ವ್ಯಕ್ತಿಯನ್ನು ಸೊಂಡಿಲಿಂದ ಎತ್ತಿ ಬಿಸಾಡಿದ ಆನೆ: ತೀವ್ರ ಸ್ವರೂಪದ ಗಾಯ

ಸಕಲೇಶಪುರ: ಅಂಗಡಿಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿ ಆತನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಘಟನೆ ವಡೂರು ಗ್ರಾಮದಲ್ಲಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿರುವ ಮಹೇಶ್ (47) ಅವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಅಂಗಡಿಯಿಂದ ಸಾಮಗ್ರಿ ತರಲು ಮಹೇಶ್ ತೆರಳುತ್ತಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದೆ.

ಮಹೇಶ್ ಕಿರುಚಾಟ ಕೇಳಿ ಓಡಿ ಬಂದ ಗ್ರಾಮಸ್ಥರು ಆನೆಯನ್ನು ಓಡಿಸಿದ್ದಾರೆ. ಗ್ರಾಮಸ್ಥರು ಬಂದನಂತರ ಆನೆ ಕಾಫಿ ತೋಟದೊಳಗೆ ಹೋಗಿದೆ.

ಗಾಯಾಳು ಮಹೇಶ್‌ಗೆ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

More articles

Latest article

Most read