Sunday, September 8, 2024

ನಾಳೆ ಹಿಜಾಬ್ ಹಾಕಿದ್ರೆ ನಮ್ಮ ಹುಡುಗರು ಕೇಸರಿ ಹಾಕ್ತಾರೆ, ಇಡೀ ರಾಜ್ಯದ ಶಾಲೆಗಳಲ್ಲಿ ಗಲಭೆಗಳಾಗಬಹುದು: ನಳಿನ್‌ಕುಮಾರ್ ಕಟೀಲ್

Most read

ಸಿದ್ದರಾಮಯ್ಯ ಅವರು ಹಿಬಾಜ್ ನಿಷೇಧ ವಾಪಸ್ ಪಡೆದು ನಾಳೆ ವಿದ್ಯಾರ್ಥಿಗಳು ಹಿಬಾಜ್ ಹಾಕಿಕೊಂಡು ಬಂದರೆ ನಮ್ಮ ಹುಡುಗರು ಕೇಸರ ಹಾಕ್ತಾರೆ. ಇಡೀ ರಾಜ್ಯದಲ್ಲಿ ಗಲಭೆಯಾಗಬಹುದು ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾಧ್ಯಮಗಳ ಜೊತೆ‌ ಮಾತನಾಡಿ, ಹಿಜಾಬ್ ಸಮಸ್ಯೆ ಸದ್ಯ ನ್ಯಾಯಾಲಯದಲ್ಲಿದೆ ಹಿಜಾಬ್ ಗಲಾಟೆ ಆರಂಭವಾದಾಗ ನಮ್ಮ ಸರ್ಕಾರ ಶಾಲೆಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿತು.ಶಾಲೆಗಳು ಮತೀಯ, ಜಾತಿಯ, ಪಂಥ, ಪಂಗಡಗಳಿಂದ ಹೊರಗೆ ಇರಬೇಕು
ವಸ್ತ್ರ ಸಂಹಿತೆ ಮೂಲಕವೇ ಶಾಲೆಗಳು ನಡೀಬೇಕು
ವಸ್ತ್ರಸಂಹಿತೆ ಜಾರಿ ಬಳಿಕ ಹಿಜಾಬ್ ಚರ್ಚೆ ನ್ಯಾಯಾಲಯಕ್ಕೆ ಹೋಯ್ತು ಆದರೆ ಈಗ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮರೆಮಾಚಲು ಈ ವಿಚಾರ ತಂದಿದೆ

ಅವರ ಒಳಗಿನ ಒಳ ಜಗಳಗಳು ಹೊರ ಬರಬಾರದು ಅಂತ ಹಿಜಾಬ್ ವಿಚಾರ ಮುಂದಕ್ಕೆ ತಂದಿದ್ದಾರೆ ನ್ಯಾಯಾಲಯದಲ್ಲಿ ಇರೋ ಹೊತ್ತಲ್ಲಿ ಅವರು ಈ ಪ್ರಕರಣ ತೆಗೀಬಾರದಿತ್ತು ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯ ಈ ಹೇಳಿಕೆ ಸರಿಯಲ್ಲ
ಮತ್ತೆ ಹಿಜಾಬ್ ಶಾಲೆಗಳಿಗೆ ಬಂದ್ರೆ ಹಿಂದಿನ ಹಾಗೆ ಕೇಸರಿ ಪ್ರಕರಣಗಳು‌ ನಡೆಯುತ್ತೆ ಇಡೀ ರಾಜ್ಯದ ಶಾಲೆಗಳಲ್ಲಿ ಗಲಭೆಗಳು, ಗಲಾಟೆಗಳು‌ ಆಗಬಹುದು
ವಿದ್ಯಾರ್ಥಿಗಳ ಮಧ್ಯೆ ಮತ ಭಿನ್ನಮತ ಸೃಷ್ಟಿಯಾಗುತ್ತದೆ

ವೋಟ್ ಬ್ಯಾಂಕ್ ತುಷ್ಟೀಕರಣ, ಲೋಕಸಭಾ ಚುನಾವಣೆ ಮುಂದಿಟ್ಟು ಸಿದ್ದರಾಮಯ್ಯ ಹೇಳಿದ್ದಾರೆ
ಶಾಲೆಗಳಲ್ಲಿ ಮತೀಯ ಭಾವನೆ‌ ಕೆರಳಿಸೋದು ಒಬ್ಬ ಮುಖ್ಯಮಂತ್ರಿಯ ಬೇಜವಾಬ್ದಾರಿ ಹೇಳಿಕೆ ನ್ಯಾಯಾಲಯದಲ್ಲಿ ಇರುವಾಗ ಒಬ್ಬ ವಕೀಲನಾಗಿ ಹೇಳಿಕೆ ಕೊಟ್ಟಿರೋದು ಅವರ ಬೌದ್ದಿಕ ದಿವಾಳಿತನ ತೋರಿಸುತ್ತೆ.ಅವರೊಳಗಿನ ಗೊಂದಲ‌ ಮರೆ ಮಾಚಲು ಈ ರೀತಿ ಮಾಡಿದ್ದಾರೆ.ಹಕ್ಕುಗಳ ಬಗ್ಗೆ ಹೇಳಲು ಆಗಲ್ಲ, ಶಾಲೆಯಲ್ಲಿ ಅವನು ಬೇಕಾದದ್ದು ಓದಲಿ ಅಂದ್ರೆ ಆಗುತ್ತಾ? ಶಾಲೆಗಳಿಗೆ ನೀತಿ ನಿಯಮ ಇರಬೇಕು, ಅದು ಆ ಶಾಲೆಯ ಒಳಗೆ ಇರುತ್ತೆ.

ನಾಳೆ ಹಿಜಾಬ್ ಹಾಕಿದ್ರೆ ನಮ್ಮ ಹುಡುಗರು ಕೇಸರಿ ಹಾಕ್ತಾರೆ, ಅದು ಅವರ ಹಕ್ಕು.ಪಿಎಫ್ ಐ ಮತ್ತು ಸಿಎಫ್ಐ ನ ಮುಖವಾಣಿ ಕಾಂಗ್ರೆಸ್ ಬಿಜೆಪಿ ಇದರ ವಿರುದ್ದ ಹೋರಾಟ ಮಾಡಲಿದೆ ಮುಂದೆ ರಾಜ್ಯದಲ್ಲಿ ಆಗುವ ಗೊಂದಲಗಳಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದರು.

More articles

Latest article