ಪ್ರಹಸನ | ನಮೋ ಟ್ರಂಪ್ ಸುಂಕ ಪ್ರಕರಣ

ಸುಂಕ ಸುಂಕ ಸುಂಕ 

ಇದು ಟ್ರಂಪ್ ಹಾಕುವ ಸುಂಕ

ನಿಮ್ಮ ಸರಕಿಗೆ ನಮ್ಮ ಸುಂಕ

ನಮ್ಮ ಸರಿಕಿಗಿಲ್ಲ ಯಾವ ಸುಂಕ

ಡೀಲ್ ಅಂದ್ರೆ ಇದು, ಕೊಟ್ಟಿದ್ದನ್ನು ತೆಗೆದುಕೋ

(ಎಂದು ಹಾಡುತ್ತ ಬರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನಮೋ ಅವರಿಗೆ ಮೊಬೈಲಲ್ಲಿ ವಿಡಿಯೋ ಕಾಲ್ ಮಾಡುತ್ತಾರೆ.)

ಟ್ರಂಪ್ : ( ಕತ್ತಿಗೆ ಕಟ್ಟಿದ ಟೈ ಅಲ್ಲಾಡಿಸುತ್ತಾ, ಹೆಬ್ಬೆರಳೆತ್ತಿ ಥಂಪ್ಸಪ್ ಮಾಡುತ್ತಾ ) ಹೌ ಆರ್ ಯು ಮೈ ಡಿಯರ್ ಗ್ರೇಟ್ ಫ್ರೆಂಡ್.

ನಮೋ : ನಾಟ್ ಗುಡ್ ಸರ್. ನೀವು ವಿಧಿಸಿದ 50% ಸುಂಕದಿಂದಾಗಿ ನನಗೆ ಭಾರೀ ಚಿಂತೆಯಾಗಿದೆ.

ಟ್ರಂಪ್ : ಮಿಸ್ಟರ್ ನರೇಂದರ್.. ಯು ಆರ್ ಮೈ ಗ್ರೇಟ್ ಫ್ರೆಂಡ್. ಚಿಂತೆ ಬೇಡ. ನಾನು ನಿಮಗೋಸ್ಕರ 50% ಸುಂಕವನ್ನು 18% ಗೆ ಇಳಿಸುತ್ತೇನೆ. ಈಗ ಹ್ಯಾಪೀನಾ?

ನಮೋ : ಥ್ಯಾಂಕ್ಯು ಟ್ರಂಪ್ ಜೀ. ತುಂಬಾ ಸಂತೋಷ ಆಯ್ತು. ಕೊನೆಗೂ ನೀವು ಗುಡ್ ಫ್ರೆಂಡ್ ಅನ್ನೋದು ಸಾಬೀತಾಯ್ತು.

ಟ್ರಂಪ್ : ಗುಡ್, ಮೈ ಫ್ರೆಂಡ್. ಆದರೆ ಕೆಲವು ಸ್ಮಾಲ್ ಕಂಡೀಶನ್ ಇವೆ. ನೀವು ಅಮೇರಿಕದ ಸರಕುಗಳಿಗೆ ಯಾವುದೇ ಸುಂಕ ವಿಧಿಸುವಂತಿಲ್ಲ. ಜೀರೋ ಟ್ಯಾಕ್ಸ್. ಯಾಕೆಂದರೆ ನಾನು ಅಮೇರಿಕವನ್ನ ಗ್ರೇಟ್ ಅಗೇನ್ ಮಾಡಬೇಕಿದೆ. ಅದಕ್ಕೆ ನಿಮ್ಮ ಸಹಕಾರ ಬೇಕಾಗಿದೆ.

ನಮೋ : (ಕೆಮ್ಮುತ್ತಾ, ನೀರು ಕುಡಿದು) ನೋ ಟ್ರಂಪ್ ಜೀ, ನಿಮಗೆ ತೆರಿಗೆ ಮುಕ್ತ, ನಮಗೆ ತೆರಿಗೆ ಯುಕ್ತ ಅಂದರೆ ನಾಟ್ ಫೇರ್. ನಾನು ಇಲ್ಲಿ ವಿರೋಧ ಪಕ್ಷದವರಿಗೆ ಉತ್ತರಿಸಬೇಕಾಗುತ್ತೆ.

