ಸ್ಯಾಂಕಿ ಕೆರೆಯಲ್ಲಿ ಮೀನುಗಳ ಮಾರಣಹೋಮ ತಡೆಯಲು ಪರಿಸರವಾದಿಗಳ ಆಗ್ರಹ

ಬೆಂಗಳೂರು : ನಗರದ  ಸ್ಯಾಂಕಿ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಘಟನೆ ಮರುಕಳುಹಿಸುತ್ತಲೇ ಇದೆ. ಇದೀಗ ಮತ್ತೆ ಕಲುಷಿತ ನೀರು ಸೇರ್ಪಡೆಗೊಂಡು ಮೀನುಗಳು ಸಾವನ್ನಪ್ಪುತ್ತಿವೆ. 

ಕೊಳಚೆ ನೀರು  ಸದಾಶಿವನಗರ ಪ್ರದೇಶದಿಂದ ಕೆರೆಗೆ ಕೊಳಚೆ ನೀರು ಹರಿದು ಬರುವುದು ಮೀನುಗಳ ಸಾವಿಗೆ ಮುಖ್ಯ ಕಾರಣ ಎನ್ನಲಾಗಿದೆ. ಅಲ್ಲದೇ, ಕೆರೆಯಲ್ಲಿ ಹೆಚ್ಚಾಗುತ್ತಿರುವ ಮೀನುಗಳಿಗೆ  ಆಮ್ಲಜನಕದ ಕೊರತೆ, ಕೆರೆಯ ನೀರಿನಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗುವುದು ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದ ಮೀನುಗಳು ಉಸಿರುಗಟ್ಟಿ ಸಾಯುತ್ತಿವೆ ಎಂದು ಹೇಳಲಾಗುತ್ತಿದೆ.

ಸ್ಯಾಂಕಿ ಕೆರೆಯಲ್ಲಿ ನೀರು ಬತ್ತಿಹೋಗುತ್ತಿರುವ ಜೊತೆಗೆ  ದುರ್ನಾತ ಹೆಚ್ಚಾಗುತ್ತಿದೆ. ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ನಾತ ಬೀರುತ್ತಿದೆ, ಇದು ಸ್ಥಳೀಯ ನಡಿಗೆದಾರರು  ಮತ್ತು ನಿವಾಸಿಗಳಿಗೆ ತೊಂದರೆ ಉಂಟುಮಾಡಿದೆ.
ಈ ಬಗ್ಗೆ ಜಿಬಿಎ ಹಾಗೂ ಜಲಮಂಡಳಿ  ನಿರ್ಲಕ್ಷಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು   ಸೂಕ್ತ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೆರೆಯ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಮತ್ತು ಮಾಲಿನ್ಯವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.
ಬೇಸಿಗೆ ಆಗಿರುವುದರಿಂದ ಕೆರೆಯ ನೀರು ಕೂಡ ಬತ್ತುತ್ತಿದ್ದು, ಕೆರೆಯನ್ನು ನವೀಕರಣಗೊಳಿಸುವಂತೆ ಹಾಗೂ ಕೆರೆಗೆ ಕೊಳಚೆ ನೀರು ಹರಿಯುವುದನ್ನು ಸಂಪೂರ್ಣವಾಗಿ ತಡೆಯಬೇಕು ಮತ್ತು ಕೆರೆಯನ್ನು ಸ್ವಚ್ಛಗೊಳಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ. 

More articles

Latest article

Most read