ನೇಪಾಳದಲ್ಲಿ ಪ್ರವಾಹ : 133 ಮಂದಿ ಭಾರತೀಯ ಪ್ರವಾಸಿಗರು ನಾಪತ್ತೆ

ನವದೆಹಲಿ : ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳ ಮೂಲಕ ಹರಿಯುವ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ, ಟಿಬೆಟ್‌ನ ಕೈಲಾಶ್ ಮಾನಸ ಸರೋವರಕ್ಕೆ ತೆರಳುತ್ತಿದ್ದ ಸುಮಾರು 400 ಯಾತ್ರಾರ್ಥಿಗಳ ಪೈಕಿ ಕನಿಷ್ಠ 133 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ.

ಈ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 46ಕ್ಕೆ ಏರಿದೆ. ಗಡಿಯ ಟಿಬೆಟ್ ಭಾಗದಿಂದ ನುಗ್ಗಿಬಂದ ಪ್ರವಾಹದ ನೀರು ನೇಪಾಳದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದ್ದು, ಹಲವು ಗ್ರಾಮಗಳನ್ನು ಕೊಚ್ಚಿಕೊಂಡು ಹೋಗಿದೆ ಎಂದು ಎಎಫ್‌ಪಿ ಅಸುದ್ದಿ ಸಂಸ್ಥೆ ವರದಿ ಮಾಡಿದೆ.

ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರವಾಹ ಪೀಡಿತ ಪ್ರದೇಶದಿಂದ ಕನಿಷ್ಠ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಇವರಲ್ಲಿ 291 ವಿದೇಶಿಯರು ಮತ್ತು 93 ನೇಪಾಳಿ ಪ್ರಜೆಗಳು ಸೇರಿದ್ದಾರೆ. ವಿದೇಶಿಯರ ಪೈಕಿ 105 ಮಂದಿ ಭಾರತೀಯ ಪ್ರಜೆಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರು ವಿವಿಧ ಟ್ರಾವೆಲ್ ಏಜೆನ್ಸಿಗಳ ಮೂಲಕ ಯಾತ್ರೆಗೆ ತೆರಳಿದ್ದರು.

ರಸುವಾ ಜಿಲ್ಲೆಯಲ್ಲಿ ನೇಪಾಳ ಪೊಲೀಸರ ಕನಿಷ್ಠ 26 ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಶಸ್ತ್ರ ಪೊಲೀಸ್ ಪಡೆಯ ಏಳು ಸಿಬ್ಬಂದಿ ಕೂಡ ನಾಪತ್ತೆಯಾಗಿದ್ದಾರೆ ಎಂದು ಆ ಪಡೆ ತಿಳಿಸಿದೆ.

ನೇಪಾಳ ಸೇನೆಯು ಪ್ರಭಾವಿತ ಪ್ರದೇಶಕ್ಕೆ ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ನಿಯೋಜಿಸಿದೆ. “ಹಾನಿಯ ವಿವರಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಜಲವಿದ್ಯುತ್ ಯೋಜನೆಗಳಿಗೆ ಹಾನಿ

ಬುಧವಾರ ನೇಪಾಳದ ಉತ್ತರದ ಜಿಲ್ಲೆಗಳಲ್ಲಿ ಸಂಭವಿಸಿದ ಭಾರಿ ಪ್ರವಾಹವು ರಸ್ತೆಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡಿದೆ; ಈ ಮಧ್ಯೆ, ಅಧಿಕಾರಿಗಳು ಉಂಟಾದ ಹಾನಿಯ ಪ್ರಮಾಣವನ್ನು ಅಂದಾಜಿಸಲು ಶ್ರಮಿಸುತ್ತಿದ್ದಾರೆ.

ಪ್ರವಾಹದಿಂದಾಗಿ ತಮ್ಮ ಕನಿಷ್ಠ ಆರು ಪ್ರಮುಖ ಜಲವಿದ್ಯುತ್ ಮತ್ತು ವಿದ್ಯುತ್ ಪ್ರಸರಣ ಘಟಕಗಳಿಗೆ ಹಾನಿಯಾಗಿದೆ ಎಂದು ನೇಪಾಳ ವಿದ್ಯುತ್ ಪ್ರಾಧಿಕಾರ (NEA) ತಿಳಿಸಿದೆ. ಇವುಗಳಲ್ಲಿ ರಾಸುವಗಧಿ, ಚಿಲಿಮೆ, ತ್ರಿಶೂಲಿ 3A, ತ್ರಿಶೂಲಿ 3B ಹಬ್ 220 kV ಸಬ್‌ಸ್ಟೇಷನ್, ತ್ರಿಶೂಲಿ ಜಲವಿದ್ಯುತ್ ಕೇಂದ್ರ ಮತ್ತು ದೇವಿಘಾಟ್ ಜಲವಿದ್ಯುತ್ ಕೇಂದ್ರಗಳು ಸೇರಿವೆ.

ಈ ವಿಪತ್ತು ಪ್ರಾಧಿಕಾರದ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಳಿಗೆ ಹಾನಿ ಉಂಟುಮಾಡಿದೆ. ಪರಿಣಾಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅದು ಹೇಳಿದೆ. ನೇಪಾಳದ ಹಲವು ಹೆದ್ದಾರಿಗಳನ್ನು ಕೂಡ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿನಾಶಕಾರಿ ದೃಶ್ಯಗಳು

ಸಾಮಾಜಿಕ ಜಾಲತಾಣಗಳಲ್ಲಿ ನೇಪಾಳ ಪೊಲೀಸರು ಮತ್ತು ಇತರರು ಹಂಚಿಕೊಂಡಿರುವ ವಿಡಿಯೋಗಳಲ್ಲಿ, ಟಿಬೆಟ್ ಗಡಿಯನ್ನು ಹೊಂದಿರುವ ಹಿಮಾಲಯದ ರಾಷ್ಟ್ರದ ಜಿಲ್ಲೆಗಳಲ್ಲಿನ ಪರ್ವತ ಕಣಿವೆಗಳ ಮೂಲಕ ಮಣ್ಣು ಮಿಶ್ರಿತ ನೀರಿನ ಪ್ರವಾಹವು ರಭಸದಿಂದ ಹರಿಯುತ್ತಿರುವುದು ಕಂಡುಬಂದಿದೆ.

More articles

Latest article

Most read