ಟ್ರಂಪ್ : ಅದು ನಿಮ್ಮ ತಲೆನೋವು. ನಮ್ಮ ಸರಕುಗಳಿಗೆ ತೆರಿಗೆ ವಿಧಿಸಬಾರದು ಅಷ್ಟೇ. ನಮ್ಮ ದೇಶದ ಬೇಳೆ ಕಾಳು, ಹಣ್ಣು ಹಂಪಲು, ಕೃಷಿ ಉತ್ಪನ್ನಗಳೆಲ್ಲಾ ಟ್ಯಾಕ್ಸ್ ಲೆಸ್ ಆಗಿ ಇಂಡಿಯಾ ಒಳಗೆ ಬಿಡಬೇಕು. ವರ್ಷಕ್ಕೆ ಕನಿಷ್ಟ ಐನೂರು ಬಿಲಿಯನ್ ನಷ್ಟು ಅಮೇರಿಕದ ಸರಕನ್ನು ನೀವು ತೆರಿಗೆ ಇಲ್ಲದೇ ನಮ್ಮ ದೇಶದಿಂದ ಖರೀದಿಸಲೇಬೇಕು. ವ್ಯಾಪಾರ ಒಪ್ಪಂದ ಅಂದ್ರೆ ಸುಮ್ಮನೇನಾ?

ನಮೋ : ಅಯ್ಯೋ ಟ್ರಂಪ್ ಜೀ. ನಿಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಒಳಗೆ ಬಿಟ್ಟರೆ ನಮ್ಮ ದೇಶದ ರೈತರ ಗತಿ ಏನು? ಈಗಾಗಲೇ ನಮ್ಮ ರೈತರದ್ದು ದಯನೀಯ ದುಸ್ಥಿತಿ. ಇದನ್ನು ಒಪ್ಪಿಕೊಳ್ಳೋದು ಸ್ವಲ್ಪ ಕಷ್ಟ.

ಟ್ರಂಪ್ : ನೊ ನೋ.. ನೋ ಅನ್ನೋ ಹಾಗಿಲ್ಲ. ಒಪ್ಪಿಕೊಳ್ಳಲೇ ಬೇಕು. ಅಮೇರಿಕ ಮತ್ತೆ ಗ್ರೇಟ್ ಆಗಲೇ ಬೇಕು. ನೋ ಅಂದ್ರೆ ನಿಮಗೆ ಕಷ್ಟ ಫ್ರೆಂಡ್. ನಾನು ಬಯಸಿದರೆ ನಿಮ್ಮ ರಾಜಕೀಯ ಜೀವನವನ್ನೇ ಮುಗಿಸಬಲ್ಲೆ. ಬೀ ಕೇರ್ಫುಲ್.

ನಮೋ : ( ಮತ್ತೊಂದಿಷ್ಟು ನೀರು ಕುಡಿದು) ಅಯ್ಯೋ ಹಾಗೇನಾದ್ರೂ ಮಾಡಿಬಿಟ್ಟೀರಾ. ಈ ದೇಶಕ್ಕಿಂತ ನಾನು ಮುಖ್ಯ, ನನ್ನ ವರ್ಚಸ್ಸು ಮುಖ್ಯ. ಆಯ್ತು ನೀವೇಳಿದಂತಾಗಲಿ.

ಟ್ರಂಪ್ : ಯಸ್..ನೌ ಯು ಆರ್ ಮೈ ಬೆಸ್ಟ್ ಫ್ರೆಂಡ್. ಆಮೇಲೆ ನೀವು ರಷ್ಯಾದಿಂದ ಆಯಿಲ್ ಖರೀದಿ ಮಾಡೋದನ್ನ ನಿಲ್ಲಿಸಬೇಕು. ನೊ ಮೋರ್ ಪುಟಿನ್ ಆಯಿಲ್. ಓನ್ಲಿ ಅಮೇರಿಕಾ ಅಯಿಲ್. ಅಮೇರಿಕ ಫಸ್ಟ್, ಇಂಡಿಯಾ ನೆಕ್ಸ್ಟ್.

ನಮೋ : ( ತಲೆ ಕೆರೆದುಕೊಳ್ಳುತ್ತಾ) ರಷ್ಯಾ ಆಯಿಲ್ ಬೆಲೆ ಕಡಿಮೆ. ನಿಮ್ಮದು ಜಾಸ್ತಿ. ಹೆಚ್ಚು ಬೆಲೆ ಕೊಟ್ಟರೆ ನಮಗೆ ಲಾಸ್ ಆಗುತ್ತೆ. ತೈಲ ಬೆಲೆ ಏರಿಸಬೇಕಾಗುತ್ತೆ. ಜನರಿಂದ ವಿರೋಧ ಎದುರಿಸಬೇಕಾಗುತ್ತೆ. ಅದಕ್ಕೆ ಪ್ಲೀಸ್..

