ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಇದುವರೆಗೆ ಜಾರಿ ನಿರ್ದೇಶನಾಲಯ (ಇಡಿ) ಯಾವುದೇ ನೋಟಿಸ್ ನೀಡಿಲ್ಲ.
ಈ ವಿಷಯವನ್ನು ಸ್ವತಃ ಸಚಿವ ಬೈರತಿ ಸುರೇಶ್ ಬೆಂಗಳೂರಿನಲ್ಲಿಂದು ಸ್ಪಷ್ಟಪಡಿಸಿದ್ದಾರೆ.
ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ಗೆ ಇಡಿ ನೋಟಿಸ್ ನೀಡಿದೆ. ಬೆಳಗ್ಗೆ ಹೆಬ್ಬಾಳದ ನಿವಾಸಕ್ಕೆ ತೆರಳಿದ ಇಡಿ ತಂಡ ನೋಟಿಸ್ ನೀಡಿದೆ. ಮುಡಾ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ನೋಟಿಸ್ ನಲ್ಲಿ ತಿಳಿಸಲಾಗಿದೆ. ನವರಾತ್ರಿ ಬಳಿಕ ವಿಚಾರಣೆಗೆ ಬರುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ನೋಟಿಸ್ ಪಡೆದಿರುವುದನ್ನು ಅಲ್ಲಗಳೆದ ಸಚಿವ ಬೈರತಿ ಸುರೇಶ್, ED ನೋಟಿಸ್ ಅನ್ನೋದೇ ಸುಳ್ಳು ಹೇಳಿದರಲ್ಲದೆ, ನನಗೆ ED ಯಾವ ನೋಟಿಸ್ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.