Sunday, July 14, 2024

ಪಾರ್ಟಿ ಕೊಡಿಸುವುದಾಗಿ ಕರೆದು ಬಿಜೆಪಿ ಮುಖಂಡನನ್ನು ಕೊಂದ ಸ್ನೇಹಿತರು

Most read

ಅಫಜಲಪುರ: ಸಂಸದ ಡಾ. ಉಮೇಶ್ ಜಾದವ್‌ ಆಪ್ತ ಬಳಗದ ಮುಖಂಡ ಗಿರೀಶ್‌ ಚಕ್ರ ಎಂಬಾತನನ್ನು ಆತನ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಗಿರೀಶ್‌ ಚಕ್ರ ಅಫಜಲಪುರದ ಪ್ರಭಾವಿ ಬಿಜೆಪಿ ಮುಖಂಡನಾಗಿ ಬೆಳೆಯುತ್ತಿದ್ದ. ಇತೀಚಿಗೆ ಆತನನ್ನು ಬಿಎಸ್‌ಎನ್‌ಎಲ್‌ ಸಲಹಾ ಸಮಿತಿಗೆ ನಿರ್ದೇಶಕನನ್ನಾಗಿ ನೇಮಕ ಮಾಡಲಾಗಿತ್ತು. ಇದೇ ಸಂತೋಷಕ್ಕೆ ಪಾರ್ಟಿ ಮಾಡೋಣ ಬಾ ಎಂದು ಕರೆದ ಆತನ ಸ್ನೇಹಿತರು ಕೊಂದು ಹಾಕಿದ್ದಾರೆ.

ಅಫಜಲಪುರದ ಸಾಗನೂರ ಎಂಬ ಗ್ರಾಮದ ಜಮೀನೊಂದರಲ್ಲಿ ಈ ಹತ್ಯೆ ನಡೆದಿದ್ದು, ಗಿರೀಶ್‌ ಚಕ್ರನ ಮೇಲೆ ಮಾರಾಕಾಸ್ತ್ರಗಳಿಂದ ತೀವ್ರವಾಗಿ ದಾಳಿ ನಡೆದ ಕಾರಣಕ್ಕೆ ಅಸು ನೀಗಿದ್ದಾನೆ.

ಗಾಣಗಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

ಘಟನೆಗೂ ಮುನ್ನ ಸ್ಥಳಕ್ಕೆ ಬಂದ ಗಿರೀಶನ ಕಣ್ಣುಗಳಿಗೆ ಖಾರದ ಪುಡಿ ಎರಚಿ ನಂತರ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಹೀಗಾಗಿ ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.

More articles

Latest article