ಭಾರತದಲ್ಲಿ ಸದ್ಯದಲ್ಲಿಯೇ ದೊಡ್ಡದೊಂದು ನಡೆಯಲಿದೆ: ಹಿಂಡೆನ್‌ಬರ್ಗ್ ಎಚ್ಚರಿಕೆ

Most read

ಯುಎಸ್​​​ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ, ಎಕ್ಸ್​​ನಲ್ಲಿ ಟ್ವೀಟ್​​​ವೊಂದನ್ನು ಹಂಚಿಕೊಂಡಿದೆ. Something big soon India (ಸದ್ಯದಲ್ಲಿಯೇ ಭಾರತದಲ್ಲಿ ಮತ್ತೊಂದು ದೊಡ್ಡದು ನಡೆಯಲಿದೆ) ಎಂಬ ಸೂಚನೆಯೊಂದನ್ನು ನೀಡಿದೆ.

ಇನ್ನು ಈ ಟ್ವೀಟ್​​ ಎಲ್ಲ ಕಡೆ ಭಾರೀ ವೈರಲ್​ ಆಗುತ್ತಿದ್ದು, ಚರ್ಚೆ ಕೂಡ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಟ್ರೆಂಡ್​ ಆಗುತ್ತಿದೆ. ಹಿಂಡೆನ್‌ಬರ್ಗ್ ಈ ಹಿಂದೆ ಭಾರತ ಮೇಲೆ ಇಂತಹ ಸಂಶೋಧನೆಯನ್ನು ಮಾಡಿ ಸುದ್ದಿಯಾಗಿತ್ತು. ಇದೀಗ ಮತ್ತೆ ಭಾರತಕ್ಕೆ ಏನೋ ಕಾದಿದೆ ಎಂಬುದರ ಕುರಿತು ಪೋಸ್ಟ್​​​ ಮಾಡಿದೆ.

ಈ ಹಿಂದೆ ಭಾರತದ ಅದಾನಿ ಗ್ರೂಪ್​​ ಕಂಪನಿಯನ್ನು ಟಾರ್ಗೆಟ್​​​ ಮಾಡಿ ಒಂದು ಸಂಶೋಧನೆಯ ವರದಿಯನ್ನು ನೀಡಿತ್ತು. ಈ ಬಗ್ಗೆ ಸಂಸತ್​​​​ ಸಭೆಯಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ನಂತರ ಅದಾನಿ ಗ್ರೂಪ್‌ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿತ್ತು.

ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಿದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ. ಆಧಾರರಹಿತವಾದ ಆರೋಪಗಳನ್ನು ಮಾಡಲಾಗಿದೆ ಎಂದು ಗೌತಮ್​​ ಅದಾನಿ ಹೇಳಿತ್ತು.

More articles

Latest article