ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ‘ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾನ’ ಸಮಾರಂಭದ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳನ್ನ ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದರು.
ಬಹುಸಂಖ್ಯಾತರ ಭಾವನೆಗಳಿಂದ ಪ್ರೇರಿತವಾದ ಈ ನಿರ್ಧಾರವು ಮಹತ್ವದ ಕಾರ್ಯಕ್ರಮ ಭಾಗವಹಿಸಲು ಅಥವಾ ವೀಕ್ಷಿಸಲು ಅಧಿಕಾರಿಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜನವರಿ ೨೨ ರಂದು ನಡೆಯುವ ರಾಮಮಂದಿರ ಉದ್ಘಾಟನೆ ಸಮಾರಂಭ ಪ್ರಯುಕ್ತ ಎಲ್ಲಾ ಕೇಂದ್ರ ಸರ್ಕಾರ ಹಾಗೂ ಕೈಗಾರಿಕಾ ಸಂಸ್ಥೆಗಳಿಗೆ ಅರ್ಧ ದಿನ ಅಂದರೆ 2;30 ವರೆಗೂ ರಜೆ ಇರುತ್ತದೆ ನಂತರ ಎಂದಿನಂತೆ ಕಾರ್ಯ ನಿರ್ವಹಿಸಬಹುದು ಎಂದು ಹೇಳಿದೆ.
ಜನವರಿ 22ರಂದು ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿ ನಡೆಯುತ್ತಿರುವ ಆಚರಣೆಗಳ ಭಾಗವಾಗಿ ವಿಗ್ರಹವನ್ನ ಟ್ರಕ್ ಬಳಸಿ ದೇವಾಲಯಕ್ಕೆ ಸಾಗಿಸಲಾಗಿದೆ.