Saturday, December 7, 2024

ಬಿಜೆಪಿ ಡೋಂಗಿ ಹಿಂದುಗಳು, ಕಾಂಗ್ರೆಸ್ಸಿರೇ ನಿಜವಾದ ಹಿಂದುಗಳು : ಸಚಿವ ರಾಮಲಿಂಗಾ ರೆಡ್ಡಿ

Most read

ಬಿಜೆಪಿ ಡೋಂಗಿ ಹಿಂದುಗಳು ನಿಜವಾದ ಹಿಂದುಗಳು ಎಂದು ಅದು ಕಾಂಗ್ರೆಸ್ಸಿಗರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಟೀಕೆಯಿಂದ ತಪ್ಪಿಸಿಕೊಳ್ಳಲು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನ ದೇವಸ್ಥಾನ್ಳಲ್ಲಿ ವಿಶೇಷ ಪೂಜೆಗೆ ಆದೇಶಿಸಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿದ ಅವರು, ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೇವಿ. ಕಾಂಗ್ರೆಸ್‌ನವರು ನಿಜವಾದ ಹಿಂದುಗಳು. ನಾವು ಯಾವತ್ತೂ ಕೂಡ‌ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನ ತೆಗೆದುಕೊಂಡು ಬಂದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಯುಗಾದಿ ಹಬ್ಬದ ವೇಳೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲು ತಿಳಿಸಿದ್ದೆ. ಮುಂಬರುವ ಸಂಕ್ರಾಂತಿ ಹಬ್ಬಕ್ಕೂ ವಿಶೇಷ ಪೂಜೆ ಮಾಡಲು ಹೇಳುತ್ತೇನೆ. ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ, ಜನರು ಅವರನ್ನ ಏಕೆ‌ ಮನೆಗೆ ಕಳುಹಿಸಿದರು. ಈಗ ನಾವು ಕೆಲಸ ಮಾಡ್ತಾ ಇದ್ದೀವಿ.

More articles

Latest article