Saturday, September 14, 2024

ಇಡಿ 5ನೇ ಸಮನ್ಸ್‌ಗೂ ಹಾಜರಾಗದ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?

Most read

ದೆಹಲಿಯ ಅಬಕಾರಿ ನೀತಿ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸತತ 5ನೇ ಸಮನ್ಸ್‌ಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಗೈರಾಗಿದ್ದಾರೆ.

ಕಳೆದ 4 ತಿಂಗಳಲ್ಲಿ, ನವೆಂಬರ್ 2, ಡಿಸೆಂಬರ್ 21, ಜನವರಿ 3 ಮತ್ತು ಜನವರಿ 18ಕ್ಕೆ ಕೇಜ್ರಿವಾಲ್‌ ಇ.ಡಿ ವಿಚಾರಣೆಗೆ ಗೈರಾಗಿದ್ದಾರೆ. ಈಗ ಫೆಬ್ರವರಿ 2ಕ್ಕೆ ವಿಚಾರಣೆ ಹಾಜರಾಗಲು ಸಮನ್ಸ್ ಜಾರಿ ಮಾಡಿದ್ದರೂ ಮತ್ತೆ ಗೈರಾಗಿದ್ದಾರೆ

ಈ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್‌, ‘ನಾನು ಹಾಜರಾಗುವ ಬಗ್ಗೆ ನಮ್ಮ ಕಾನೂನು ತಂಡ ತೀರ್ಮಾನ ಕೈಗೊಳ್ಳಲಿದೆ’ ಎಂದಿದ್ದರು.

More articles

Latest article