Tuesday, December 10, 2024

ಕೇಂದ್ರ ಸರ್ಕಾರದ 2024 ನೇ ಸಾಲಿನ ವಿಕಲಚೇತನರ ರಾಷ್ಟ್ರೀಯ ಪ್ರಶಸ್ತಿಗೆ ಡಾ.ಸುರೇಶ್ ಹನಗವಾಡಿ ಆಯ್ಕೆ

Most read

ಬೆಂಗಳೂರು: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಡಾ.ಸುರೇಶ್ ಹನಗವಾಡಿ ರವರು ಮೂಲತಃ ವೈದ್ಯರಾಗಿದ್ದು ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಫೆಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..
ಡಾ.ಸುರೇಶ್ ರವರು ಅತಿ ವಿರಳ, ದುಬಾರಿ ವೆಚ್ಚದ ಹಿಮೋಫಿಲಿಯಾ ನ್ಯೂನತೆ ಹೊಂದಿದ್ದು ಈ ಕಾಯಿಲೆ ಬಗ್ಗೆ ಸತತ 44 ವರ್ಷಗಳಿಂದ ಸಾಕಷ್ಟು ಅಧ್ಯಯನ ಮಾಡಿ ದೇಶ ವಿದೇಶಗಳ ಸುತ್ತಾಟ ಮಾಡಿ ತಮ್ಮ ಹಿಮೋಫಿಲಿಯಾ ಸಮುದಾಯದವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಸದರಿ ನ್ಯೂನತೆ ಬಗ್ಗೆ ಜಾಗೃತಿ ಮೂಡಿಸಿ ಅತಿ ದುಬಾರಿ ವೆಚ್ಚದ ಹಿಮೋಫಿಲಿಯಾ ಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ದೇಶಾದ್ಯಂತ ದೊರಕಲು ಕಾರಣಕರ್ತರಾಗಿದ್ದಾರೆ. ದೇಶದಲ್ಲಿಯೇ ಹಿಮೋಫಿಲಿಯಾ, ತಲಸ್ಸೇಮಿಯಾ ಸೇರಿದಂತೆ ವಿರಳ ರಕ್ತಸ್ರಾವ ರೋಗಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ಕೇಂದ್ರವನ್ನು ದಾವಣಗೆರೆ ನಗರದಲ್ಲಿ ಸ್ಥಾಪಿಸಿ ಅನ್ಯ ರಾಜ್ಯದ ರೋಗಿಗಳು ಒಳಗೊಂಡಂತೆ ಸಾವಿರಾರು ರೋಗಿಗಳಿಗೆ ಉತ್ಕೃಷ್ಟ ಗುಣಮಟ್ಟದ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಡಾ. ಸುರೇಶ್ ಹನಗವಾಡಿ ರವರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಸೇವೆಗೆ ಈಗಾಗಲೇ ಹತ್ತಾರು ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ಸಂದಿವೆ. ಅಂಗವಿಕಲತೆಯನ್ನು ತಡೆಗಟ್ಟುವ ಕಾರ್ಯದಲ್ಲಿ ನಿರತರಾಗಿರುವ ಹನಗವಾಡಿಯವರಿಗೆ ಕೇಂದ್ರ ಸರ್ಕಾರದ 2024 ನೆ ಸಾಲಿನ ವಿಕಲಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ವಿಕಲಚೇತನ ದಿನಾಚರಣೆಯಂದು ನೀಡಿ ಗೌರವಿಸಲಿದ್ದಾರೆ.

More articles

Latest article