ಬೆಂಗಳೂರಿನ 5 ಮಹಾನಗರ ಪಾಲಿಕೆಗಳಿಗೆ 2026ರ ಜೂನ್ ತಿಂಗಳಲ್ಲಿ ಚುನಾವಣೆ; ಮಹತ್ವದ ಸುಳಿವು

Most read

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ರಚಿಸಿಲಾಗಿರುವ ಐದು ಮಹಾನಗರ ಪಾಲಿಕೆಗಳಿಗೆ 2026ರ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜಿಬಿಎ ಸಿದ್ದತೆಗಳನ್ನು ಆರಂಭಿಸಿದೆ. ಜಿಬಿಎ ಹಿರಿಯ ಐಎಸೆಸ್‌ ಅಧಿಕಾರಿಯೊಬ್ಬರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.  

2024ರ ಮೇ 15ರ ದಿಂದ ಅಸಿತ್ವಕ್ಕೆ ಬಂದಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಕಾಯಿದೆ-2024,ರ ಅಡಿಯಲ್ಲಿ ಅದಿಕೃತವಾಗಿ 2025ರ ಸೆಪ್ಟಂಬರ್‌ 2 ರಂದು ಐದು ಪಾಲಿಕೆಗಳನ್ನು ರಚಿಸಲಾಗಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಪಾಲಿಕೆಗಳು ಈಗಾಗಲೇ ಕಾರ್ಯಾರಂಭ ಮಾಡಿದ್ದು, ಪ್ರತೀ ಪಾಲಿಕೆಗೆ ಆಯುಕ್ತರು ಸೇರಿದಂತೆ ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಈ ಹಿಂದೆ ಅಸಿತ್ವದಲ್ಲಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ 2015ರ ಆಗಸ್ಟ್‌ ನಲ್ಲಿ ನಡೆದಿದ್ದೇ ಕೊನೆಯ ಚುನಾವಣೆ. 2020 ರ ಸೆಪ್ಟಂಬರ್‌ ನಲ್ಲಿ ಮತ್ತೆ ಚುನಾಣೆ ನಡೆಯಬೇಕಿತ್ತಾದರೂ ವಿವಿಧ ಕಾರಣಗಳಿಗಾಗಿ ಚುನಾವಣೆಯನ್ನು ಪ್ರತಿ ಸರ್ಕಾರವೂ ಮುಂದೂಡುತ್ತಾ ಬಂದಿತ್ತು. ಈ ಅವಧಿಯಲ್ಲಿ ಅಧಿಕಾರಿಗಳೇ ಆಡಳಿತ ನಡೆಸುತ್ತಾ ಬಂದಿದ್ದಾರೆ.

ಪಾಲಿಕೆಗಳಿಗೆ ಚುನಾವಣೆ ನಡೆಸಲು ವಾರ್ಡ್‌ ಪುನರ್‌ ವಿಂಗಡಣೆ ನಡೆಯುತ್ತಿದ್ದು ಈ ವಾರದಲ್ಲಿ ಪೂರ್ಣಗೊಳ್ಳಲಿದೆ. ನಂತರ ನವಂಬರ್‌ ನಲ್ಲಿ ಮೀಸಲು ಕ್ಷೇತ್ರಗಳನ್ನು ನಿಗಧಿಪಡಿಸಲಾಗುತ್ತದೆ. ಆ ನಂತರ ಚುನಾವಣಾಪೂರ್ವ  ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸಮಯ ಬೇಕಾಗುತ್ತದೆ ಎಂದು  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಪ್ರಿಲ್‌ ಒಳಗಾಗಿ ಇಡೀ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದ್ದು ಬಹುಶಃ ಜೂನ್‌  ನಲ್ಲಿ ಚುನಾವಣೆ ನಡೆಯಲಿರುವ ಸಾಧ್ಯತೆಗಳಿವೆ. ಆದಷ್ಟೂ ಬೇಗನೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಚುನಾವಣೆ ನಡೆಸಲು ಉತ್ಸುಕರಾಗಿದ್ದಾರೆ. ಎಂದು ಆ ಅಧಿಕಾರಿ ತಿಳಿಸಿದ್ದಾರೆ. ಫೆಬ್ರವರಿ 2026 ರೊಳಗೆ ಚುನಾವಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ನಲ್ಲಿ ಅಫಿಡೆವಿಟ್‌ ಸಲ್ಲಿಸಲಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕಾಂಗ್ರೆಸ್‌ ನಲ್ಲಿ ಈಗಾಗಲೇ ಸಿದತೆಗಳು ಆರಂಭವಾಗಿವೆ. ಸಿದ್ದತೆಗಳನ್ನು ಕುರಿತು ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್‌ ಅವರು ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರಿನ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಪರಾಭವಗೊಂಡ ಅಭ್ಯರ್ಥಿಗಳು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರೂ ಪಕ್ಷಗಳ ಆಕಾಂಕ್ಷಿಗಳು ಈಗಾಗಲೇ ಪರೋಕ್ಷ ಪ್ರಚಾರವನ್ನೇ ಆರಂಭಿಸಿದ್ದು ಅಲ್ಲಲ್ಲಿ ಕಟೌಟ್‌ ಬ್ಯಾನರ್‌ ಗಳನ್ನು ಕಾಣಬಹುದಾಗಿದೆ.  ಆಕಾಂಕ್ಷಿಗಳು ಈಗಾಗಲೇ ತಮ್ಮ ತಮ್ಮ ಪಕ್ಷಗಳ ಮುಖಂಡರನ್ನು ಓಲೈಸುವಲ್ಲಿ ನಿರತರಾಗಿದ್ದಾರೆ.

ಒಟ್ಟಿನಲ್ಲಿ 2026ರ ಜೂನ್ ಜುಲೈ ವೇಳೆಗೆ ಬೆಂಗಳೂರು ಮಹಾನಗರ ಐವರು ಮೇಯರ್‌ ಸೇರದಂತೆ 400-500 ಪುರಪಿತೃಗಳನ್ನು ಕಾಣಲಿದೆ.

More articles

Latest article