ರೇಣುಕಾಸ್ವಾಮಿ ಮೊಬೈಲ್‌ ಪತ್ತೆಗೆ ಪೌರ ಕಾರ್ಮಿಕರ ಬಳಕೆ: ಸಮಾಜ ಕಲ್ಯಾಣ ಇಲಾಖೆಯಿಂದ ಬಿಬಿಎಂಪಿಗೆ ನೋಟಿಸ್‌

ಕೊಲೆಯಾದ ರೇಣುಕಾಸ್ವಾಮಿ ಮೊಬೈಲ್‌ಫೋನ್ ಪತ್ತೆ ಮಾಡಲು ರಾಜಕಾಲುವೆಗೆ ಬಿಬಿಎಂಪಿ ಪೌರ ಕಾರ್ಮಿಕರನ್ನಿಳಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಮಾಜ ಕಲ್ಯಾಣ ಇಲಾಖೆ ನೋಟಿಸ್ ಜಾರಿ ಮಾಡಿದೆ. 

ಪ್ರಕರಣದಲ್ಲಿ ಮೊಬೈಲ್‌ ಫೋನ್ ಹುಡುಕಲು ಪೌರಕಾರ್ಮಿಕರನ್ನು ಬಳಸಿರುವ ಬಗ್ಗೆ ಮಾಧ್ಯಮ ವರದಿ ಮಾಡಿತ್ತು. ಈ ಕಾರ್ಯಾಚರಣೆ ನಿಯಮಗಳ ಉಲ್ಲಂಘನೆಯಾಗಿದೆ. ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ದೂರು ನೀಡಿತ್ತು. ಅದರಂತೆ ತುರ್ತು ನೋಟಿಸ್ ಜಾರಿ ಮಾಡಿದ್ದಾರೆ.

More articles

Latest article

Most read