ಎಫ್‌ಸ್ಟೀನ್‌ ಫೈಲ್ಸ್‌ ಭಾಗ 2 -ಮೋದಿ ನಂಟಿನ ಈ-ಮೇಲ್ ಗುಟ್ಟೇನು?

ಎಫ್‌ಸ್ಟೀನ್‌ ಫೈಲ್‌ನಲ್ಲಿ ಮೋದಿಯವರ ಪಾತ್ರವನ್ನು ಅನುಮಾನಿಸಲು ಅಮೆರಿಕಾ ಮುಚ್ಚಿಟ್ಟುಕೊಂಡಿರುವ ರಹಸ್ಯ ಕಡತಗಳು ಮಾತ್ರ ಕಾರಣವಲ್ಲ. ಮೋದಿಯವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ, ಅವರ ಆಪ್ತರಾಗಿದ್ದ ಮತ್ತು ಕೇಂದ್ರ ಸಚಿವರೂ ಆದ ಹರ್ದೀಪ್‌ ಸಿಂಗ್‌ ಪುರಿಯವರಿಗೆ ಎಫ್‌ಸ್ಟೀನ್‌ನ ಜೊತೆ ಇದ್ದ ನಿಕಟ ಸಂಪರ್ಕ; ಹಾಗೂ ಮೋದಿಯವರ ಉದ್ಯಮಿ ಮಿತ್ರರಲ್ಲಿ ಒಬ್ಬರಾದ ಅನಿಲ್‌ ಅಂಬಾನಿ `ಮೋದಿ’ ಹೆಸರನ್ನು ಬಳಸಿಕೊಂಡು ಅಮೆರಿಕಾ-ಫ್ರಾನ್ಸ್‌ನಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಸಂಗತಿಗಳು ಕೂಡಾ ಮೋದಿ ಮತ್ತು ಎಫ್‌ಸ್ಟೀನ್‌ ನಡುವಿನ ನಂಟಿನ ಬಗ್ಗೆ ಅನುಮಾನ ಹುಟ್ಟಿಸುತ್ತವೆ ಮಾಚಯ್ಯ ಎಂ ಹಿಪ್ಪರಿಗಿ

ಭಾರತ ಯಾಕೆ ಹೀಗಾಯ್ತು? ಇಲ್ಲಿ ಯಾವುದೇ ಹಗರಣ, ಆರೋಪ, ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರಗಳೆಲ್ಲವೂ ನಿರ್ದಿಷ್ಟ ರಾಜಕೀಯ ಸಿದ್ದಾಂತದ ನಿಯಂತ್ರಣಕ್ಕೆ ಒಳಪಟ್ಟು ತಮ್ಮ ಪ್ರತಿಕ್ರಿಯೆಗಳನ್ನು ಹುಟ್ಟಿಸಿಕೊಳ್ಳುತ್ತವೆಯೇ? ಇದು ಹೊಸ ಪ್ರಶ್ನೆಯೇನಲ್ಲ, ಆದರೆ ಈ ಪ್ರಶ್ನೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದ್ದು ಎಫ್‌ಸ್ಟೀನ್‌ ಫೈಲ್‌ ಎಂಬ ಭಯಾನಕ Sex and Geo-policy Scam!

