Saturday, May 18, 2024

ನಿಯಮಗಳ ಉಲ್ಲಂಘನೆ ಆರೋಪ; ಮಾಲ್ ಆಫ್ ಏಷ್ಯಾಗೆ ಸಾಲು ಸಾಲು ನೋಟಿಸ್

Most read

ಏಷ್ಯಾದಲ್ಲೇ ಅತಿ ದೊಡ್ಡ ಮಾಲ್‌ ಎನ್ನಿಸಿಕೊಂಡ ಮಾಲ್‌ ಆಫ್‌ ಏಷ್ಯಾ ಇತ್ತೀಚಿಗಷ್ಟೇ ಉದ್ಘಾಟನೆಯಾಗಿತ್ತು. ಉದ್ಘಾಟನೆಯಾದ ದಿನದಿಂದಲೂ ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಿರುವ ಈ ಮಾಲ್ಗೆ ಈಗ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಬಿಬಿಎಂಪಿ ನಕ್ಷೆ ಬದಲಾಯಿಸಿ ಕಾಮಗಾರಿ ಮಾಡಿರುವ ಆರೋಪ. ಪಾರ್ಕಿಂಗ್ ಏರಿಯಾ ಅಂತಾ ಪ್ಲಾನ್ ನಲ್ಲಿ ತೋರಿಸಿ ಪಾರ್ಟಿ ಏರಿಯಾ ಅಂತಾ ಮಾರ್ಪಾಡು ಮಾಡಿರುವ ಕಾರಣ ಬಿಬಿಎಂಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದೆ.

90 ಡೆಸಿಬಲ್ ಸೌಂಡ್ ಹೊರ ಬರುತ್ತಿರುವ ಹಿನ್ನೆಲೆ ನೋಟಿಸ್. ಶಬ್ದಮಾಲಿನ್ಯ ಮಾಪನ ಮಾಡಿದ ವೇಳೆ ನಿಯಮ ಉಲ್ಲಂಘನೆ ಬೆಳಕಿಗೆ ಬಂದಿದ್ದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ನೋಟಿಸ್ ನೀಡಿದೆ.

ಕನ್ನಡ ನಿರ್ಲಕ್ಷ್ಯ ಮಾಡಿದ್ದ ಮಾಲ್ ಆಫ್ ಏಷ್ಯಾ ಮೇಲೆ ಕರವೇ ಕಾರ್ಯಕರ್ತರು ಕಳೆದ ವಾರ ದಾಳಿ ನಡೆಸಿ, ನಾಮಪಲಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ತೀವ್ರ ಪ್ರತಿಭಟನೆ ಎದುರಿಸಿದ ನಂತರ ಮಾಲ್ನಲ್ಲಿ ಕನ್ನಡ ನಾಮಫಲಕ ಹಾಕಿದ್ದರು. ಆದರೆ ಅನೇಕ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡುಬಂದ ಹಿನ್ನೆಲೆ ಮಾಲ್ ಆಫ್ ಏಷ್ಯಾಗೆ ತಾತ್ಕಾಲಿಕವಾಗಿ ಬೀಗ ಜಡಿಯಲಾಗಿತ್ತು. ಈಗ ಗಂಭೀರ ನಿಯಮಗಳ ಉಲ್ಲಂಘಿಸಿರುವ ಕಾರಣ ಈ ಮಾಲ್ಗೆ ಸಾಲು ಸಾಲು ನೋಟಿಸ್ ಬಂದಿದೆ.

More articles

Latest article