Saturday, July 27, 2024

ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಹೋರಾಟ: ವಿದ್ಯಾರ್ಥಿಗಳಿಗಿಲ್ಲ ಪಾಠ!

Most read

ಸೇವಾ ಭದ್ರತೆ, ಸಮಾನ ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಒಂದು ತಿಂಗಳಿಂದ ಅತಿಥಿ ಉಪನ್ಯಾಸಕರು ಅನಿರ್ಧಿಷ್ಟವದಿ ಮುಷ್ಕರದಲ್ಲಿ ತೊಡಗಿರುವುದರಿಂದ ರಾಮನಗರ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿ ತರಗತಿಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿದೆ.

ರಾಮನಗರ ಜಿಲ್ಲೆಯಲ್ಲಿ ಒಟ್ಟು 09 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇಲ್ಲಿ ಕಾಯಂ ಉಪನ್ಯಾಸಕರಿಗಿಂತ ಅಥಿತಿ ಉಪನ್ಯಾಸಕರದ್ದೆ ಮೇಲುಗೈ ಇದ್ದು ಎಲ್ಳರೂ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಉಪನ್ಯಾಸಕರ ಜೊರತೆ ಉಂಟಾಗಿದೆ. ಜನವರಿ ಅಂತ್ಯದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಕೆಲ ಕಾಲೇಜುಗಳಲ್ಲಿ ಇಲ್ಲಿವರೆಗೆ ಶೇ.50ರಷ್ಟು ಪಾಠ ಪೂರ್ತಿಯಾಗಿಲ್ಲ.

ಪ್ರತಿ ಕಾಲೇಜಿನಲ್ಲೂ ಶೇ50%ಕ್ಕಿಂತ ಹೆಚ್ಚು ಅಥಿತಿ ಉಪನ್ಯಾಸಕರೇ ಕಾರ್ಯ ನಿರ್ವಹಿಸುತ್ತಿದ್ದು, ಅವರು ಲಭ್ಯವಿಲ್ಲದ ಕಾರಣ ಕಾಯಂ ಉಪನ್ಯಾಸಕರು ಇದ್ದರೂ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಕೇಳಿ ಬಂದಿದೆ.

ಇಷ್ಟೊತ್ತಿಗ ಶೇ. 75ರಷ್ಟು ಪಾಠ ಪೂರ್ಣಗೊಂಡಿರಬೇಕಿತ್ತು. ಹೆಚ್ಚುವರಿ ತರಗತಿ ನಡೆಸುವಂತೆ ಕಾಯಂ ಉಪನ್ಯಾಸಕರಿಗೆ ಸೂಚನೆ ನೀಡಲಾಗಿದ್ದರು. ಆದರು ಪಾಠಗಳು ಪೂರ್ಣವಾಗಿಲ್ಲ.. ಕೆಲವು ಕಾಲೇಜುಳಲ್ಲಿ ನಿರ್ದಿಷ್ಟ ವೇಳೆ ವಿಷಯಕ್ಕೆ ಕಾಯಂ ಉಪನ್ಯಾಸಕರಿಲ್ಲದ ಕಾರಣ ಅಥಿತಿ ಉಪನ್ಯಾಸಕರನ್ನೇ ಅವಲಂಬಿಸಬೇಕಾದ್ದು, ಅವರು ಹಾಜರಾಗದ ಕಾರಣ ಪಾಠಗಳು ಹಿಂದುದಿವೆ ಎಂದು ಆರೋಪಗಳ ಕೇಳಿ ಬಂದಿದೆ.

ನಮಗೆ ಯುಜಿಸಿ ನಿಯಮಾನುಸಾರ ಅರ್ಹತೆ ಇದ್ದರೂ ಕಾಯಂ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈಗಾಗಲೇ 15-20 ವರ್ಷ ಸೇವೆ ಸಲ್ಲಿಸಿದ್ದು ನಮಗೆ ಸೇವಾ ಭದ್ರತೆ, ಸಮಾನ ವೇತನ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದ್ದಾರೆ.

More articles

Latest article