ಇತಿಹಾಸ ಸೃಷ್ಟಿಸಿದ ಪ್ರಜ್ಞಾನಂದ : ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಮೊದಲ ಭಾರತೀಯ

ಸೇಂಟ್ ಲೂಯಿಸ್‌ : ಇಲ್ಲಿ ನಡೆದ ಪ್ರತಿಷ್ಠಿತ 'ಗ್ರ್ಯಾಂಡ್ ಚೆಸ್ ಟೂರ್'  ನಲ್ಲಿ, ಹಾಲಿ ಚಾಂಪಿಯನ್ ಫಬಿಯಾನೊ ಕರುವಾನಾ ವಿರುದ್ಧ ಅದ್ಭುತವಾಗಿ ಪುಟಿದೆದ್ದು ಗೆಲುವು ಸಾಧಿಸುವ ಮೂಲಕ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್ .ಪ್ರಜ್ಞಾನಂದ ಚೆಸ್ ಇತಿಹಾಸವನ್ನು ಸೃಷ್ಟಿಸಿದರು.

ಕ್ಲಾಸಿಕಲ್ ಪಂದ್ಯಗಳ ನಂತರ 3-9 ಅಂತರದಲ್ಲಿ ಹಿನ್ನಡೆಯಲ್ಲಿದ್ದ ಪ್ರಜ್ಞಾನಂದ, ಅಂತಿಮ ದಿನದ ಆಟವನ್ನು ಕರುವಾನಾಗಿಂತ ಆರು ಅಂಕಗಳಷ್ಟು ಹಿಂದಿನಿಂದ ಆರಂಭಿಸಿದರು. ಪ್ರಶಸ್ತಿ ಕೈತಪ್ಪುವ ಹಂತದಲ್ಲಿದ್ದಾಗ, 21 ವರ್ಷದ ಪ್ರಜ್ಞಾನಂದ ‘ರಾಪಿಡ್’ ವಿಭಾಗದಲ್ಲಿ ಅದ್ಭುತ ಹೋರಾಟ ಪ್ರದರ್ಶಿಸಿ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಅಂತರವನ್ನು ನಾಟಕೀಯವಾಗಿ ಕಡಿಮೆ ಮಾಡಿದ್ದಲ್ಲದೆ, ಮುನ್ನಡೆಯನ್ನೂ ಸಾಧಿಸಿದರು.

ನಂತರ, ತೀವ್ರ ಪೈಪೋಟಿಯಿಂದ ಕೂಡಿದ್ದ ನಾಲ್ಕು ‘ಬ್ಲಿಟ್ಜ್’ ಪಂದ್ಯಗಳಲ್ಲಿ ಪ್ರಜ್ಞಾನಂದ ತಮ್ಮ ಸಂಯಮವನ್ನು ಕಾಯ್ದುಕೊಂಡರು. ಕರುವಾನಾ ಅವರಿಂದ ತೀವ್ರ ಒತ್ತಡವಿದ್ದರೂ, ಪ್ರಜ್ಞಾನಂದ ಶಾಂತಚಿತ್ತರಾಗಿ ಆಡುವ ಮೂಲಕ 15-13 ಅಂತರದಲ್ಲಿ ಒಟ್ಟಾರೆ ಗೆಲುವನ್ನು ತಮ್ಮದಾಗಿಸಿಕೊಂಡರು

More articles

Latest article

Most read