ಭಾರತ ಜನಸಮೂಹದ ವಿವೇಚನಾಶಕ್ತಿ hack ಆಗದೇ ಇದ್ದಿದ್ದರೆ, ಸರಿ-ತಪ್ಪುಗಳನ್ನು ಸರಿ-ತಪ್ಪುಗಳಾಗಿಯೇ ವಿಂಗಡಿಸಿ ನೋಡುವ ಪ್ರಜ್ಞೆಯನ್ನು ಧರ್ಮರಾಜಕಾರಣಕ್ಕೆ ಅಡವಿಡದೇ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಎಫ್‌ಸ್ಟೀನ್‌ ಫೈಲುಗಳಲ್ಲಿನ ಸತ್ಯಗಳು ಇಲ್ಲಿನ ರಾಜಕಾರಣವನ್ನು ಬುಡಮೇಲು ಮಾಡಬೇಕಿತ್ತು. ಯಾಕೆಂದರೆ ಅಲ್ಲಿರುವ ಸತ್ಯಗಳು ಕೇವಲ ವ್ಯಕ್ತಿಗಳ ಲೈಂಗಿಕ ಲಂಪಟತನವನ್ನು ಗುಮಾನಿ ಮಾಡುತ್ತಿಲ್ಲ; ದೇಶದ ಆರ್ಥಿಕ ನೀತಿ-ಭದ್ರತೆಯನ್ನೆ ಅಪಾಯಕ್ಕೊಡ್ಡಿರುವ ಆತಂಕವನ್ನು ಹುಟ್ಟಿಸುತ್ತಿವೆ. ಅಷ್ಟಾದರೂ ದೇಶ ತಣ್ಣಗಿದೆ. ಪ್ರಶ್ನೆಗಳಿಗೆ ಒಡ್ಡಿಕೊಳ್ಳಬೇಕಿದ್ದವರು, ಹಾರ-ತುರಾಯಿಗಳ ಸನ್ಮಾನಗಳಿಗೆ ಕೊರಳೊಡ್ಡುತ್ತಿದ್ದಾರೆ. ‘ಅವರು ಮಾಡಿದರೆ ಮಾತ್ರ ಹಗರಣಗಳು, ನಾವು ಮಾಡಿದರೆ ಅವು ದೇಶಸೇವೆಗಳು’ ಎಂಬ political paralysisಗೆ ದೇಶವನ್ನು ಈಡು ಮಾಡಿದ್ದಾರೆ. ಇಲ್ಲಿ ‘ಅವರು’ ಮತ್ತು ‘ನಾವು’ ಎಂಬ ವಿಂಗಡಣೆಗಳು ಕೇವಲ ರಾಜಕೀಯ ಭಿನ್ನತೆಗಷ್ಟೇ ಸಂಬಂಧಿಸಿದ್ದಲ್ಲ; ಜಾತಿ, ಧರ್ಮ, ಭಾಷೆ, ರಾಷ್ಟ್ರೀಯತೆ ಹೆಸರಿನಲ್ಲಿ ಜನರನ್ನು ಈ ವಿಂಗಡಣೆಗೆ ಒಡ್ಡಲಾಗಿದೆ. ಹಾಗಾಗಿ ಎಫ್‌ಸ್ಟೀನ್‌ ಫೈಲಿನ ಸತ್ಯಗಳು ಇಲ್ಲಿ ಸಾಮುದಾಯಿಕ ಪ್ರತಿಕ್ರಿಯೆ ಹುಟ್ಟಿಸುತ್ತಿಲ್ಲ. ಹಾಗಾದರೆ, ಭಾರತವನ್ನು ಬಾಧಿಸುವಂತಹ ಅಂತದ್ದೇನಿದೆ ಆ ಫೈಲುಗಳಲ್ಲಿ?

ಜೆಫ್ರಿ ಎಫ್‌ಸ್ಟೀನ್‌ ಒಬ್ಬ ಇಂಟರ್‍‌ನ್ಯಾಷನಲ್‌ ತಲೆಹಿಡುಕ ಮಾತ್ರ ಅಲ್ಲ. ಅವನು ಆ ಕೆಲಸ ಮಾಡುತ್ತಿದ್ದುದೇ ಜಗತ್ತಿನ ಗಣ್ಯವ್ಯಕ್ತಿಗಳ ವಿಶ್ವಾಸ ಗಳಿಸಿಕೊಂಡು, ಅವರ ಮೂಲಕ ಅಂತಾರಾಷ್ಟ್ರೀಯ ಡೀಲ್‌ಗಳನ್ನು ಕುದುರಿಸುವ ಸಲುವಾಗಿ. ಅವನೊಬ್ಬ geopolitical fixer! ಅವನು ಹಣಕ್ಕಾಗಿ ಗಣ್ಯರ ಲೈಂಗಿಕ ವಿಕೃತಿಗಳನ್ನು ಬಳಸಿಕೊಳ್ಳುತ್ತಿರಲಿಲ್ಲ. ಅಪ್ರಾಪ್ತ ವಯಸ್ಸಿನ ನತದೃಷ್ಟ ಹುಡುಗಿಯರೆ ಅವನಿಗೆ ‘ಹಣ’, ‘ಕರೆನ್ಸಿ’! ಆ ಕರೆನ್ಸಿಗಳನ್ನು (ಅವನ ಪರಿಭಾಷೆಯಲ್ಲಿ) ಬಳಸಿಕೊಂಡು ಅವನು ದೊಡ್ಡದೊಡ್ಡ ಉದ್ಯಮ ಅಥವಾ ರಾಜತಾಂತ್ರಿಕ ಒಪ್ಪಂದಗಳಿಗೆ ತನ್ನ ಗಣ್ಯರನ್ನು ಒಪ್ಪಿಸಿಕೊಳ್ಳುತ್ತಿದ್ದ. ಹಾಗಾಗಿ, ಅವನ ಸಂಪರ್ಕದಲ್ಲಿದ್ದವರನ್ನು ನಾವು ಕೇವಲ ವ್ಯಕ್ತಿಗತ ನೆಲೆಯ ಕಚ್ಚೆಹರುಕರೆಂಬ ನೈತಿಕ ಮಾನದಂಡದಲ್ಲಿ ನೋಡಲಾಗದು. ತಮ್ಮ ಆ ಕಚ್ಚೆಹರುಕತನದಿಂದ ಅವರು ದೇಶದ ಆರ್ಥಿಕತೆಗೆ, ಉದ್ಯಮವಲಯಕ್ಕೆ ಮಾಡಿರುವ ಅನಾಹುತವನ್ನೂ ಗಮನದಲ್ಲಿಟ್ಟುಕೊಂಡಾಗ ಮಾತ್ರ ಅವರು ಎಸಗಿರುವ ದ್ರೋಹದ ತೀವ್ರತೆ ಅರ್ಥವಾಗುತ್ತೆ. ಇದೇ ಕಾರಣಕ್ಕೆ ನಾರ್ವೆಯ ಜೆಸ್ಪರ್ ಬ್ರೋಡಿನ್, ಟರ್ಜೆ ಲಾರ್ಸೆನ್, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಅವರ ಇಬ್ಬರು ಆಪ್ತಸಹಾಯಕರು, ಅಮೆರಿಕಾ ಉದ್ಯಮಿ ಲಿಯಾನ್‌ ಬ್ಲ್ಯಾಕ್‌ ಮೊದಲಾದವರು ತಮ್ಮತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ. ಮೊದಲೇ ಹೇಳಿದಂತೆ ಭಾರತದ ವಿವೇಚನಾಶಕ್ತಿಯನ್ನು ಧಾರ್ಮಿಕ ರಾಜಕಾರಣದ ಹೆಸರಿನಲ್ಲಿ ಹ್ಯಾಕ್‌ ಮಾಡಿರೋದ್ರಿಂದ ಇಲ್ಲಿ ಯಾವುದೇ ರಾಜೀನಾಮೆಗಳಿಲ್ಲ; ಸಬ್‌ ಚೆಂಗಾಸಿ!!

