ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಣೆ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಿ, ₹37.85 ಲಕ್ಷ ಮೌಲ್ಯದ 611.51 ಗ್ರಾಂ ಚಿನ್ನಾಭರಣವನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಶ್ರೀಲಂಕಾ ದೇಶದಿಂದ ಆಗಮಿಸಿದ್ದ ಮಹಿಳೆ ಬಳಿ ಚಿನ್ನ ಪತ್ತೆಯಾಗಿದ್ದು, ಫೆ.28ರಂದು ಶ್ರೀಲಂಕಾ ದೇಶದ ವಿಮಾನದಲ್ಲಿ ಚಿನ್ನ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದಾಗ ಮಹಿಳಾ ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ. ಆರೋಪಿಯಿಂದ ವಿವಿಧ ವಿನ್ಯಾಸದ ₹37.85 ಲಕ್ಷ ಮೌಲ್ಯದ 611.51 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.