ಕೋಲಾರ: ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಜಿಲ್ಲಾ ಸಹಕಾರ ಸಂಘದ ಚುನಾವಣೆಗೆ ಕೊನೆಗೂ ಮಹೂರ್ತ ನಿಗಧಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ. ರವಿ ಆದೇಶ ಹೊರಡಿಸಿದ್ದಾರೆ. ಅಧಿಸೂಚನೆ ವೇಳಾಪಟ್ಟಿ ಪ್ರಕಾರ ಮೇ. 28 ರಂದು ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತು ಜೂನ್ 25 ರಂದು ಕೋಮಲ್ ಚುನಾವಣೆ ನಡೆಯಲಿದೆ. ಡಿಸಿಸಿ ಬ್ಯಾಂಕ್ ಗೆ ನಿಗಧಿಯಾಗಿರುವ ಚುನಾವಣಾ ವೇಳಾಪಟ್ಟಿಯಂತೆ ಮೇ 12 ರಂದು ಚುನಾವಣಾ ಪ್ರಕ್ರಿಯೆ ಆರಂಭವಗಲಿದೆ. ಮೇ. 20 ರಂದು ನಾಮ ಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಮೇ. 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸಾತಿಗೆ ಮೇ. 23 ಅಂತಿಮ ದಿನವಾಗಿದ್ದು, ಚುನಾವಣೆ ಅನಿವಾರ್ಯವಾದಲ್ಲಿ ಮೇ 28 ಮತದಾನ ನಡಯಲಿದೆ ಹಾಗೂ ಅಂದೇ ಫಲಿತಾಂಶ ಘೋಷಣೆಯಾಗಲಿದೆ.