ಮೂರು, ಮತ್ತೊಂದು

ಜನವರಿ 30ರಂದು ಅಮೆರಿಕಾದ ನ್ಯಾಯ ಇಲಾಖೆ ಬಿಡುಗಡೆ ಮಾಡಿದ ಎಫ್‌ಸ್ಟೀನ್‌ ಫೈಲ್‌ನಲ್ಲಿ ಭಾರತದ ಒಟ್ಟು ನಾಲ್ಕು ಹೆಸರುಗಳಿವೆ. ಪ್ರಧಾನಿ ಮೋದಿಯವರು, ಕೇಂದ್ರ ಸಚಿವ ಹರ್ದೀಪ್ ಸಿಂಗ್‌ ಪುರಿ, ಉದ್ಯಮಿ ಅನಿಲ್‌ ಅಂಬಾನಿ! ಇನ್ನೊಂದು ಹೆಸರು ಭಾರತ ಮೂಲದ ಅಮೆರಿಕಾ ಆಧ್ಯಾತ್ಮಿಕ ಗುರು ದೀಪಕ್‌ ಚೋಪ್ರಾನದ್ದು!

ಇದ್ರಲ್ಲಿ ಮೋದಿಯವರ ತಪ್ಪೇನಿದೆ?

ಜುಲೈ 6, 2017ರ ಜೆಫ್ರಿ ಎಫ್‌ಸ್ಟೀನನ ಒಂದು ಮೇಲ್‌ನಲ್ಲಿ ಮೋದಿಯವರ ಹೆಸರು ಉಲ್ಲೇಖವಾಗಿದೆ. “ಭಾರತದ ಪ್ರಧಾನಿ ಮೋದಿ, ಸಲಹೆ ಸ್ವೀಕರಿಸಿದರು. ಅಮೆರಿಕಾ ಅಧ್ಯಕ್ಷರ ಅನುಕೂಲಕ್ಕಾಗಿ ಇಸ್ರೇಲಿನಲ್ಲಿ ಹಾಡಿ, ಕುಣಿದರು. ಕೆಲವೇ ದಿನಗಳ ಹಿಂದೆ ಅವರಿಬ್ಬರು ಭೇಟಿಯಾಗಿದ್ದರು. ಅದು (ಸಲಹೆ) ಕೆಲಸ ಮಾಡಿತು.” ಎಂದು ಎಫ್‌ಸ್ಟೀನ್‌ ಉಲ್ಲೇಖಿಸಿದ್ದಾನೆ.