ಟ್ರಂಪ್ : ನೋ ಪ್ಲೀಸ್ ಪ್ಲೀಸ್. ಓನ್ಲಿ ಎಸ್. ಯು ಮಸ್ಟ್ ಬೈ ನಮ್ಮ ಆಯಿಲ್. ರಷ್ಯಾ ಆಯಿಲ್ ಮಾರಿ ಹಣ ಮಾಡಿ ಉಕ್ರೇನ್ ಮೇಲೆ ಯುದ್ದ ಮಾಡಿ ಜನರನ್ನ ಸಾಯಿಸ್ತಿದೆ. ಅದು ರಷ್ಯಾದ ಆಯಿಲ್ ಅಲ್ಲಾ ಉಕ್ರೇನಿಗರ ರಕ್ತ. ಸೋ ನೀವು  ಆಯಿಲ್ ಖರೀದಿ ಸ್ಟಾಪ್ ಮಾಡಿ.

ನಮೋ : ಪ್ಲೀಸ್ ನಾನು ಹೀಗೆ ಹೇಳ್ತೆನೆ ಅಂತಾ ತಪ್ಪು ತಿಳೀಬೇಡಿ. ನೀವೂ ಇಸ್ರೇಲ್ ಜೊತೆ ಸೇರಿಕೊಂಡು ಪ್ಯಾಲಿಸ್ಟೈನ್ ಜನರನ್ನ ಸರ್ವನಾಶ ಮಾಡ್ತಿದ್ದೀರಿ ಅಂತಾ ಮಾಧ್ಯಮಗಳು ಹೇಳ್ತಿವೆಯಲ್ಲಾ ಟ್ರಂಪ್ ಜಿ. ನಿಮ್ಮಿಂದ ಆಯಿಲ್ ಖರೀದಿಸಿದರೆ ಆ ಹಣ ಇರಾನ್, ಪ್ಯಾಲಿಸ್ಟೈನ್ ಮುಂತಾದ ದೇಶಗಳ ಮೇಲೆ ಯುದ್ಧಕ್ಕೆ ಬಳಕೆ ಆಗುತ್ತದೆ ಅಂತಾ ನಮ್ಮ ಸಲಹೆಗಾರರು ಹೇಳ್ತಿದ್ದಾರೆ.

ಟ್ರಂಪ್ : ನೊ ನೋ.. ನಮ್ಮನ್ನು ಯಾರೂ ಕ್ವಶ್ಚನ್ ಮಾಡಕೂಡದು. ನಾನೇನೇ ಮಾಡಿದರೂ ಅಮೇರಿಕವನ್ನ ಗ್ರೇಟ್ ಮಾಡಲು ಮಾತ್ರ. ಈಗ ಅದೆಲ್ಲಾ ಬೇಡದ ವಿಷಯ. ರಷ್ಯಾ ಬಿಟ್ಟಾಕಿ ನಮ್ಮಿಂದ ಆಯಿಲ್ ಖರೀದಿಸ್ತೀರಾ ಇಲ್ವಾ, ಅಷ್ಟು ಹೇಳಿ.. ಜೀರೋ  ತೆರಿಗೆ ಮಾಡ್ತೀರಾ ಇಲ್ವಾ ಡಿಸಿಶನ್ ಹೇಳಿ.

ನಮೋ : ( ಉಗುಳು ನುಂಗುತ್ತಾ) ನಾನೊಬ್ಬನೇ ನಿರ್ಧಾರ ತಗೊಳ್ಳೋದು ಕಷ್ಟ ಆಗುತ್ತೆ ಟ್ರಂಪ್ ಜೀ.  ರೈತ ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತವೆ. ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರಶ್ನಿಸುತ್ತವೆ.

ಟ್ರಂಪ್ :  ಅಧಿವೇಶನದಲ್ಲಿ ಯಾರಾದರೂ ಕ್ವಶ್ಚನ್ ಮಾಡ್ತಾರೆ ಅಂದ್ರೆ ಅಲ್ಲಿಗೆ ಹೋಗಲೇ ಬೇಡಿ. ಯಾರು ಏನೇ ಪ್ರತಿಭಟನೆ ಮಾಡ್ಲಿ ಉತ್ತರ ಕೊಡದೇ ಮೌನವಾಗಿದ್ದು ಬಿಡಿ. ಇದನ್ನೆಲ್ಲಾ ನಾನು ನಿಮಗೆ ಹೇಳಿಕೊಡಬೇಕಾ? ಅದೆಲ್ಲಾ ನೆಪಗಳು ಬೇಕಿಲ್ಲ. ಯು ಸರಂಡರ್ ಆಗಿ ನನ್ನ ಕಂಡೀಶನ್ ಗೆ ಒಪ್ಪಬೇಕು ಅಷ್ಟೇ.

