ಹೆಲಿಕಾಪ್ಟರ್ ಅಪಘಾತ: 6 ಮಂದಿ ಪ್ರವಾಸಿಗರು ಸಾವು

ಡೆಹ್ರಾಡೂನ್: ಉತ್ತರಾಖಂಡದ ಗಂಗೋತ್ರಿ ದೇಗುಲಕ್ಕೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಉತ್ತರಕಾಶಿ ಜಿಲ್ಲೆಯ ಗಂಗಾನಿ ಬಳಿ ಪತನಗೊಂಡು 6 ಮಂದಿ ಪ್ರವಾಸಿಗರು ಮೃತಪಟ್ಟು, ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಸ್‌ ಡಿಆರ್‌ ಎಫ್ ಮೂಲಗಳ ಪ್ರಕಾರ ಏರೋಟ್ರಾನ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ವಿಟಿ-ಒ ಎಕ್ಸ್‌ ಎಫ್) ಒಡೆತನದ ಕ್ಯಾಪ್ಟನ್ ರಾಬಿನ್ ಸಿಂಗ್ ಪೈಲಟ್ ಮಾಡಿದ ಹೆಲಿಕಾಪ್ಟರ್ ಇಂದು ಬೆಳಗ್ಗೆ 8:50 ಕ್ಕೆ ಡೆಹ್ರಾಡೂನ್‌ ನ ಸಹಸ್ತ್ರಧಾರ ಹೆಲಿಪ್ಯಾಡ್‌ನಿಂದ ಹೊರಟಿತ್ತು. ಈ ಹೆಲಿಕಾಪ್ಟರ್ ನಲ್ಲಿ ಆರು ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ಗಂಗೋತ್ರಿಧಾಮದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಖರ್ಸಾಲಿ ಹೆಲಿಪ್ಯಾಡ್‌ ನಲ್ಲಿ ಹೆಲಿಕಾಪ್ಟರ್ ಇಳಿಯಬೇಕಿತ್ತು. ಆದರೆ ರಿಷಿಕೇಶ-ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಬಳಿ ಅಪಘಾತ ಸಂಭವಿಸಿದೆ.
ಮೃತರನ್ನು ಮುಂಬೈನ ಕಲಾ ಸೋನಿ (61), ವಿಜಯ ರೆಡ್ಡಿ (57) ಮತ್ತು ರುಚಿ ಅಗರ್ವಾಲ್ (56), ಉತ್ತರ ಪ್ರದೇಶದ ರಾಧಾ ಅಗರ್ವಾಲ್(79) ಆಂಧ್ರಪ್ರದೇಶದ ವೇದಾವತಿ ಕುಮಾರಿ (48) ಅಸು ನೀಗಿದ್ದಾರೆ. ಪೈಲಟ್ ಗುಜರಾತ್‌ ಮೂಲದವರು. ಗಾಯಗೊಂಡ ವ್ಯಕ್ತಿಯನ್ನು ಆಂಧ್ರ ಪ್ರದೇಶದ ಭಾಸ್ಕರ್ ಎಂದು ತಿಳಿದು ಬಂದಿದೆ.

ಎಸ್‌ ಡಿಆರ್‌ ಎಫ್ ಕಮಾಂಡೆಂಟ್ ಅರ್ಪಣ್ ಯದುವಂಶಿ, ಉತ್ತರಕಾಶಿ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ ಡಿಆರ್‌ ಎಫ್) ತಂಡಗಳು ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಅಪಘಾತಕ್ಕೆ ಕಾರಣಗಳು ತಿಳಿದು ಬಂದಿಲ್ಲ.

ಹೆಲಿಕಾಪ್ಟರ್ ಸುಮಾರು 200 ರಿಂದ 250 ಮೀಟರ್ ಆಳದ ಆಳವಾದ ಕಂದಕಕ್ಕೆ ಬಿದ್ದಿದೆ. ಎಸ್‌ ಡಿಆರ್‌ ಎಫ್ ತಂಡವು ಸ್ಥಳದಲ್ಲಿ ನೆಲೆಯನ್ನು ಸ್ಥಾಪಿಸಿ, ಕಮರಿಗೆ ಇಳಿಯಲು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಈ ಪ್ರದೇಶದಲ್ಲಿ ಇತ್ತೀಚೆಗೆ ತುರ್ತು ಲ್ಯಾಂಡಿಂಗ್ ನಂತರ ಈ ಘಟನೆ ನಡೆದಿದೆ. ಮೇ 5 ರಂದು, ಬದರಿನಾಥದಿಂದ ಡೆಹ್ರಾಡೂನ್‌ಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಬದರಿನಾಥ ಧಾಮ್ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಗೋಪೇಶ್ವರ ಕ್ರೀಡಾ ಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

More articles

Latest article

Most read