ಎಫ್‌ಸ್ಟೀನನ ಲೈಂಗಿಕ ಅಪರಾಧಗಳಲ್ಲಿ ಮೋದಿಯವರು ಪಾಲುದಾರನಾದ ಬಗ್ಗೆ, ಅಥವಾ ಆತನ ದ್ವೀಪಕ್ಕೆ ಭೇಟಿನೀಡಿದ್ದ ಬಗ್ಗೆ ಅಥವಾ ಮತ್ತಾವುದೇ ಬಗೆಯ ಅಪರಾಧದಲ್ಲಿ ಭಾಗಿಯಾದ ಬಗ್ಗೆ ಸದ್ಯ ಬಿಡುಗಡೆಯಾಗಿರುವ ಫೈಲ್‌ಗಳಲ್ಲಿ ಮೋದಿಯವರ ಮೇಲೆ ಆರೋಪಗಳಿಲ್ಲ. ಆದರೆ ಮೊದಲೇ ಹೇಳಿದಂತೆ ಎಫ್‌ಸ್ಟೀನನ ಪಾತ್ರ ಕೇವಲ ತಲೆಹಿಡಿಯುವುದಕ್ಕೆ ಸೀಮಿತವಾದುದಲ್ಲ. ಅವನೊಬ್ಬ geopolitical fixer! ಅಂದರೆ ದೊಡ್ಡದೊಡ್ಡ ಡೀಲಿಂಗ್‌ಗಳನ್ನು Handle ಮಾಡುವ ಪ್ರಭಾವ ಆತನಿಗಿತ್ತು. ಎಫ್‌ಸ್ಟೀನ್‌ ತರಹದ ಒಬ್ಬ ಖಾಸಗಿ ವ್ಯಕ್ತಿ, ಅಪ್ರಾಪ್ತ ಹೆಣ್ಣುಮಕ್ಕಳನ್ನು ಶೋಷಿಸಿ ಡೀಲಿಂಗ್‌ಗಳನ್ನು fecilitate ಮಾಡ್ತಾನೆ ಅಂದ್ರೆ, ಅಂತಹ ಒಪ್ಪಂದಗಳು ಎಷ್ಟರಮಟ್ಟಿಗೆ ನಿಯಮಬದ್ಧವಾಗಿರಬಲ್ಲವು? ನೀವೇ ಯೋಚಿಸಿ. ಉಭಯ ದೇಶ ಅಥವಾ ವ್ಯಕ್ತಿಗಳ ಹಿತಾಸಕ್ತಿಗಿಂತ ಯಾರೋ ಒಬ್ಬರ ಲಾಭಕೋರತನಕ್ಕೆ ಅಂತಹ ಒಪ್ಪಂದಗಳು ಬಲಿಯಾಗಿರುವ ಸಾಧ್ಯತೆಯೇ ಹೆಚ್ಚು.

ಈ ಆಯಾಮದಿಂದ ನೋಡಿದಾಗ, ಎಫ್‌ಸ್ಟೀನನ ಮೇಲ್‌ನಲ್ಲಿ ಮೋದಿಯವರ ಉಲ್ಲೇಖ ಗಮನಾರ್ಹವಾಗುತ್ತದೆ. ಯಾಕೆಂದರೆ, ಆ ಮೇಲ್‌ ಕಳುಹಿಸಲ್ಪಟ್ಟ ಆಸುಪಾಸಿನಲ್ಲಿ, ಅಂದರೆ 2017ರ ಜುಲೈ 4 ರಿಂದ 6ರ ನಡುವೆ ಮೋದಿ ಇಸ್ರೇಲ್‌ಗೆ ಭೇಟಿನೀಡಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಅದಕ್ಕೂ ಒಂದು ವಾರ ಹಿಂದೆ ಜೂನ್‌ 25-26ರಂದು ಅಮೆರಿಕಾಗೆ ಭೇಟಿ ನೀಡಿ, ಅಧ್ಯಕ್ಷ ಟ್ರಂಪ್‌ ಜೊತೆ ಮೊದಲ ಸಲ ಮುಖಾಮುಖಿಯಾಗಿದ್ದರು. ಅಂದರೆ, ಅಮೆರಿಕಾಗೆ ಭೇಟಿ ನೀಡಿದ್ದಾಗ, ತನ್ನ ಪರವಾಗಿ ಇಸ್ರೇಲ್‌ಗೆ ಹೋಗಿ ಅನುಕೂಲಕರವಾಗಿ ವ್ಯವಹರಿಸುವಂತೆ ಟ್ರಂಪ್‌ ಮೋದಿಗೆ ‘ಸಲಹೆ’ ನೀಡಿದ್ದರೇ? ಆ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದ ಮೋದಿಯವರು ಇಸ್ರೇಲ್‌ಗೆ ತೆರಳಿ ಟ್ರಂಪ್‌ಗೆ ಅನುಕೂಲವಾಗುವಂತೆ ವ್ಯವಹರಿಸಿದರೇ (ಎಫ್‌ಸ್ಟೀನ್‌ ಭಾಷೆಯಲ್ಲಿ ಹಾಡಿ, ಕುಣಿಯುವುದು)? ಎಂಬ ಅನುಮಾನಗಳನ್ನು ಆ ಮೇಲ್‌ ಮೂಡಿಸುತ್ತದೆ.