ನಮೋ : ಸರಂಡರ್ ಆಗೋದು ಡಿಫಿಕಲ್ಟ್ ಅನ್ನಿಸುತ್ತೆ. ನಿಮ್ಮ ಡೀಲ್ ಒಪ್ಪಿದ್ರೆ ದೇಶಕ್ಕೆ ಹೆವಿ ಲಾಸ್ ಆಗುತ್ತೆ. ನನ್ನ ವರ್ಚಸ್ಸಿಗೆ ಧಕ್ಕೆ ಬರುತ್ತೆ. ಪ್ಲೀಸ್ ಟ್ರಂಪ್ ಜಿ..

ಟ್ರಂಪ್ : ಓಕೆ ಓಕೆ. ಯಾವಾಗಿಂದ ನಿಮ್ಮ ದೇಶದ ಬಗ್ಗೆ ಕಾಳಜಿ ಮಾಡಲು ಸ್ಟಾರ್ಟ್ ಮಾಡಿದ್ರಿ ಫ್ರೆಂಡ್. ಇದೇ ನಿಮ್ಮ ಡಿಸಿಶನ್ ಆಗಿದ್ರೆ ನನ್ನ ಅಭ್ಯಂತರವೇನಿಲ್ಲ. ನಿಮ್ಮ ವರ್ಚಸ್ಸು ಹೇಗೆ ಹಾಳು ಮಾಡಬೇಕು ಅಂತಾ ನನಗೆ ಗೊತ್ತಿದೆ.

ನಮೋ : ಟ್ರಂಪ್ ಜೀ…

ಟ್ರಂಪ್ : ಲಾಸ್ಟ್ ವಾರ್ನಿಂಗ್ ಕೊಡ್ತಾ ಇದ್ದೇನೆ ಮೈ ಫ್ರೆಂಡ್. ಸರಂಡರ್ ಆರ್ ನಾಟ್ ಸರಂಡರ್ ಅಷ್ಟೇ ಹೇಳಿ. ನಿಮ್ಮ ಜಾತಕ ಈಗ ನನ್ನ ಕೈಲಿದೆ. ಅದು ಜೆಫ್ರಿ ಎಪ್‌ಸ್ಟೀನ್ ಫೈಲಲ್ಲಿ ಸೇಫಾಗಿದೆ. ನಾನೇನಾದ್ರೂ ನಿಮ್ಮ ರಹಸ್ಯ ಕಡತ ಪಬ್ಲಿಕ್ ಮಾಡಿದ್ರೆ ನಿಮ್ಮ ರಾಜಕೀಯ ಭವಿಷ್ಯ ಅಷ್ಟೇ.. ಫಿನಿಶ್.. ನೌ ಯು ಡೋಂಟ್ ಹ್ಯಾವ್ ಎನಿ ಆಪ್ಶನ್. ಈಗ ನಿಮಗೆ ನಿಮ್ಮ ದೇಶ ಇಂಪಾರ್ಟಂಟಾ ಇಲ್ಲಾ ನಿಮ್ಮ ವರ್ಚಸ್ಸಾ?

ನಮೋ : (ಗಾಬರಿಗೊಂಡು ನೀರು ಕುಡಿಯುತ್ತಾ) ನೋ ಟ್ರಂಪ್ ಜಿ. ಹೀಗೆಲ್ಲಾ ಬ್ಲಾಕ್ ಮೇಲ್ ಮಾಡಿದರೆ ಹೇಗೆ?

ಟ್ರಂಪ್ : ಬ್ಲಾಕ್ಮೇಲೋ ವೈಟ್ಮೇಲೋ ಏನೋ ಅನ್ಕೊ ಫ್ರೆಂಡ್. ಅಮೇರಿಕಾ ಗ್ರೇಟ್ ಮಾಡಬೇಕಾದ್ರೆ, ಟ್ರಂಪ್ ಗ್ರೇಟೆಸ್ಟ್ ಆಗಬೇಕೆಂದರೆ ನಾನು ಏನು ಬೇಕಾದ್ರೂ ಮಾಡ್ತೇನೆ. ಯು ಮಸ್ಟ್ ಅಗ್ರೀ..

