ಸುಹಾಸ್‌ ಶೆಟ್ಟಿ ಕೊಲೆ ಆರೋಪಿಗಳ ಸುಳಿವು | ತಕ್ಷಣವೇ ಬಂಧನ : ಎಡಿಜಿಪಿ ಆರ್.ಹಿತೇಂದ್ರ

Most read

ಮಂಗಳೂರು: ಬಜಪೆ  ಠಾಣೆ ವ್ಯಾಪ್ತಿಯಲ್ಲಿ ನಡೆದ ಸುಹಾಸ್‌ ಶೆಟ್ಟಿ ಕೊಲೆ ಆರೋಪಿಗಳ ಹೆಸರು ಸಹಿತ ಸುಳಿವು ದೊರೆತಿದೆ. ಆರೋಪಿಗಳನ್ನು ಬಂಧಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾರ್ವಜನಿಕರು ಶಾಂತಿ, ಸುವ್ಯವಸ್ಥೆಯನ್ನು  ಕಾಪಾಡಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.‌ ಹಿತೇಂದ್ರ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದ್ದು ಯಾರೇ ಆದರೂ ಸಹ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳಲಾಗುವುದು ಎಂದರು.

ಹೆಚ್ಚಿನ ಭದ್ರತೆಗಾಗಿ 22 ಕೆಎಸ್‌ಆರ್‌ಪಿ, ಐವರು ಎಸ್ಪಿ, 1,000ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಹಾಗೆಯೇ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಬಾರದು ಎಂದರು.  ಪೊಲೀಸ್ ಇಲಾಖೆ ವಾಸ್ತವವನ್ನು ಕಾಲಕಾಲಕ್ಕೆ ಅಪ್ ಡೇಟ್‌ ಮಾಡುತ್ತದೆ ಎಂದು ಹೇಳಿದರು.

ನೆನ್ನೆ(ಮೇ 01) ರಾತ್ರಿ 8:30ರ ಸುಮಾರಿಗೆ ನಗರದ ಬಜಪೆಯಲ್ಲಿ ರೌಡಿ ಶೀಟರ್‌ ಹಾಗೂ ಹಿಂದೂತ್ವ ಕಾರ್ಯಕರ್ತ ಸುಹಾಸ್‌ ಶೆಟ್ಟಿಯ ಕೊಲೆ ನಡೆದಿದೆ.

More articles

Latest article