ಈ ಪ್ರಶ್ನೆ ಯಾಕೆ ಮುಖ್ಯವಾಗುತ್ತದೆಂದರೆ 1948ರಲ್ಲಿ ಇಸ್ರೇಲ್‌ ತನ್ನನ್ನು ಸ್ವತಂತ್ರ ದೇಶವೆಂದು ಘೋಷಿಸಿಕೊಂಡಾಗಿನಿಂದ ಭಾರತ ಇಸ್ರೇಲ್‌ನಿಂದ ಅಂತರವನ್ನು ಕಾಯ್ದುಕೊಂಡು ಬಂದಿತ್ತು. ಭಾರತದ ನಿಲುವು ಪ್ಯಾಲಿಸ್ತೇನ್‌ ಪರವಾಗಿತ್ತು. ಸ್ವತಃ ತಮ್ಮ ಆಪ್ತ ವಿಜ್ಞಾನಿ ಐನ್‌ಸ್ಟೀನ್‌ ಪತ್ರ ಬರೆದರೂ, ಇಸ್ರೇಲ್‌ಗೆ ಭೇಟಿ ನೀಡಲು ಅಂದಿನ ಭಾರತ ಪ್ರಧಾನಿ ನೆಹರೂ ನಿರಾಕರಿಸಿದ್ದರು. ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ನಿರ್ಣಯದ ವಿರುದ್ಧ ಮತಚಲಾಯಿಸಿದ 13 ದೇಶಗಳ ಪೈಕಿ ಭಾರತವೂ ಒಂದಾಗಿತ್ತು. ಆದರೆ 1992ರಲ್ಲಿ ಇಸ್ರೇಲ್‌ ಜೊತೆಗಿನ ಪೂರ್ಣಪ್ರಮಾಣದ ಬಾಂಧವ್ಯಕ್ಕೆ ಭಾರತ ಮುಂದಾಯಿತು. ಆಗಲು ಕೂಡಾ ಪ್ಯಾಲಿಸ್ತೇನ್‌ನ ಅಸ್ತಿತ್ವದ ಪ್ರತಿಪಾದನೆಯಿಂದ ಹಿಂದೆ ಸರಿದಿರಲಿಲ್ಲ. ಎನ್‌ಡಿಎ ಮೈತ್ರಿಕೂಟದ ವಾಜಪೇಯಿಯವರ ಅವಧಿಯಲ್ಲಿ (2003) ಇಸ್ರೇಲಿನ ಪ್ರಧಾನಿ ಏರಿಯಲ್‌ ಶೆರೋನ್‌ ಅವರು ಮೊಟ್ಟಮೊದಲ ಬಾರಿಗೆ ಭಾರತಕ್ಕೆ ಭೇಡಿ ನೀಡಿದ್ದರಾದರೂ, ವಾಜಪೇಯಿ ಇಸ್ರೇಲಿಗೆ ಭೇಟಿ ನೀಡಿರಲಿಲ್ಲ. ಯಾಕೆಂದರೆ, ವಾಜಪೇಯಿಯವರು ಇಸ್ರೇಲಿನ ಅತಿಕ್ರಮಣದ ವಿರುದ್ಧದ ನಿಲುವು ಹೊಂದಿದ್ದವರು. ಉಭಯ ದೇಶಗಳ ನಡುವೆ ವಹಿವಾಟು ವೃದ್ಧಿಗೆ ಅಟಲ್‌ ಆಸಕ್ತಿ ತೋರಿದ್ದೇನೊ ನಿಜ. ಆದರೆ ಇಸ್ರೇಲ್‌ ಪ್ರಧಾನಿ ಆಹ್ವಾನಿಸಿದರೂ, ಅವರು ಭೇಟಿಗೆ ಮುಂದಾಗದಿದ್ದುದು, ಪ್ಯಾಲಿಸ್ತೇನ್‌ ಭಾರತದ ನಿಲುವನ್ನು ದೃಢೀಕರಿಸುವಂತಿತ್ತು.

