ಚನ್ನಪಟ್ಟಣ | ಎರಡು ಜಡೆ ಹಾಕದ ವಿದ್ಯಾರ್ಥಿನಿಯರ ಜಡೆಯನ್ನೇ ಕತ್ತರಿಸಿದ ಶಿಕ್ಷಕರು

ಶಾಲೆಯಲ್ಲಿ ಎರಡು ಜಡೆ ಹಾಕಿಕೊಂಡು ಬರಲಿಲ್ಲ ಶಿಸ್ತನ್ನು ಪಾಲಿಸುತ್ತಿಲ್ಲ ಎಂದು ಜಡೆಯನ್ನೇ ಕತ್ತರಿಸಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಅರಳಾಸಂದ್ರ ಗ್ರಾಮದ ಸರ್ಕಾರಿ ಫ್ರೌಡಶಾಲೆಯಲ್ಲಿ ನಡೆದಿದೆ.

ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲ ಎಂದು ಮೂವರು ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ ಹಾಕಲಾಗಿದೆ. 8ನೇ ತರಗತಿಯ ಮೂವರು ವಿದ್ಯಾರ್ಥಿಗಳ ಕೂದಲನ್ನು ಶಿಕ್ಷಕರು ಕತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜು. 26ರಂದು ಶುಕ್ರವಾರ ನಡೆದಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರವೂ ಈ ವಿಚಾರವಾಗಿ ಶಾಲೆಯಲ್ಲಿ ಬಿಗುವಿನ ವಾತಾವರಣವಿತ್ತೆಂದು ಹೇಳಲಾಗಿದ್ದು, ವಿಷಯ ತಿಳಿದ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಶಾಲೆಗೆ ಆಗಮಿಸಿ ಘಟನೆಯ ವಿವರಣೆಯನ್ನು ವಿದ್ಯಾರ್ಥಿನಿಯರಿಂದ ಹಾಗೂ ಅವರ ಸಹಪಾಠಿಗಳಿಂದ ಪಡೆದಿದ್ದಾರೆ.

ಶಾಲೆಯ ದೈಹಿಕ ಶಿಕ್ಷಕ ಶಿವಕುಮಾರ್, ಸಹ ಶಿಕ್ಷಕಿ ಪವಿತ್ರ ಅಮಾನುಷ ಕೃತ್ಯವೆಸಗಿದ್ದಾರೆ. ಶಿಕ್ಷಕರ ಕೃತ್ಯಕ್ಕೆ ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಲ್ಲದೆ, ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

More articles

Latest article

Most read