ನಮೋ : ಆಯ್ತು ಟ್ರಂಪ್ ಜಿ. ನೀವೇ ಗ್ರೇಟ್ ಆಗಿ. ನನಗೆ ನನ್ನ ವರ್ಚಸ್ಸೇ ವೆರಿ ವೆರಿ ಇಂಪಾರ್ಟೆಂಟ್. ನಾನಿದ್ದರೆ ಈ ದೇಶ. ಪ್ಲೀಸ್ ಯಾವುದೇ ಸಿಕ್ರೇಟ್ ದಾಖಲೆ ಎಲ್ಲೂ ಹೊರಗೆ ಬರಲಾರದು ಎಂದು ಪ್ರಾಮಿಸ್ ಮಾಡಿ. ನಾನು ಸರಂಡರ್ ಆಗ್ತೇನೆ. ನೀವೇ ಗ್ರೇಟ್..

ಟ್ರಂಪ್ : ಯಸ್. ನೌ ಯು ಆರ್ ಮೈ ಗ್ರೇಟ್ ಫ್ರೆಂಡ್. ಐ ಲವ್ ಯು. ಐ ಯಾಮ್ ಗ್ರೇಟ್.. ಐ ಯಾಮ್ ಟ್ರಂಪ್, ಟ್ರಂಪ್ ಇಸ್ ಗಾಡ್.. ಬೈ ಬೈ..

( ಕಾಲ್ ಕಟ್ ಆಗುತ್ತದೆ. ನಮೋ ಚಿಂತಾಕ್ರಾಂತರಾಗುತ್ತಾರೆ.)

ಹಾಡು :

ಚಿಂತೆಯಲ್ಲಿ ಕುಂತಾ ನಮ್ಮ ವಿಶ್ವಗುರು

ಸಿಡಿಲು ಹೊಡೆದು ಸಡಿಲಾದಂತೆ ಮರದ ಬೇರು

ಎಪ್‌ಸ್ಟೀನ್ ಕಡತ, ಬಯಲಾದರೆ ಹೊಡೆತ

ಕಟ್ಟಿಕೊಂಡ ವರ್ಚಸ್ಸು ಹಾದಿ ಬೀದಿ ಪಾಲು

ಅಧಿಕಾರ ಹೋದೀತು ಬೇಗ ಎಚ್ಚರಾಗು

ನಮೋ : ಯಾರಲ್ಲಿ.. ನಮ್ಮ ಗೋದಿ ಮಾಧ್ಯಮದವರನ್ನು ತಕ್ಷಣ ಕರೆದು ತನ್ನಿ.

( ಮಾಧ್ಯಮದ ಕೆಲವು ಖಾಸಗಿ ಮಿತ್ರರು ಒಳಗೆ ಬರುತ್ತಾರೆ)

ನಮೋ : ( ಮುಖದಲ್ಲಿ ನಗು ತಂದುಕೊಂಡು) ಎಲ್ಲರಿಗೂ ನಮಸ್ಕಾರ. ನಿಮ್ಮ ಜೊತೆಗೆ ಒಂದು ಸಂತಸದ ವಿಷಯ ಹಂಚಿಕೊಳ್ಳಬೇಕಿದೆ. ಅದೇನಂದ್ರೆ ಅಮೇರಿಕದ ಅಧ್ಯಕ್ಷರಾದ ಟ್ರಂಪ್ ಜೊತೆ ಇಷ್ಟೊತ್ತು ಮಾತಾಡಿದೆ. ಅವರು ನನ್ನ ಒತ್ತಾಯಕ್ಕೆ ಒಪ್ಪಿದ್ದಾರೆ. ಭಾರತದ ಸರಕುಗಳ ಮೇಲೆ ಹಾಕಿದ್ದ 50% ತೆರಿಗೆ ಹಾಗೂ ಹೆಚ್ಚುವರಿಯಾಗಿ ವಿಧಿಸಿದ್ದ 25% ಸುಂಕವನ್ನು ತೆಗೆದು ಹಾಕಲು ಒಪ್ಪಿಸಿದ್ದೇನೆ. ಕೇವಲ 18% ಸುಂಕವನ್ನು ಮಾತ್ರ ವಿಧಿಸುತ್ತಾರಂತೆ. ಇದನ್ನು ದೇಶಾದ್ಯಂತ ಸುದ್ದಿ ಮಾಡಿ.