ಆದರೆ 2017ರಲ್ಲಿ, ಅಮೆರಿಕಾಗೆ ಹೋಗಿ ಟ್ರಂಪ್‌ರನ್ನು ಭೇಟಿ ಮಾಡಿ ಬಂದ ನಂತರ, ಭಾರತದ ನಿಲುವನ್ನು ತುಂಡರಿಸುವಂತೆ ಮೋದಿಯವರು ಇಸ್ರೇಲಿಗೆ ಭೇಟಿ ನೀಡುತ್ತಾರೆ. ಭಾರತದ ಪ್ರಧಾನಿಯೊಬ್ಬರ ಮೊಟ್ಟಮೊದಲ ಭೇಟಿ ಅದು. ಯಾಕೆ?

ಉಭಯ ದೇಶಗಳ ನಡುವೆ ವ್ಯಾಪಾರ, ವಹಿವಾಟು, ತಂತ್ರಜ್ಞಾನಗಳ ಹಂಚಿಕೆಯಾಗಲು ಇಂತಹ ರಾಜತಾಂತ್ರಿಕ ಭೇಟಿಗಳು ಅತಿ ಅವಶ್ಯಕ. ಅದರಲ್ಲಿ ಎರಡು ಮಾತಿಲ್ಲ. ಹಾಗಂತಲೇ ದೇಶ ಮೋದಿಯವರ ಭೇಟಿಗಳನ್ನು ಆಶಾದಾಯಕ ನೋಟದಲ್ಲಿ ಕಾಣುತ್ತಿತ್ತು. ಆದರೆ ಯಾವಾಗ ಎಫ್‌ಸ್ಟೀನನ ಮೇಲ್‌ನಲ್ಲಿ ಈ ಭೇಟಿ, ಬೇರೆ ಯಾರದೋ ಸಲಹೆ ಮತ್ತು ಬೇರೆ ಯಾರದೋ (ಟ್ರಂಪ್‌) ಅನುಕೂಲಕ್ಕಾಗಿ ನೀಡಿದ್ದಾಗಿತ್ತು ಎಂದು ಉಲ್ಲೇಖಿಸಿರುವುದು ಬಯಲಾಯ್ತೋ, ಆಗ ಸಹಜವಾಗಿಯೇ ಪ್ರಶ್ನೆಗಳು ಪುಟಿದೇಳಬೇಕಾಗುತ್ತೆ. ಭಾರತದ ಹಿತಾಸಕ್ತಿಗೋಸ್ಕರ ವಿದೇಶ ಪ್ರವಾಸ, ವ್ಯಾಪಾರ-ಒಪ್ಪಂದ ಮಾಡಿಕೊಳ್ಳಬೇಕಿದ್ದ ನಮ್ಮ ಪ್ರಧಾನಿಯವರು ಮತ್ತ್ಯಾರದೋ ಅನುಕೂಲಕ್ಕಾಗಿ ವಿದೇಶ ಪ್ರವಾಸ ಮಾಡುತ್ತಾರೆಂದರೆ, ದೇಶದ ಹಿತಾಸಕ್ತಿಯ ಬಗ್ಗೆ ಅವರಿಗೆ ಕಾಳಜಿ ಎಂತದ್ದಿರಬೇಡ? ಬಹಿರಂಗಗೊಳ್ಳದಿರುವ ಇಂತಹ ಇನ್ನೆಷ್ಟು ರಾಜಿಗಳಿಗೆ ಅವರು ಈಡಾಗಿರಬೇಡ?

ಕ್ಷುಲ್ಲಕ ಅಪರಾಧಿಯೇ?

