ಮದುವೆಯಾದ ದಿನದಿಂದ ಸುಮಾರು 12 ವರ್ಷಗಳಿಂದ ಗೃಹ ಬಂಧನದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೂವತ್ತರ ಹರೆಯದ ಮಹಿಳೆ, ತನ್ನ ಪತಿ ತನ್ನನ್ನು 12 ವರ್ಷಗಳಿಂದ ಮನೆಯೊಳಗೆ ಬೀಗ ಹಾಕಿ ಕೂಡಾಕುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಶೌಚಾಲಯಕ್ಕೆ ಮನೆಯಲ್ಲಿದ್ದ ಸಣ್ಣ ಪೆಟ್ಟಿಗೆಯನ್ನು ಬಳಸಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿಚಿತ್ರವೇನೆಂದರೆ ಈತರ ಮಾಡಿತ ಪತಿಯ ದೂರು ದಾಖಲಿಸಲು ನಿರಾಕರಿದ್ದಾರೆ.
ಕೆಲಸದಿಂದ ತನ್ನ ಪತಿ ಹಾಗೂ ಇಬ್ಬರು ಮಕ್ಕಳು ಶಾಲೆಯಿಂದ ಹಿಂತಿರುಗಿ ಬರುವವರೆಗೂ ನನ್ನ್ನು ಮನೆಯೊಳಡೆ ಬೀಗ ಹಾಕಿ ಇರುಸುತ್ತಾರೆ ಎಂದು ಹೇಳಿದ್ದಾರೆ.
“ನನಗೆ ಮದುವೆಯಾಗಿ 12 ವರ್ಷಗಳು ಕಳೆದಿವೆ, ನನ್ನ ಪತಿ ಯಾವಾಗಲೂ ನನ್ನನ್ನು ಮನೆಗೆ ಬೀಗ ಹಾಕಿ ಚಿತ್ರಹಿಂಸೆ ನೀಡುತ್ತಿದ್ದನು, ಆ ಪ್ರದೇಶದಲ್ಲಿ ಅವನನ್ನು ಯಾರೂ ಹೇಳೊರು ಕೇಳೊರು ಇಲ್ಲ. ನನ್ನ ಮಕ್ಕಳು ಶಾಲೆಗೆ ಹೋಗುತ್ತಾರೆ, ಆದರೆ ನನ್ನ ಪತಿ ಕೆಲಸದಿಂದ ಹಿಂತಿರುಗುವವರೆಗೆ ಅವರು ಮನೆ ಬಾಗಿಲಿನಲ್ಲಿ ನಿಂತಿರುತ್ತಾರೆ. ನಾನು ಅವರಿಗೆ ಕಿಟಕಿಯ ಮೂಲಕ ಆಹಾರವನ್ನು ನೀಡುತ್ತೇನೆ ” ಎಂದು ಮಹಿಳೆ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಹಿಳೆಯು ಕಳೆದ ಎರಡು ಮೂರು ವಾರಗಳಿಂದ ತನ್ನ ಮನೆಯೊಳಗೆ ಬಂಧಿಯಾಗಿದ್ದಳು ಎಂದು ಹೇಳಿದ್ದಾರೆ.
ಆಕೆಯನ್ನು ರಕ್ಷಿಸಿದ ನಂತರ ಗಂಡನ ವಿರುದ್ಧ ದೂರು ನೀಡಲು ನಿರಾಕರಿಸಿದ್ದಾಳೆ. ತನ್ನ ಪೋಷಕರ ಮನೆಯಲ್ಲಿಯೇ ಇರುವುದಾಗಿ ಪೊಲೀಸರಿಕೆ ತಿಳಿಸಿದ್ದಾರೆ.