ಪತ್ರಕರ್ತ : ಆದರೆ ಸರ್.

ನಮೋ : ನೋ ಆದರೆ ಗೀದರೆ. ಹೇಳಿದಷ್ಟು ಮಾಡಿ. ನನಗೆ ಪ್ರಶ್ನೆಗಳನ್ನು ಕಂಡರೆ ಆಗದು. ನಾನು ಹೇಳಿದ್ದಕ್ಕೆ ಬಣ್ಣ ಹಚ್ಚಿ, ರೆಕ್ಕೆ ಪುಕ್ಕ ಜೋಡಿಸಿ ಜನರಿಗೆ ತಲುಪಿಸಬೇಕು. ನಾನು ಈ ದೇಶದ ಹಿತಕ್ಕಾಗಿ ಟ್ರಂಪ್ ನಂತಹ ಟ್ರಂಪ್ ಜೊತೆ ಮಾತಾಡಿ ಸುಂಕ ಕಡಿಮೆ ಮಾಡಿಸಿದ್ದರ ಬಗ್ಗೆ ಹೆಚ್ಚೆಚ್ಚು ಪ್ರಚಾರ ಕೊಡಿ. ನೀವಿನ್ನು ಹೋಗಬಹುದು.

ಹಾಡು :

ಸುದ್ದಿ ಮಾಧ್ಯಮಗಳಿರುವುದು ಯಾಕೆ

ತಪ್ಪು ಮುಚ್ಚಿ ಮರೆಮಾಸೋಕೆ

ಸುಳ್ಳಿಗೆ ಬಣ್ಣ ಬಳಿದು ಸುದ್ದಿ ಮಾಡಿ

ಸತ್ಯದ ಹತ್ಯೆ ಮಾಡಿ ಗೋರಿ ತೋಡಿ

ಜನಮರುಳೋ ಜಾತ್ರೆಮರುಳೋ ಮಂಕು ತಿಮ್ಮ

ಭ್ರಮೆ ಹುಟ್ಟಿಸಿ ಬ್ರೇಕಿಂಗ್ ನ್ಯೂಸ್‌ ಮಾಡಿರಣ್ಣಾ

ನಮೋ : (ನೀರು ಕುಡಿದು ಟಿವಿ ಆನ್ ಮಾಡುತ್ತಾನೆ)

ಚಾನೆಲ್ 1: ಪ್ರಧಾನಿಗಳ ಬಹು ದೊಡ್ಡ ಸಾಧನೆ. ವ್ಯಾಪಾರ ಒಪ್ಪಂದದ ಸುಂಕದಲ್ಲಿ ಭಾರೀ ಇಳಿಕೆ.

ಚಾನೆಲ್ 2 : ಟ್ರಂಪ್ ನನ್ನೇ ಮಣಿಸಿದ ಮಗಧೀರ. ಇಳಿದ ತೆರಿಗೆ ಭಾರ.

ಚಾನೆಲ್ 3 : ನಮೋ ಕಮಾಲ್. ಭಾರತದ ಮುಂದೆ ಮಂಡಿಯೂರಿದ ಅಮೇರಿಕ. ಟ್ರಂಪ್ ಸುಂಕ ನೀತಿಗೆ ಮುಖಭಂಗ.

ಚಾನೆಲ್ 4 : ಸುಂಕ ಸಂಗ್ರಾಮದಲ್ಲಿ ಭಾರತಕ್ಕೆ ಗೆಲುವು. ಸೋತು ಸುಣ್ಣಗಾದ ಟ್ರಂಪ್.

ಚಾನೆಲ್ 5 : ಟ್ರಂಪ್ ತೆರಿಗೆ ಪಾತಾಳಕ್ಕೆ, ಸೆನ್ಸೆಕ್ಸ್ ಬೆಲೆ ಆಕಾಶಕ್ಕೆ.

ನಮೋ : ಯಸ್.. ನಮ್ಮ ಈ ಮಾಧ್ಯಮಗಳು ಅದ್ಭುತ, ಅನನ್ಯ. ನಮೋ ಈಸ್‌ ಗ್ರೇಟ್, ಐ ಯಾಮ್ ಗಾಡ್, ಗಾಡ್ ಈಸ್ ಗ್ರೇಟ್.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-ಜೈ ಶ್ರೀರಾಮ್  V/s ಹೇರಾಮ್

More articles

Latest article

Most read