ಚನ್ನಪಟ್ಟಣಕ್ಕೆ ನೀರಾವರಿ ಯೋಜನೆ ತಂದು ಕೆರೆ ತುಂಬಿಸಿದ್ದು ಯೋಗೇಶ್ವರ್. ಅದನ್ನು ಮುಂದುವರೆಸಿಕೊಂಡು ಹೋಗಬಹುದಿತ್ತು ಆದರೆ ನಿಮ್ಮ ಅನುಕೂಲಕ್ಕೆ ಕ್ಷೇತ್ರ ಬಿಟ್ಟರೆ, ಜನರ ಅನುಕೂಲ ನೋಡುವವರ್ಯಾರು ?ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಮ್ಮ ಅಭಿವೃದ್ಧಿಗಾಗಿ ಮತ ಹಾಕುತ್ತೆವೆ ಎಂದು ಜನರು ನಿರ್ಣಯ ಮಾಡಿದ್ದಾರೆ. ನಿಮ್ಮನ್ನು ಚನ್ನಪಟ್ಟಣ ಬಿಡಿ ಎಂದು ಯಾರು ಹೇಳಿದ್ದರು? ಈಗ ಚನ್ನಪಟ್ಟಣಕ್ಕೆ ಮಗನನ್ನು ಕರೆತಂದಿದ್ದೀರಿ. ಸಿಪಿ ಯೋಗೇಶ್ವರ್ ಕೆರೆ ತುಂಬಿಸುವ ಯೋಜನೆಯನ್ನೇ ಮುಂದುವರೆಸಿಕೊಂಡು ಹೋಗಿದ್ದರೆ ಏನಾಗುತ್ತು. ನಿಮ್ಮ ಅನುಕೂಲಕ್ಕೆ ಚನ್ನಪಟ್ಟಣ ಕ್ಷೇತ್ರಬಿಟ್ಟು ಮಂಡ್ಯಕ್ಕೆ ಹೋಗಿದ್ದೀರಿ. ನಿಮ್ಮ ಅನುಕೂಲಕ್ಕೆ ಕ್ಷೇತ್ರ ಬಿಟ್ಟರೆ ಚನ್ನಪಟ್ಟಣದ ಜನರ ಅನುಕೂಲ ಯಾರು ನೋಡುವವರು? ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಐದು ವರ್ಷಗಳಲ್ಲಿ ಮಾಡಲಾಗದ ಸಾಧನೆಗಳನ್ನು ನೀರಾವರಿ ಇಲಾಖೆಯಲ್ಲಿ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ರಾಮನಗರದ ಮೇಲೆ ಪ್ರೀತಿ ಇದ್ದರೆ ಬಿಟ್ಟುಕೊಡಲಿ ಬಿಡಿ. ಚನ್ನಪಟ್ಟಣ ಅಭಿವೃದ್ಧಿಗೆ ಈ ಚುನಾವಣೆಯಿಂದ ದೂರ ಸರಿಯಲಿ. ಇನ್ನು ನೂರು ವರ್ಷ ಬಿಟ್ಟು ಬಂದರೆ, ಜನರು ಖುಷಿ ಪಡುತ್ತಾರೆ ಹಾಗೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಅವರನ್ನು ನಾವು ಟಾರ್ಗೆಟ್ ಮಾಡ್ತಿಲ್ಲ, ಬೈದಿಲ್ಲ ಅವರು ನಮ್ಮ ವಿರೋಧಿಗಳು ಅಂತಲೂ ಹೇಳಿಲ್ಲ. ಆದರೆ ಒಂದತ್ತು ಸತ್ಯ ಯೋಗೇಶ್ವರ್ ಅವರನ್ನು ಕಾಂಗ್ರೆಸ್ಗೆ ಕಳುಹಿಸಲು ಪ್ಲ್ಯಾನ್ ಮಾಡಿದ್ದೆ ಕುಮಾರಸ್ವಾಮಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.