Friday, December 6, 2024

ಶಿವಸೇನಾ ಮುಖ್ಯಸ್ಥನ ಮೇಲೆ ಗುಂಡಿನ ದಾಳಿ ನಡೆಸಿದ ಬಿಜೆಪಿ ಶಾಸಕ ಗಣಪತ್‌ ಗಾಯಕ್ವಾಡ್‌

Most read

ಮುಂಬೈ : ತಡರಾತ್ರಿ ಬಿಜೆಪಿ ಶಾಸಕ ಗಣಪತ್‌ ಗಾಯಕ್ವಾಡ್‌ ಎಂಬುವರು ಶಿವಸೇನೆ ಮುಖಂಡ ಮಹೇಶ್ ಗಾಯಕ್ವಾಡ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯು ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣಿಯಲ್ಲಿಯೇ ನಡೆದಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಉಭಯ ಕಡೆಯವರು ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಗೆ ಬಂದಿದ್ದರು. ಮಾತುಕತೆ ಜೋರಾದಂತೆ ಶಾಸಕರು ಆಕ್ರೋಶಗೊಂಡು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಶಿವಸೇನೆ ಮುಖಂಡ ಮಹೇಶ್ ಗಾಯಕ್ವಾಡ್ ಮತ್ತು ಅವರ ಬೆಂಬಲಿಗರಿಗೆ ಗುಂಡು ತಗುಲಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುಧಾಕರ ಪಠಾರೆ ತಿಳಿಸಿದ್ದಾರೆ.

ಅವರನ್ನು ತಕ್ಷಣವೇ ಆಸ್ಪತ್ರೆಗೆ  ಕರೆದುಕೊಂಡಿ ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಅವರ ದೇಹದಿಂದ ಐದು ಗುಂಡುಗಳನ್ನು ಹೊರತೆಗೆಯಲಾಗಿದ್ದು, ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುಧಾಕರ ಪಠಾರೆ ತಿಳಿಸಿದ್ದಾರೆ.

ಘಟನೆಯ ನಂತರ ಪೊಲೀಸರು ತಕ್ಷಣವೇ ಗಣಪತ್ ಗಾಯಕ್ವಾಡ್ ಅವರನ್ನು ಬಂಧಿಸಿದ್ದಾರೆ. ʼಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆಯಲ್ಲಿ ಮಹೇಶ್ ಗಾಯಕ್ವಡ್‌‌, ನನ್ನ ಮಗನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆʼ ಬಂಧಿತ ಗಣಪತ್‌ ಗಾಯಕ್ವಾಡ್‌ ಹೇಳಿದ್ದಾರೆ.

ಮುಂಬೈನ ಕಲ್ಯಾಣ್‌ ಪೂರ್ವ ಕ್ಷೇತ್ರವನ್ನು ಗಣಪತ್‌ ಗಾಯಕ್ವಾಡ್‌ ಪ್ರತಿನಿಧಿಸುತ್ತಾರೆ.

More articles

Latest article