ಒಬ್ಬ ಕ್ರಿಮಿನಲ್‌ ಆರೋಪಿಯ ಖಾಸಗಿ ಮೇಲ್‌ಗೆ ನಾವು ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ, ಆತ ಗಣ್ಯರ ಹೆಸರು ಬಳಸಿಕೊಳ್ಳುವ name dropper ಅಷ್ಟೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಣೆ ನೀಡಿದೆ. ಆದರೆ ಎಫ್‌ಸ್ಟೀನನ ಪ್ರಭಾವಿ ಸಂಪರ್ಕಗಳು, ವೀಡಿಯೊ ಪುರಾವೆಗಳು, ಫೋಟೊ ಸಾಕ್ಷ್ಯಗಳನ್ನು ನೋಡಿದಾಗ ಆತನನ್ನು ಅಷ್ಟು ಕ್ಷುಲ್ಲಕ ಆರೋಪಿಯಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಒಂದೊಮ್ಮೆ ಆತ ಅಷ್ಟು ಕ್ಷುಲ್ಲಕವಾಗಿದ್ದರೆ ಅಮೆರಿಕಾ ಯಾಕೆ ಇಷ್ಟು ಗಂಭೀರವಾಗಿ ಅವನ ಕಡತಗಳನ್ನು ಬಿಡುಗಡೆ ಮಾಡುತ್ತಿತ್ತು. ನೆನಪಿರಲಿ, ಎಫ್‌ಸ್ಟೀನ್‌ ಫೈಲ್‌ಗಳನ್ನು ಬಹಿರಂಗಗೊಳಿಸಬೇಕು ಅನ್ನೋದು 2024ರ ಅಮೆರಿಕೆಯ ಅಧ್ಯಕ್ಷೀಯ ಚುನಾವಣಾ ವಿಷಯಗಳಲ್ಲಿ ಒಂದಾಗಿತ್ತು. ತಾನು ಚುನಾಯಿತನಾದರೆ, ಎಫ್‌ಸ್ಟೀನ್‌ ಫೈಲುಗಳನ್ನು ಬಿಡುಗಡೆ ಮಾಡುವುದಾಗಿ ಟ್ರಂಪ್‌ ಚುನಾವಣಾ ಪ್ರಚಾರಗಳಲ್ಲಿ ಭಾಷಣ ಮಾಡುತ್ತಿದ್ದರು. ಆ ಆಶ್ವಾಸನೆಯ ಒತ್ತಡಕ್ಕೆ ಒಳಗಾಗಿಯೇ, ಸ್ವತಃ ತನ್ನ ಸಾಕ್ಷ್ಯಗಳೆ ಇರುವ ಎಫ್‌ಸ್ಟೀನ್‌ ಸತ್ಯಗಳನ್ನು ಟ್ರಂಪ್‌ ಬಿಡುಗಡೆ ಮಾಡಬೇಕಾಯ್ತು. ಕೇಂದ್ರ ಸರ್ಕಾರ ಹೇಳುವಂತೆ ಆತ ಯಕಶ್ಚಿತ್‌ name dropper, ಅಥವಾ ಕ್ಷುಲ್ಲಕ ಕ್ರಿಮಿನಲ್‌ ಆಗಿದ್ದರೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ವಿಷಯವಾಗುತ್ತಿದ್ದನೇ?

ಇದನ್ನೂ ಓದಿ- ಎಫ್‌ಸ್ಟೀನ್‌ ಫೈಲ್ಸ್‌ ಭಾಗ-1 | ಸತ್ಯಗಳ ಸಂತೆಯಲ್ಲಿ ಬ್ಲ್ಯಾಕ್‌ಮೇಲ್‌ ದಂಧೆಗಿಳಿಯಿತೇ ಅಮೆರಿಕಾ?

