ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಶಾಲೆಯಲ್ಲಿ ಪಿಯು ತರಗತಿಇ ಆರಂಭ ಮಾಡಬೇಕು ಎಂಬ ಅವರ ಕನಸು ನನಸಾಗಿದೆ. ಹಾಜಬ್ಬರ ಆಸೆಯಂತೆ ಸರ್ಕಾರ ಹರೇಕಳ ಹಾಜಬ್ಬರ ಶಾಲೆಯಲ್ಲೇ ಪಿಯುಸಿ ತರಗತಿಗಳನ್ನು ನಡೆಸಲು ಅನುಮತಿ ನೀಡಿದೆ.
ಕಿತ್ತಳೆ ಹಣ್ಣು ಮಾರಾಟ ಮಾಡಿ ದಿನಕ್ಕೆ 150 ರೂಪಾಯಿ ಗಳಿಸಿ, ಅದರಿಂದಲೇ ಜೀವನ ನಿರ್ವಹಣೆ ಮಾಡುವ ಜೊತೆಯಲ್ಲೇ ಅವರು ಶಾಲೆಯನ್ನೇ ನಿರ್ಮಿಸಿದ್ದಾರೆ. ಈ ಅಕ್ಷರ ಸಂತನ ಶಾಲೆಯಲ್ಲಿ ಇದೀಗ 1 ರಿಂದ 10ನೇ ತರಗತಿವರೆಗೂ ಸುಮಾರು 175 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರ ಆಸೆಯಂತೆ ಈಗ ಪಿಯು ತರಗತಿಯನ್ನು ಆ ಶಾಲೆಯಲ್ಲಿ ಆರಂಭಿಸಿದೆ.
ಜೂನ್ 1 ರಿಂದ ಹರೇಕಳದ ನ್ಯೂ ಪಡ್ಪು ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಿಯುಸಿ ತರಗತಿಗಳು ಆರಂಭವಾಗಲಿದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ತರಗತಿಗಳು ಆರಂಭವಾಗಲಿದೆ. ಇದಕ್ಕಾಗಿ ಪ್ರವೇಶಾತಿ ಪ್ರಕ್ರಿಯೆಗಳೂ ಶುರುವಾಗಿದೆ.