ಬಿಜೆಪಿ ಫೇಕ್ ಫ್ಯಾಕ್ಟರಿ ಸ್ಥಾಪಿಸಿ ಸುಳ್ಳುಗಳ ವ್ಯಾಪಾರ ಮಾಡುತ್ತಿದೆ. ನಮ್ಮ ಕುಟುಂಬದ ಮೇಲೆ 50 ಸಾವಿರ ಕೋಟಿ ರೂಪಾಯಿ ಆಸ್ತಿಯ ಆರೋಪ ಮಾಡಿತ್ತು. ಆರೋಪ ಮಾಡಿದ್ದ ಮುಖಂಡರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದೆ. ಆದರೆ ಈವರೆಗೂ 50 ಸಾವಿರ ಕೋಟಿ ರೂಪಾಯಿ ಆಸ್ತಿ ಎಲ್ಲಿದೆ ಎಂದು ತೋರಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ನಿರಂತರ ಟೀಕೆಗಳಿಗೆ ಅವರು ಎಕ್ಸ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
11 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರ ನಡೆಸುತ್ತಿದೆ. ಸೋಕಾಲ್ಡ್ ಶಕ್ತಿಮಾನ್ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇದ್ದಾರೆ. IT, ED, CBI ಸಂಸ್ಥೆಗಳು ಕೇಂದ್ರ ಸರ್ಕಾರದ ಕೈನಲ್ಲೇ ಇವೆ. ಆದರೂ ನಮ್ಮ ಕುಟುಂಬದ 50 ಸಾವಿರ ಕೋಟಿಯ ಆಸ್ತಿ ಹುಡುಕಲು ಸಾಧ್ಯವಾಗಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ದಮ್ಮು ಮತ್ತು ತಾಕತ್ತು ಹೊಂದಿರುವ ಬಿಜೆಪಿ ಮುಖಂಡರಿಗೆ ನನ್ನ ಸವಾಲ್. ತನಿಖಾ ಏಜೆನ್ಸಿಗಳನ್ನು ಕಳಿಸಿ, ಎಲ್ಲಿ ಬೇಕಾದರೂ ದಾಳಿ ಮಾಡಿಸಿ. ನಮ್ಮ 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹುಡುಕಿಕೊಡಲಿ. ಯಾರದ್ದು ಸುಳ್ಳು, ಯಾರದ್ದು ಸತ್ಯ ಎನ್ನುವುದು ಜಗತ್ತಿಗೆ ತಿಳಿದಿದೆ. ನಿಮಗೆ ನಮ್ಮ 50 ಸಾವಿರ ಕೋಟಿ ಆಸ್ತಿಯ ದಾಖಲೆ ತೋರಿಸಲಾಗಿಲ್ಲ. ಸಿಎ ನಿವೇಶನ ಹೇಗೆ ಅಕ್ರಮ ಎನ್ನುವುದನ್ನು ನಿರೂಪಿಸಲಾಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.