ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆ ಮತ್ತು ಮತದಾನ ಮಹತ್ವವಾದವು – ಡಾ. ಎಸ್ ಪಿ ಗೌಡರ್

ರಾಣೆ ಬೆನ್ನೂರು : ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆ ಮತ್ತು ಮತದಾನ ಎರಡೂ ಮಹತ್ವವಾದವು .ಇವುಗಳ ಅರಿವು ವಿದ್ಯಾರ್ಥಿಗಳಿಗಿರಬೇಕೆಂದು ಪ್ರಾಂಶುಪಾಲ ಡಾ. ಎಸ್ ಪಿ ಗೌಡರ್ ಹೇಳಿದರು.

ಸುಣಕಲ್ಲಬಿದರಿಯ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಚುನಾವಣೆಯ ಹಬ್ಬವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಚುನಾವಣೆಯ ಬಗ್ಗೆ,ಮತದಾನದ ಬಗ್ಗೆ ಅನೇಕ ರೀತಿಯ ಚರ್ಚೆಗಳು ಆಗುತ್ತಿವೆ. ಮತ ಚಲಾಯಿಸುವುದು ನಮ್ಮ ಕರ್ತವ್ಯ ಹಾಗೂ ಅದನ್ನು ಸರಿಯಾದವರಿಗೆ ನೀಡುವುದನ್ನೂ ತಿಳಿಯಬೇಕೆಂದು ಹೇಳಿದರು.

ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ರವಿ ಎಂ., ಪ್ರಾಧ್ಯಾಪಕರಾದ ಬಿ.ಕೆ. ರೇವಣಸಿದ್ಧಪ್ಪ, ಅಂಬಿಕಾ ಹೊಸಮನಿ, ಕೆ.ಬಿ. ಮಂಜುನಾಥ, ಅವರು ಚುನಾವಣೆಯ ಕಾರ್ಯಗಳನ್ನು ನಡೆಸಿಕೊಟ್ಟರು.

ಈ ಚುನಾವಣೆಯಲ್ಲಿ ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾಗಿ ಅಂತಿಮ ಬಿ.ಎ. ವಿದ್ಯಾರ್ಥಿ ಭೀಮಣ್ಣ ಅವಡ್ ಖಾನ್ ಆಯ್ಕೆಯಾದರು. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹಾಲಕ್ಷ್ಮಿ ದೇವಗಿರಿಮಠ, ಕ್ರೀಡಾ ಕಾರ್ಯದರ್ಶಿಯಾಗಿ ತೃತೀಯ ಬಿ.ಕಾಂ. ವಿದ್ಯಾರ್ಥಿ ರೇವಣೇಶ, ಮಹಿಳಾ ಪ್ರತಿನಿಧಿಯಾಗಿ ಪಲ್ಲವಿ ಮಾರೇರ್, ವಾಚನಾಲಯ ಕಾರ್ಯದರ್ಶಿಯಾಗಿ ಉದಯ ಕುಮಾರ್, ಶಿಸ್ತು ಮತ್ತು ಸ್ವಚ್ಚತಾ ಕಾರ್ಯದರ್ಶಿಯಾಗಿ ಕಲ್ಪನಾ ಬೀರಜ್ಜನವರ್, ಕ್ರೀಡಾ ಸಹ ಕಾರ್ಯದರ್ಶಿಯಾಗಿ ಪ್ರಮೋದ್ ಎಸ್ ಬಡಿಗೇರ್, ಸಾಂಸ್ಕೃತಿಕ ಸಹ ಕಾರ್ಯದರ್ಶಿಯಾಗಿ ವಿನಾಯಕ ಕೋಗನೂರ ಆಯ್ಕೆಯಾದರು.

More articles

Latest article

Most read