ನಗರ್ತ​ಪೇಟೆಯಲ್ಲಿ ರಂಪ ರಾದ್ಧಾಂತ ಮಾಡಿದ ಶೋಭಾ, ತೇಜಸ್ವಿ ಸೂರ್ಯ ಸೇರಿ 44 ಜನರ ವಿರುದ್ಧ ಎಫ್ಐಆರ್ ದಾಖಲು

Most read

ಬೆಂಗಳೂರು ನಗರದ  ನಗರ್ತ​ಪೇಟೆಯಲ್ಲಿ ನಡೆದ ಜಗಳಕ್ಕೆ ಕೋಮು ಬಣ್ಣ ಬಳಿದ ಬಿಜೆಪಿ ಪ್ರತಿಭಟನೆಯ ಹೆಸರಲ್ಲಿ ರಂಪ ರಾದ್ಧಾಂತ ಮಾಡಿದ  ಹಿನ್ನಲೆ ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಮತ್ತು ಶಾಸಕ ರಾಮಮೂರ್ತಿ ಸೇರಿ 44 ಜನರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್  ದಾಖಲು ಮಾಡಲಾಗಿದೆ.

ಹನುಮಂತ ಭಜಂತ್ರಿ ದೂರು ಆಧರಿಸಿ, ಐಪಿಸಿ ಸೆಕ್ಷನ್ 143, 149, 188, 283, 290, 268ರಡಿ ಎಫ್​ಐಆರ್ ದಾಖಲಿಸಲಾಗಿದೆ. ಹೈಕೋರ್ಟ್ ಆದೇಶದಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವಂತಿಲ್ಲ. ಆದರೂ ಸಹ ಮುಖೇಶ್ ಎಂಬ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಮಾರ್ವಾಡಿ ಹುಡುಗನ ಮೇಲೆ ಹಲ್ಲೆ ನಡೆದಿತ್ತು. ಇದನ್ನು ಬಿಜೆಪಿ ನಾಯಕರು ಮತ್ತವರ ಬೆಂಬಲಿಗರು ಹಿಂದೂ ವ್ಯಕ್ತಿಯ ಮೇಲಿನ ಹಲ್ಲೆ ಎಂಬಂತೆ ಬಿಂಬಿಸಿ ಸುದ್ದಿ ಹರಡಿ ನರಗಪೇಟೆ ಏರಿಯಾದಲ್ಲಿ ಪ್ರತಿಭಟಿಸಿದರು. ಇದನ್ನು ರಾಜಕೀಯ ಲಾಭಕ್ಕಾಗಿ ಕೋಮುಬಣ್ಣ ಬಳಿಯುವ ಯತ್ನಗಳು ನಡೆದವು. ಈ ವೇಳೆ ಅಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿತ್ತು.

ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ,, ಪ್ರತಿಭಟನೆಗೆ ಅವಕಾಶ ಇಲ್ಲ. ಹೀಗಾಗಿ ಹಲ್ಲೆಗೊಳಗಾದ ಮಾರ್ವಾಡಿ ಹುಡುಗ ಮುಖೇಶ್ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ನಾಯಕರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ ಸೂರ್ಯ ಬಂದು ದೊಡ್ಡ ಹೈಡ್ರಾಮವನ್ನೇ ಸೃಷ್ಟಿಸಿದರು. ಎಷ್ಟು ಹೇಳಿದರು ಕೇಳದ ನಾಯಕರನ್ನು ಕಾನೂನಿನ ಪ್ರಕಾರ ಪೊಲೀಸರು ಅವರನ್ನು ಬಲವಂತವಾಗಿಯೆ ವಶಕ್ಕೆ ಪಡೆಯಬೇಕಾಯ್ತು.

More articles

Latest article