ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತೆ. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಸಿದ್ದರಾಮಯ್ಯ ಸಾಹೇಬರು ರಾಜಿನಾಮೆ ಕೊಡಬಾರದು. ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲೇಬೇಕು’ ಎಂದು ಗೂಳಿಹಟ್ಟಿ ಶೇಖರ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.
‘2008 ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರಲು ನಾನು ಮೊದಲಿಗ. 1 ರೂಪಾಯಿ ಇಲ್ಲದೇ ಪುಕ್ಸಟ್ಟೆಯಾಗಿ ಸ್ವತಂತ್ರ ಕ್ಷೇತ್ರದಲ್ಲಿ ಆಯ್ಕೆಯಾದೆ. 1 ರೂಪಾಯಿ ಪಡೆಯದೇ ಪುಕ್ಸಟ್ಟೆಯಾಗಿ ಯಡಯೂರಪ್ಪಗೆ ಸಿಎಂ ಮಾಡಿದೆ. ಭೋವಿ ಸಮುದಾಯದವನಾಗಿ ಜನರಲ್ ಕ್ಷೇತ್ರದಲ್ಲಿ ಗೆದ್ದು ಬಿಎಸ್‌ವೈ ರನ್ನು ಸಿಎಂ ಮಾಡಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಮಾಡಿದ್ದೇ ಗೂಳಿಹಟ್ಟಿ ಶೇಖರ್’ ಎಂದು ಹೇಳಿದ್ದಾರೆ.
ಹೊಸದುರ್ಗ ಸಿದ್ದೇಶ್ವರ ದೇವಸ್ಥಾನದಲ್ಲಿ ಕುರುಬ ಸಮುದಾಯದ ಸಭೆ ಕರೆದಿದ್ರು. ಸಿದ್ದರಾಮಯ್ಯ ಸಿಎಂ ಆಗೋದಾದ್ರೆ ನಾನು ಬೆಂಬಲಿಸ್ತೀನಿ ಅಂದಿದ್ದೆ. ನಾನು ಸಿದ್ದರಾಮಯ್ಯನವರಿಗೆ ಸಿಎಂ ಆಗೋದಾದ್ರೆ ಓಟು ಹಾಕ್ತೀನಿ ಅಂದಿದ್ದೆ. ಆದ್ರೆ ಆಗ ಸಿದ್ದರಾಮಯ್ಯ ಬದಲಿಗೆ, ಯಡಿಯೂರಪ್ಪ ಸಿಎಂ ಆದ್ರು. ಬಿಎಸ್ ಯಡಿಯೂರಪ್ಪಗೆ ಪುಕ್ಸಟ್ಟೆ ಓಟು ಹಾಕಿದ್ದರಿಂದ ನನಗೆ ದುರಹಂಕಾರ’ ಎಂದು ಹೇಳಿದ್ದಾರೆ.
‘ನಾನಂತೂ ಸಿದ್ದರಾಮಯ್ಯ ಪರ ನಿಂತುಕೊಳ್ತೀನಿ. ಅವ್ರು ಎಲ್ಲಾ ಸಮುದಾಯವನ್ನ ಗೌರವದಿಂದ ತೆಗೆದುಕೊಂಡು ಹೋಗ್ತಾರೆ. ಆದ್ರೆ ಈಗ ಅವರ ಬಗ್ಗೆ ಅನೇಕ ಕಮೆಂಟ್ ಬರ್ತಿವೆ. ‘ಸಿಂಗಲ್ ಹಾಗೂ ಡಬಲ್ ಬೆಂಚಲ್ಲಿ ಉಲ್ಟಾ ಆದ್ರೆ ಬಿಜೆಪಿ ರಾಜಿನಾಮೆ ಕೊಡಿ ಅಂತಾರೆ. ನಮ್ಮ ಭಾರತ ಮಾತೆ, ನ್ಯಾಯ ದೇವತೆ ಸುಪ್ರೀಂ ಕೋರ್ಟ್‌ನಲ್ಲಿ ಕೂತಿದ್ದಾಳೆ. ಸುಪ್ರೀಂ ಕೋರ್ಟ್‌ನಲ್ಲಿ ಬರೋವರೆಗೆ ಸಿದ್ದರಾಮಯ್ಯ ರಾಜಿನಾಮೆ ಕೇಳಬಾರ್ದು. ಸುಪ್ರೀಂ ಕೋರ್ಟ್‌ನಲ್ಲಿ ಡಿಸೈಡ್ ಆಗೋವರೆಗೆ ಸಿದ್ದರಾಮಯ್ಯ ಸಿಎಂ ಆಗಿರಬೇಕು ಎಂದು ಹೇಳಿದ್ದಾರೆ.