇದರಿಂದ ಹಿಂಜರಿಯತಂಕತ್ತ ಪ್ರಶ್ನೆಯಿಲ್ಲ ಎಂದರು.

ಒಳ ಮೀಸಲಾತಿ ಗೋಷ್ಟಿಯಲ್ಲಿ ಸಿಎಂ. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ, ಸಚಿವ ಕೆ.ಎಚ್. ಮುನಿಯಪ್ಪ ಉಪಸ್ಥಿತರಿದ್ದರು.

More articles

Latest article