ಕೆರಗೋಡುವಿನಲ್ಲಿ ಹನುಮ ಧ್ವಜ ವಿವಾದ ತೀವ್ರ ಸ್ವರೂಪ ಪಡೆದುಕೊಂಡು, ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರ ಫ್ಲೆಕ್ಸ್, ಬ್ಯಾನರ್ ಕಂಡರೆ ಸಾಕು ಕಿತ್ತೆಸೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕುರಿತು ಮಂಡ್ಯ ಶಾಸಕ ಗಣಿಗ ರವಿ, ನಮ್ಮ ಕೆರಗೋಡು ಜನರಿಗೆ ಆ ಘೋಷಣೆ ಕೂಗುವುದಕ್ಕೂ ಬರಲ್ಲ. ಹೊರಗಿನವರನ್ನು ಕರೆತಂದು ಗಲಾಟೆಮಾಡಿ ಕಲ್ಲು ಹೊಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕೆರಗೋಡು ಜನಕ್ಕೆ ಈತರದ ಘೋಷಣೆ ಕೂಗೊಕೆ ಬರಲ್ಲ. ಇವರೆಲ್ಲರೂ ಹೊರಗಡೆಯಿಂದ ಬಂದ ಜನ ಇವರನ್ನು ಇಲ್ಲಿಗೆ ಕರೆಸಿ ಬೆಂಕಿ ಹಚ್ಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಪ್ರತಿಭಟನೆ ಮಾಡ್ತಾರೆ ಅಂದ್ರೆ ಏನು? ಜೆಡಿಎಸ್ ನ ರಾಮಚಂದ್ರ, ಬಿಜೆಪಿ ಮುಖಂಡ ಅಶೋಕ್ ಜಯರಾಮ್. ಸ್ಥಳೀಯ ಪುಢಾರಿಗಳು ಗಲಭೆ ಸೃಷ್ಟಿಸಿದ್ದಾರೆ.
ಹನುಮಧ್ವಜ ಹಾರಿಸಲು ಅನುಮತಿ ಕೊಡಲು PDOಗೆ ಅಧಿಕಾರ ಇಲ್ಲ. ಆ ಪಿಡಿಒ ಹೆದರಿಸಿ ಹನುಮ ಧ್ವಜಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಸ್ಥಳೀಯ ಪಿಡಿಒ ತಪ್ಪು ಕೂಡ ಇರೋದರಿಂದ ಪಿಡಿಒ ಅಮಾನತು ಮಾಡುವಂತೆ ಹೇಳಿದ್ದೇನೆ ಎಂದು ಹೇಳಿದ್ದಾರೆ.