Saturday, May 18, 2024

ಧಾರವಾಡ ಕ್ಷೇತ್ರಕ್ಕೆ ಪ್ರಲ್ಹಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ಕೊಡಿ : ಕಾಂಗ್ರೆಸ್ ಸವಾಲು

Most read

ಬರುವ ಲೋಕಸಭಾ ಚುನವಾಣೆಯಲ್ಲಿ ಹುಬ್ಬಳಿ-ಧಾರವಾಡ ಕ್ಷೇತ್ರದಿಂದ ಪ್ರಲ್ಹಾದ ಜೋಶಿ ಬದಲು ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಗೆ ಟಿಕೆಟ್ ಕೊಡಿ ಎಂದು ಬಿಜೆಪಿಗೆ ರಾಜ್ಯಕಾಂಗ್ರೆಸ್ ಸವಾಲು ಎಸಗಿದೆ.

ಟ್ವೀಟ್ ಮಾಡಿರುವ ಕಾಂಗ್ರೆಸ್, ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ್ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ ಎಂದು ಹೇಳಿದೆ.

ಮುಂದುವರೆದು, ಆತನ ಮೇಲೆ ಬಿಜೆಪಿಗೆ ಕಾಳಜಿ, ಪ್ರೀತಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರಲ್ಹಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ಕೊಟ್ಟು, ಹೊಸ ಪ್ರತಿಭೆಯನ್ನು ಪರಿಚಯಿಸಲಿ ಎಂದು ಹೇಳಿದೆ.

ಕ್ರಿಮಿನಲ್ ಗಳಿಗೆ, ಕಳ್ಳರಿಗೆ, ಅತ್ಯಾಚಾರಿಗಳಿಗೆ, ರೌಡಿಗಳಿಗೆ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಚಿತ್ತಾಪುರ ಕ್ಷೇತ್ರದಲ್ಲಿ ತೋರಿಸಿಕೊಟ್ಟಿದೆ. ಮೋದಿ ರೌಡಿ ಶೀಟರ್‌ಗೆ ಕೈ ಮುಗಿದು ನಿಲ್ಲುವ ಮೂಲಕ ಸಮಾಜಘಾತುಕ ಶಕ್ತಿಗಳೇ ಬಿಜೆಪಿಯ ಶಕ್ತಿ ಎಂಬುದು ನಿರೂಪಿತವಾಗಿದೆ.

More articles

Latest article