ಇನ್ನು, ಇಸ್ರೇಲ್‌ ಭೇಟಿಯ ಕುರಿತು ಒಂದು ಮೇಲ್‌ನಲ್ಲಿ ಉಲ್ಲೇಖವಾಗಿದ್ದು ಬಿಟ್ಟರೆ ಮೋದಿಯವರ ಬಗ್ಗೆ ಯಾವುದೇ ಲೈಂಗಿಕ ಅಪರಾಧದ ಅಥವಾ ಕಾನೂನುಬಾಹಿರ ಒಪ್ಪಂದಗಳ ಆರೋಪಗಳು ಎಫ್‌ಸ್ಟೀನ್‌ ಫೈಲ್‌ನಲ್ಲಿ ಕೇಳಿಬಂದಿಲ್ಲ ಎಂದು ಮೋದಿಯವರ ಸಮರ್ಥಕರು ವಾದಿಸುತ್ತಿದ್ದಾರೆ. ಆದರೆ ನೆನಪಿರಲಿ, ಈಗ ಅಮೆರಿಕಾ ಬಿಡುಗಡೆ ಮಾಡಿರೋದು ಕೇವಲ ಅರ್ಧದಷ್ಟು ಎಫ್‌ಸ್ಟೀನ್‌ ಕಡತಗಳನ್ನು ಮಾತ್ರ. ತನ್ನ ಬಳಿ 60 ಲಕ್ಷದಷ್ಟು ಎಫ್‌ಸ್ಟೀನ್‌ ಕಡತಗಳಿವೆ ಎಂದು ಹೇಳಿಕೊಂಡಿದ್ದ ಅಮೆರಿಕಾ, ಸುಮಾರು 25 ಲಕ್ಷಕ್ಕೂ ಹೆಚ್ಚು ಕಡತಗಳನ್ನು ಸಂತ್ರಸ್ತೆಯರ ಗೌಪ್ಯತೆ ನೆಪದಲ್ಲಿ ಮುಚ್ಚಿಟ್ಟುಕೊಂಡಿದೆ. ಅವುಗಳಲ್ಲಿ ಪ್ರಪಂಚದ ಘಟಾನುಘಟಿ ನಾಯಕರ ರಹಸ್ಯಗಳಿದ್ದು, ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಲು ಅಮೆರಿಕಾ ಮುಂದಾಗಿದೆ ಎಂಬ ಆರೋಪಗಳು ಕೇಳಿಬರ್‍ತಿವೆ. ಸ್ವತಃ ಟ್ರಂಪ್‌ನ ಘನಗಂಭೀರ ಸಾಕ್ಷ್ಯಗಳನ್ನೂ ಮುಚ್ಚಿಟ್ಟು, ಗಂಭೀರವಲ್ಲದ ಸಾಕ್ಷ್ಯಗಳನ್ನಷ್ಟೇ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಅಮೆರಿಕಾದಲ್ಲೆ ಕೇಳಿಬರುತ್ತಿದೆ. ಹಾಗಾದ್ರೆ ಆ ಮುಚ್ಚಿಟ್ಟುಕೊಂಡ ಫೈಲ್‌ಗಳಲ್ಲಿ ಮೋದಿಯವರಿಗೆ ಸಂಬಂಧಿಸಿದ ಇನ್ನಷ್ಟು ರಹಸ್ಯಗಳೂ ಇವೆಯಾ? ಈಗ ಬಿಡುಗಡೆ ಮಾಡಿರೋದು ಮೋದಿಯವರನ್ನು ಬೆದರಿಸಲು ಅಮೆರಿಕಾ ಬಿಡುಗಡೆ ಮಾಡಿದ ಕೇವಲ ಸ್ಯಾಂಪಲ್‌ ಕಡತವೇ? ಆ ಆತಂಕದಿಂದಲೇ ಮೋದಿಯವರು ದಿಢೀರ್‍‌ ಅಮೆರಿಕಾ ಜೊತೆಗಿನ ಒಪ್ಪಂದಕ್ಕೆ ಒಪ್ಪಿಕೊಂಡ್ರಾ? ರಷ್ಯಾದಿಂದ ಕಡಿಮೆ ಬೆಲೆಯ ತೈಲ ಖರೀದಿ ನಿಲ್ಲಿಸಿ, ಟ್ರಂಪ್‌ ಬಯಸಿದಂತೆ ದುಬಾರಿ ವೆನಿಜುವೆಲಾ ತೈಲ ಖರೀದಿಗೆ ಮೋದಿಯವರು ಮುಂದಾಗಿರೋದು ಇದೇ ಕಾರಣಕ್ಕಾ? ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ಗೋಚರಿಸುತ್ತಿಲ್ಲ.

ಎಫ್‌ಸ್ಟೀನ್‌ ಫೈಲ್‌ನಲ್ಲಿ ಮೋದಿಯವರ ಪಾತ್ರವನ್ನು ಅನುಮಾನಿಸಲು ಅಮೆರಿಕಾ ಮುಚ್ಚಿಟ್ಟುಕೊಂಡಿರುವ ರಹಸ್ಯ ಕಡತಗಳು ಮಾತ್ರ ಕಾರಣವಲ್ಲ. ಮೋದಿಯವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ, ಅವರ ಆಪ್ತರಾಗಿದ್ದ ಮತ್ತು ಕೇಂದ್ರ ಸಚಿವರೂ ಆದ ಹರ್ದೀಪ್‌ ಸಿಂಗ್‌ ಪುರಿಯವರಿಗೆ ಎಫ್‌ಸ್ಟೀನ್‌ನ ಜೊತೆ ಇದ್ದ ನಿಕಟ ಸಂಪರ್ಕ; ಹಾಗೂ ಮೋದಿಯವರ ಉದ್ಯಮಿ ಮಿತ್ರರಲ್ಲಿ ಒಬ್ಬರಾದ ಅನಿಲ್‌ ಅಂಬಾನಿ `ಮೋದಿ’ ಹೆಸರನ್ನು ಬಳಸಿಕೊಂಡು ಅಮೆರಿಕಾ-ಫ್ರಾನ್ಸ್‌ನಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಸಂಗತಿಗಳು ಕೂಡಾ ಮೋದಿ ಮತ್ತು ಎಫ್‌ಸ್ಟೀನ್‌ ನಡುವಿನ ನಂಟಿನ ಬಗ್ಗೆ ಅನುಮಾನ ಹುಟ್ಟಿಸುತ್ತವೆ. ಆ ವಿವರವನ್ನು ಮುಂದಿನ ಭಾಗದಲ್ಲಿ ನೋಡೋಣ….

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಜೆಫ್ರಿ ಎಪ್‌ ಸ್ಟೀನ್‌ ಮತ್ತು ನೋಮ್‌ ಚೋಮ್‌ ಸ್ಕೀ ನಡುವಣ ಈಮೇಲ್‌ ಗಳು!

More articles

Latest article

Most read