ಸೌಜನ್ಯ ಪ್ರಕರಣ : ಸಂತೋಷ್ ರಾವ್ ವಿರುದ್ಧ ತನಿಖೆ ನಡೆಸದಂತೆ ಸುಪ್ರೀಂ ಕೋರ್ಟ್ ನಿರ್ದೇಶನ

ಬೆಂಗಳೂರು/ನವದೆಹಲಿ: 2012ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಪ್ರಕರಣದ ಮರು ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ ಅವರ ವಿಭಾಗೀಯ ಪೀಠವು ಮರು ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಗಡುವು ನೀಡಿದೆ.

ಈ ಮರು ತನಿಖೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಅತ್ಯಂತ ಮಹತ್ವದ ನಿರ್ದೇಶನವೆಂದರೆ, ಈಗಾಗಲೇ ನಿರಪರಾಧಿ ಎಂದು ಸಂತೋಷ್ ರಾವ್ ಅವರನ್ನು ಈ ಹೊಸ ತನಿಖೆಯ ವ್ಯಾಪ್ತಿಗೆ ತರಬಾರದು ಎಂಬುದು.

ಸೌಜನ್ಯ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿ ವಿಚಾರಣೆ ಎದುರಿಸಿದ್ದ ಸಂತೋಷ್ ರಾವ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯವು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ಖುಲಾಸೆಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾಗುವ ಹೊಸ ಎಸ್‌ಐಟಿ ಸಂತೋಷ್ ರಾವ್ ವಿರುದ್ಧ ತನಿಖೆ ನಡೆಸುವಂತಿಲ್ಲ. ಅವರನ್ನು ಹೊಸ ತನಿಖೆಯ ವಿಷಯವನ್ನಾಗಿ ಮಾಡುವುದು ಅಥವಾ ಪ್ರಕರಣದ ತನಿಖೆಯ ಭಾಗವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಹೊಸ ಎಸ್‌ಐಟಿಯ ವ್ಯಾಪ್ತಿಯಲ್ಲಿ ಇರುವುದಿಲ್ಲ.

ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೂ ಅವಕಾಶವಿಲ್ಲ

ಹೊಸ ಎಸ್‌ಐಟಿಗೆ ಹಿಂದಿನ ತನಿಖೆಗಳಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳನ್ನು ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಅಷ್ಟೇ ಅಲ್ಲದೆ, ಸೌಜನ್ಯ ಪ್ರಕರಣದ ಹಿಂದಿನ ತನಿಖೆ ನಡೆಸಿದ್ದ ಸಿಬಿಐ ಕೂಡ ಈ ಹೊಸ ಮರು ತನಿಖೆಯಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ ಹಿಂದಿನ ತನಿಖೆಯಿಂದ ಸಂಪೂರ್ಣವಾಗಿ ಪ್ರತ್ಯೇಕವಾದ ತಂಡದಿಂದ ಹೊಸ ತನಿಖೆ ನಡೆಯಬೇಕಿದೆ.

ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ದೇಶನಗಳನ್ನು ನೀಡಿದೆ.

2012ರ ಅಕ್ಟೋಬರ್ 9ರಂದು ಸೌಜನ್ಯ ನಾಪತ್ತೆಯಾಗಿದ್ದು, ಮರುದಿನ ಆಕೆಯ ಮೃತದೇಹ ಧರ್ಮಸ್ಥಳದ ಮಾನಸಂಕದಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಆರಂಭದಲ್ಲಿ ಸ್ಥಳೀಯ ಪೊಲೀಸರ ಕೈಯಲ್ಲಿದ್ದು, ನಂತರ ಸಿಐಡಿಗೆ ಮತ್ತು ಬಳಿಕ ಸಿಬಿಐಗೆ ವರ್ಗಾವಣೆಯಾಗಿತ್ತು. ಸಿಬಿಐ ತನಿಖೆಯಲ್ಲಿ ಸಂತೋಷ್ ರಾವ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ 2023ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತ್ತು.

ಇದೀಗ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಿಂದಿನ ತನಿಖೆಯಲ್ಲಿ ಭಾಗಿಯಾಗದ ಅಧಿಕಾರಿಗಳನ್ನೊಳಗೊಂಡ ಹೊಸ ಎಸ್‌ಐಟಿ, ಸಂತೋಷ್ ರಾವ್ ಅವರನ್ನು ತನಿಖೆಯ ವ್ಯಾಪ್ತಿಯಿಂದ ಹೊರಗಿಟ್ಟು, ಪ್ರಕರಣದ ಇತರ ಆಯಾಮಗಳನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಿದೆ. ಮೂರು ತಿಂಗಳ ಗಡುವಿನೊಳಗೆ ತನಿಖೆ ಪೂರ್ಣಗೊಳಿಸುವ ಹೊಣೆಗಾರಿಕೆಯನ್ನೂ ನ್ಯಾಯಾಲಯ ರಾಜ್ಯ ಸರ್ಕಾರದ ಮೇಲೆ ಹಾಕಿದೆ.

More articles

Latest article

Most read