ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿಯೊಬ್ಬ ಫೋನ್ ಕಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿಯ ಕಾರನ್ನು ಅಡ್ಡಗಟ್ಟಿ ಯುವತಿಯನ್ನು ಕಾರಿನಿಂದ ಹೊರಗೆಳೆದು ಹಲ್ಲೆ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಅಗನಿ ಗ್ರಾಮದಲ್ಲಿ ನಡೆದಿದೆ.
ಮದನ್ ಹಲ್ಲೆ ಮಾಡಿದ ಅರಣ್ಯ ಇಲಾಖೆಯ ಆರ್‌ಆರ್‌ಟಿ ಸಿಬ್ಬಂದಿ ಆಗಿದ್ದು ವರ್ಷಿಣಿ ಹಲ್ಲೆಗೊಳಗಾದ ಯುವತಿ. ಮದನ್‌ಗೆ ಮದುವೆಯಾಗಿದ್ದು ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿಯಿಂದ ದೂರವಾಗಿದ್ದರು ಎನ್ನಲಾಗಿದೆ.
ಮದನ್ ತಾಯಿ ಅಗ್ನಿ ಗ್ರಾಮದ ವೀಣಾ ಎಂಬುವವರ ಮನೆಗೆ ಮನೆಗೆಲಸಕ್ಕೆ ಹೋಗುತ್ತಿದ್ದರು. ಮದನ್ ಹೇಗೋ ವೀಣಾ ಅವರ ಮೊಬೈಲ್ ನಂಬರ್ ಸಿಕ್ಕಿದ್ದು ಅವರಿಗೆ ಮೆಸೇಜ್ ಮಾಡುತ್ತಿದ್ದ. ಇದರಿಂದ ಸಿಟ್ಟಾದ ವೀಣಾ ಮದನ್‌ಗೆ ವಾರ್ನ್ ಮಾಡಿ ನಂಬರ್ ಬ್ಲಾಕ್ ಮಾಡಿದ್ದರು.
ಇಷ್ಟಾದರೂ ಸುಮ್ಮನಾಗದ ಮದನ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವೀಣಾ ಪುತ್ರಿ ವರ್ಷಿಣಿ ನಂಬರ್ ಸಂಗ್ರಹಿಸಿ ಅವರಿಗೆ ಕಾಲ್ ಮಾಡಿ ನಿಮ್ಮ ನಂಬರ್‌ನಿಂದ ಮಿಸ್ಡ್ ಕಾಲ್ ಬಂದಿದೆ ನೀವು ಯಾವ ಊರು ಎಂದೆಲ್ಲಾ ಕೇಳಿದ್ದಾನೆ. ಸಕಲೇಶಪುರ ಎಂದಿದ್ದಕ್ಕೆ ನಾನು ಸಕಲೇಶಪುರದವನು ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಾನೆ.
ಈ ವ್ಯಕ್ತಿ ಕಳೆದ 2 ತಿಂಗಳಿಂದ ಅಗನಿಯಲ್ಲಿರುವ ತಾಯಿ ಹಾಗೂ ಮಗಳಿಗೆ ಮೆಸೇಜ್ ಮೂಲಕ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸಿದಾಗ ಅವರು ಆತನ ಮೊಬೈಲ್ ನ್ನು ಬ್ಲಾಕ್ ಮಾಡಿದ್ದರು. ಆದರೆ ಪಟ್ಟು ಬಿಡದ ಈತ ಇನ್ ಬಾಕ್ಸ್ ಗೇ ಮೆಸೇಜ್ ಹಾಕುತ್ತಿದ್ದ.
ಆ ವರ್ಷಿಣಿ ಬ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು. ಹುಷಾರಿಲ್ಲದೆ ಇದ್ದುದರಿಂದ ಅದೇ ದಿನ ರಾತ್ರಿ 11-30 ಗಂಟೆಯಲಿ ಅಗನಿ ಗ್ರಾಮಕ್ಕೆ ಬಂದು ಮನೆಗೆ ಹೋಗಿ ನಡೆದಿರುವ ವಿಚಾರವನ್ನು ತಾಯಿಗೆ ತಿಳಿಸಿದ್ದಾರೆ. ನಂತರ ದಿ: 04-03-2024 ರಂದು ವಾಪಸ್ ಕೆಲಸಕ್ಕೆ ಹೋಗುವ ಸಲುವಾಗಿ ತಮ್ಮ ಕಾರಿನಲ್ಲಿ ಸಕಲೇಶಪುರಕ್ಕೆ ಡ್ರಾಪ್ ತೆಗೆದುಕೊಳ್ಳೋಣವೆಂದು ಅಗನಿ ಗ್ರಾಮದ ರಾಜುರವರೊಂದಿಗೆ ಕಾರಿನಲ್ಲಿ, ಬೆಳಿಗ್ಗೆ 9 ಗಂಟೆಯಲ್ಲಿ ಅಗನಿಯ ಮದನ್ ರವರ ಮನೆಯ ಮುಂಭಾಗದ ರಸ್ತೆಯಲ್ಲಿ ಬರುತ್ತಿದ್ದಾಗ ಮದನ್ ನು ಕಾರನ್ನು ಮುಂದೆ ಹೋಗದಂತೆ ಅಡ್ಡಗಟ್ಟಿದನೆನ್ನಲಾಗಿದೆ.
ಆಗ ಯುವತಿ ಏಕೆ ಅಡ್ಡ ಗಟ್ಟುತ್ತಿ ಎಂದು ಕೇಳಿದಾಗ ಅವನು ಆಕೆಯ ಫೋನನ್ನು ಕಿತ್ತುಕೊಳ್ಳಲು ಪ್ರಯತ್ನಿಸಿ ಫೋನ್ ಮಾಡಿದರೆ ವಾಪಸ್ ಮಾಡುವುದಿಲ್ಲವ ಎಂದು ಅವಾಚ್ಯ ಶಬ್ದಗಳಿಂದ ಬೈದು ಆಕೆಯ ಕಪಾಲಕ್ಕೆ, ಎಡಕಿವಿಗೆ, ಎಡಕೈಗೆ ಕೈಯಿಂದ ಹೊಡೆದು ಬಟ್ಟೆ ಹರಿದು ಹಾಕಿದ್ದಾನೆ ಎಂದು ತಿಳಿದು ಬಂದಿದೆ .
ಆಗ ಆ ಯುವತಿ ತಾಯಿಗೆ ಕೂಡಲೇ ಫೋನ್ ಮಾಡಿದಾಗ ತಾಯಿ ಅಲ್ಲಿಗೆ ಬಂದು ಏಟಾಗಿದ್ದ ಯುವತಿಯನ್ನು ಅದೇ ಕಾರಿನಲ್ಲಿ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈತ ಇನ್ನೂ ಹಲವಾರು ಯುವತಿಯರಿಗೆ ವಾಟ್ಸಪ್ಪ್ ಮೂಲಕ ಅಶ್ಲೀಲ ಚಿತ್ರ ಹಾಗೂ ವಿಡಿಯೋ ಕಳುಹಿಸುವ ಘಟನೆ ಕೂಡ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮದನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.