ಮೋದಿ- ಟ್ರಂಪ್‌ ಸ್ನೇಹ ಭಾರತಕ್ಕೆ ದುಬಾರಿಯಾಗುತ್ತಿದೆ: ಜೈರಾಮ್‌ ರಮೇಶ್‌ ಆಕ್ರೋಶ

Most read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸ್ನೇಹ ದೇಶಕ್ಕೆ ದುಬಾರಿಯಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಕಿಡಿ ಕಾರಿದ್ದಾರೆ.

ಅವರಿಬ್ಬರು ಹಳೆಯ ಸ್ನೇಹಿತರು ಎಂಬುದನ್ನು ಬಲಪಡಿಸಲು ಫೋಟೋ ಆಪ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಹೇಳುವ ಮೂಲಕ ಟ್ರಂಪ್ ಮತ್ತು ಪಿಎಂ ಮೋದಿ ಸ್ನೇಹ ಸಂಬಂಧದ ಹೇಳಿಕೆಗಳನ್ನು ಅವರು ಲೇವಡಿ ಮಾಡಿದ್ದಾರೆ.

“ದೋಸ್ತ್ ದೋಸ್ತ್ ನ ರಹಾ’ ಎಂಬ ಜನಪ್ರಿಯ ಹಿಂದಿ ಚಲನಚಿತ್ರಗೀತೆ ಇದೆ. ಪ್ರಧಾನಿಗೂ ಈ ಹಾಡು ಗೊತ್ತಿರಬೇಕು. ‘ದೋಸ್ತ್ ದೋಸ್ತ್ ನ ರಹಾ, ಟ್ರಂಪ್ ಯಾರ್ ಹಮೇಂ ತೇರಾ ಐತ್ಬಾರ್ ನ ರಹಾ’. ಅವರಿಬ್ಬರು Howdy ಮೋದಿ’ ಮತ್ತು ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಸಿದ್ದರು. ‘ಅಬ್ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಹೇಳಿದ್ದರು. ಫೋಟೋ ಶೂಟಿಂಗ್‌ ಕೂಡಾ ನಡೆದಿತ್ತು. ಟ್ರಂಪ್ ಅಧಿಕಾರ ವಹಿಸಿಕೊಂಡ ದಿನದಂದು ನಮ್ಮ ವಿದೇಶಾಂಗ ಸಚಿವರು ಮೊದಲ ಸಾಲಿನಲ್ಲಿ ಕುಳಿತಿದ್ದರು. ಅಧ್ಯಕ್ಷ ಟ್ರಂಪ್ ಅವರೊಂದಿಗೆ ವಿಶೇಷ ಬಾಂಧ್ಯವನ್ನು ಹಂಚಿಕೊಳ್ಳುವುದರೊಂದಿಗೆ ಅವರು ಅವರು ಹಳೆಯ ಸ್ನೇಹಿತರು ಎಂದು ಮೋದಿ ಹೇಳುತ್ತಿದ್ದರು.

ಆದರೆ ಟ್ರಂಪ್‌ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ರಷ್ಯಾದಿಂದ ತೈಲವನ್ನು ಖರೀದಿಸದಂತೆ ಒತ್ತಡ ಹಾಕಲಾಗುತ್ತಿದೆ. ಇದು ಉಭಯ ನಾಯಕರ ನಡುವಿನ “ವಿಶೇಷ ಬಾಂಧವ್ಯ” ದ ಪರಿಣಾಮದ ಫಲ ಇದಾಗಿದೆ. ಈ ನಿರ್ಧಾರಗಳಿಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಭಾರತ ಪಾಕ್‌ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇ ನಾನು ಎಂದು ಟ್ರಂಪ್ ಬರೋಬ್ಬರಿ 32 ಬಾರಿ ಹೇಳಿಕೊಂಡಿದ್ದಾರೆ. ಟ್ರಫ್‌ ಅವರ ಈ ಹೇಳಿಕೆ ಕುರಿತು ಪ್ರಧಾನಿ ಮೋದಿ ತುಟಿ ಬಿಚ್ಚಿಲ್ಲ. ಅಮೆರಿಕದೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

More articles

Latest article