ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ : ಶರದ್‌ ಪವಾರ್

ಕೊಲ್ಹಾಪುರ : ದೇಶದಲ್ಲಿ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದ್ದು, ಪ್ರಗತಿಪರ ವಿಚಾರಧಾರೆಯ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಹಿರಿಯ ರಾಜಕಾರಣಿಯಾದ ಶರದ್ ಪವಾರ್ ಹೇಳಿದ್ದಾರೆ.

ಮಂಗಳವಾರ ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ಹತ್ಯೆಗೀಡಾದ ಎಡಪಂಥೀಯ ನಾಯಕ ಗೋವಿಂದ್ ಪನ್ಸಾರೆ ಅವರ ಸ್ಮಾರಕವನ್ನು ಅನಾವರಣಗೊಳಿಸಿದ ನಂತರ ಮಾತನಾಡಿದ ಅವರು, ʼಪ್ರತಿಗಾಮಿʼ ಶಕ್ತಿಗಳ ವಿರುದ್ಧ ಒಗ್ಗಟ್ಟಿನ ನಿಲುವು ತೆಗೆದುಕೊಳ್ಳಬೇಕು ಎಂದು ಕರೆಕೊಟ್ಟರು.

ʼಇಂದು ಅಧಿಕಾರ ದುರುಪಯೋಗವಾಗುತ್ತಿದೆ, ದೇಶದ ಪ್ರಗತಿಪರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ಬರಹಗಾರರಿಗೆ ನಿರ್ಬಂಧಗಳನ್ನು ತರಲಾಗುತ್ತಿದೆ ಮತ್ತು ಕಾರ್ಪೋರೆಟ್‌ ಕಂಪನಿಗಳ ಜೊತೆ ಸೇರಿ ಸರ್ಕಾರವು ಮಾಧ್ಯಮಗಳ ನಿರ್ಬಂಧವನ್ನು ಹೇರಲಾಗುತ್ತಿದೆ. ಇದರಿಂದ ಅಧಿಕಾರದಲ್ಲಿರುವವರು ನಮ್ಮ ಮೂಲಭೂತ ಹಕ್ಕುಗಳ ಮೇಲಿನ ದಾಳಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪವಾರ್ ಆರೋಪಿಸಿದ್ದಾರೆ.

More articles

Latest article

Most read